ಗಂಡನ ಜೊತೆ ಬಟ್ಟೆ ಅಂಗಡಿ ವ್ಯಾಪಾರಕ್ಕೆ ಇಳಿದ ದೀಪಿಕಾ ದಾಸ್; ಚಿತ್ರ ರಂಗಕ್ಕೆ ಗುಡ್ ಬಾಯ್

 | 
Uu

ಇಷ್ಟು ದಿನ ಸಿಂಗಲ್ ಆಗಿದ್ದ ದೀಪಿಕಾ ದಾಸ್ ಈಗ ತನ್ನ ಅರ್ಧಾಂಗಿಯನ್ನ ಹುಡುಕಿಕೊಂಡಿದ್ದು, ಆ ಕರಿಮಣಿ ಮಾಲೀಕನನ್ನ ಪರಿಚಯಿಸಿದ್ದಾರೆ. ದೀಪಿಕಾ ದಾಸ್ ಮದುವೆ ವಿಡಿಯೋ ಫೋಟೋಗಳು ವೈರಲ್ ಆಗುತ್ತಿವೆ. ನಟಿ ದೀಪಿಕಾ ದಾಸ್‌ರದ್ದು ಸೀಕ್ರೆಟ್ ಮ್ಯಾರೇಜ್. ತನ್ನ ಮದುವೆ ಗುಟ್ಟನ್ನ ಎಲ್ಲೂ ಬಿಟ್ಟುಕೊಡದೇ ಗೋವಾದ ಕಡಲ ತೀರದಲ್ಲಿ ಹಸೆಮಣೆ ಏರಿದ್ದಾರೆ.

 ನಾಗಿಣಿ ಸೀರಿಯಲ್‌ನ ಈ ನಟಿಯ ಕೈ ಹಿಡಿದ ಕರಿಮಣಿ ಮಾಲೀಕ ಯಾರು ಗೊತ್ತಾ..? ಕರ್ನಾಟಕ ಮೂಲದವರೇ ಆದ ದುಬೈನ ಉದ್ಯಮಿ ದೀಪಕ್. ಇವರಿಬ್ಬರದ್ದು ಲವ್ ಮ್ಯಾರೇಜ್ ಅಂತಲೂ ಹೇಳಲಾಗ್ತಿದೆ. ಯಾಕಂದ್ರೆ ದೀಪಿಕಾ ದಾಸ್ ಆಗಾಗ ದುಬೈಗೆ ಹಾರುತ್ತಿದ್ರು. ಅಲ್ಲಿನ ಫೋಟೋಗಳನ್ನೂ ಹಂಚಿಕೊಳ್ಳುತ್ತಿದ್ರು. ಹೀಗಾಗಿ ಇಬ್ಬರ ಮಧ್ಯೆ ಪ್ರೀತಿ ಬೆಳೆದು ಈಗ ಹಸೆಮಣೆ ಏರಿ ಕರಿಮಣಿ ಕಟ್ಟಿ ಸಂಸಾರ ಶುರು ಮಾಡಿದ್ದಾರೆ ಎನ್ನಲಾಗ್ತಿದೆ.

ಪತಿಯ ಹೆಸರು ದೀಪಕ್ ಎಂದು ರಿವೀಲ್ ಮಾಡಿ ತಮ್ಮ ಮದುವೆಯ ಬಗ್ಗೆ ನಟಿ ಸಂತಸ ವ್ಯಕ್ತಪಡಿಸಿದ್ದಾರೆ. ಪದ್ಧತಿಯ ಬದ್ಧವಾಗಿ, ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನನ್ನ ಕನಸಾಗಿತ್ತು. ಇದೀಗ ಅದು ಈಡೇರಿದೆ ಎಂದು ನಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ದಿಢೀರ್ ಅಂತ ಆಗಿದ ಮದುವೆ ಅಲ್ಲ. ಈ ಮದುವೆಗೆ ಹಲವು ದಿನಗಳಿಂದ ಪ್ಲ್ಯಾನ್ ಮಾಡಲಾಗಿತ್ತು ಎಂದಿದ್ದಾರೆ.

ಆದರೆ ದೀಪಿಕಾ ದಾಸ್ ಅವರು ಎಲ್ಲಿಯೂ ಪತಿಯ ಇನ್​ಸ್ಟಾಗ್ರಾಮ್ ಐಡಿ ಶೇರ್ ಮಾಡಿಲ್ಲ. ಅಷ್ಟೇ ಅಲ್ಲದೆ ಪತಿಯನ್ನು ಫಾಲೋ ಕೂಡಾ ಮಾಡುತ್ತಿರುವಂತೆ ಕಾಣಿಸುತ್ತಿಲ್ಲ. ನಟಿಯ ಫಾಲೋಯಿಂಗ್ ಲಿಸ್ಟ್​ನಲ್ಲಿ ದೀಪಕ್ ಎನ್ನುವ ಹೆಸರಿಲ್ಲ. ಇನ್ನು. ಸಿನೆಮಾ ಧಾರವಾಹಿ ನಟಿಸೋದು ಡೌಟ್ ಆದರ ಬದಲು ಬ್ಯುಸಿನೆಸ್ ಬೆಸ್ಟ್ ಅಂತಿದ್ದಾಳೆ ಈ ಚಲುವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.