ಬಿಗ್ ಬಾಸ್ ಸ್ಪರ್ಧಿಯ ಜೊತೆ‌ ದೀಪಿಕಾ ದಾಸ್ ಮದುವೆ ಫಿಕ್ಸ್, ಇದೇ ತಿಂಗಳು ಹಬ್ಬದೂಟ

 | 
Daa

ಬಿಗ್​ಬಾಸ್​ ಸೀಸನ್​ 7ರಲ್ಲಿ ಸಖತ್ ಫೇಮಸ್ ಆದ ಜೋಡಿಗಳು ಎಂದರೆ ದೀಪಿಕಾ ದಾಸ್ ಶೈನ್ ಶೆಟ್ಟಿ. ಇಬ್ಬರೂ ಉತ್ತಮ ಸ್ನೇಹಿತರು ಎಂದು ಹೇಳುತ್ತಿದ್ದರೂ ಅಭಿಮಾನಿಗಳು ಮಾತ್ರ ಇಬ್ಬರ ಮದ್ವೆ ಯಾವಾಗ ಆಗುತ್ತೆ ಎಂದು ಕಾಯ್ತಾನೇ ಇದ್ದಾರೆ. ಇಬ್ಬರು ಜೊತೆಯಾಗಿ ಫೋಟೋ ಹಂಚಿಕೊಂಡ್ರೆ ಸದ್ಯದಲ್ಲಿ ಮದ್ವೆ ಸುದ್ದಿ ಕೊಡ್ತಿದ್ದಾರೆ ಅಂತಿದ್ದಾರೆ ಜನ. 

ನಾಗಿಣಿ ಸೀರಿಯಲ್​ ಮೂಲಕ ಜನಪ್ರಿಯತೆ ಪಡೆದ ನಟಿ ದೀಪಿಕಾ ದಾಸ್​​​ ಬಿಗ್​ಬಾಸ್​ ಸೀಸನ್​ 7ರಲ್ಲಿ  ಟಾಪ್​ 4 ಸ್ಪರ್ಧಿಯಾಗಿ ಹೊರ ಹೊಮ್ಮಿದ್ದರು. ಈ ಸೀಸನ್​ನಲ್ಲಿ ನಟಿ ದೀಪಿಕಾ ದಾಸ್​ ಹೆಸರು ನಟ ಶೈನ್​ ಶೆಟ್ಟಿ ಜೊತೆ ಥಳುಕು ಹಾಕಿಕೊಂಡಿತ್ತು. ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇನ್ನು ಶೈನ್ ಶೆಟ್ಟಿ  ಬಿಗ್ ಬಾಗ್ ಸೀಸನ್ 7ರಲ್ಲಿ ವಿನ್ನರ್ ಆಗಿ ಹೊರ ಹೊಮ್ಮಿದ್ದರು. ಬಳಿಕ ಅವರು ಸಿನಿಮಾ, ಜಾಹೀರಾತು ಮಾಡೆಲಿಂಗ್ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಬ್ಯುಸಿಯಾಗಿದ್ದಾರೆ. 

ಇವರ ಮದ್ವೆ ಸುದ್ದಿಯಂತೂ ಪ್ರತಿಬಾರಿಯೂ ಸುದ್ದಿಯಾಗುತ್ತಿದೆ, ಆದರೆ ಶೆಟ್ರು ಮಾತ್ರ ಯಾವುದಕ್ಕೂ ಉತ್ತರ ನೀಡದೆ ಸುಮ್ಮನೆ ಇದ್ದಾರೆ. ದೀಪಿಕಾ ದಾಸ್ ಕನ್ನಡ ಬಿಗ್​ ಬಾಸ್ ಸೀಸನ್ 9ರಲ್ಲಿ ಮತ್ತೆ ಸ್ಪರ್ಧಿಸಿ ಫೈನಲ್​ಗೆ ತಲುಪಿದ್ದರು, ಆದರೆ ಅವರು ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಅವರು ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಮಾತ್ರ ಅವರು ಈ ವರ್ಷ ಮದುವೆಯಾಗ್ತಾರೆ ಎಂದು ನೆಟ್ಟಿಗರು ಸದಾ ಗುಲ್ಲೆಬ್ಬಿಸುತ್ತಿದ್ದಾರೆ.

ಮದುವೆ ಬಗ್ಗೆ ಹೆಚ್ಚೇನೂ ಮಾತನಾಡದ ದೀಪಿಕಾ ದಾಸ್ ಒಂದೆಡೆ ಮದುವೆಯಾಗಲು ಇನ್ನೂ ನಾಲ್ಕು ವರ್ಷ ಬೇಕು. ಮದುವೆಯಾಗಲು ಇಷ್ಟವಾಗೋ ಹುಡುಗ ಬೇಕು. ಆ ಹುಡುಗ ಸುಳ್ಳು ಹೇಳಬಾರದು. ಒಳ್ಳೆ ಮನಸಿರಬೇಕು ಎಂದು ಹೇಳಿದ್ದರು. ಆದರೆ ಅಭಿಮಾನಿಗಳು ಮಾತ್ರ ಈ ವರ್ಷವೇ ಅವರ ಮದುವೆ ಮಾಡುವ ಉತ್ಸಾಹದಲ್ಲಿದ್ದಾರೆ. 

ಟ್ರಾವೆಲ್ ಪ್ರಿಯರಾದ ದೀಪಿಕಾ ದಾಸ್ ತನ್ನ ಸಂಗಾತಿಯಾಗುವವರಿಗೆ ಸಹ ಟ್ರಿಪ್ ಹೋಗುವ ಮನಸಿರಬೇಕು. ಯಾವಾಗಲೂ ನನ್ನ ಜೊತೆ ಟ್ರಿಪ್ ಮಾಡಲು ಸಿದ್ಧರಿರಬೇಕು ಎಂದಿದ್ದಾರೆ. ಅದಕ್ಕೂ ಕಾಲೆಳೆದ ನೆಟ್ಟಿಗರು ಅಂತೂ ಮದುವೆಯಾದ ನಂತರ ಶೈನ್ ಶೆಟ್ಟಿ ನಮ್ಮ ಕೈಗೆ ಸಿಗಲ್ಲ, ಸುತ್ತಾಡೋಕಿರುತ್ತಲ್ಲ ಎಂದಿದ್ದಾರೆ.