ಕನ್ನಡಿಗರ ಮುಖಕ್ಕೆ ಹೊಡೆದಂತೆ ಕನ್ನಡ ಮಾತಾಡಿದ ದೀಪಿಕಾ ಪಡುಕೋಣೆ, ಬಾಲಿವುಡ್ ಜನ ಶಾ ಕ್
Oct 21, 2024, 11:21 IST
|

ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಬಾಲಿವುಡ್ ಸಿನಿಮಾ ರಂಗದಲ್ಲಿ ಖ್ಯಾತರಾಗಿದ್ದರೂ, ಅವರ ಮೂಲ ಕರ್ನಾಟಕ. ಕರುನಾಡಿನ ಕುವರಿ ದೀಪಿಕಾ ನಟಿಸಿದ ಮೊದಲ ಸಿನಿಮಾ ಸಹ ಕನ್ನಡದ್ದೇ ಆಗಿದೆ. ಮೂಲತಃ ಕರ್ನಾಟಕದವರಾದ ದೀಪಿಕಾ ಪಡುಕೋಣೆ ಬೆಳೆದಿದ್ದು ಬೆಂಗಳೂರಿನಲ್ಲಿ. ವಿದ್ಯಾಭ್ಯಾಸ ಸಹ ಬೆಂಗಳೂರಿನಲ್ಲೇ ಮುಗಿಸಿದ್ದಾರೆ.
ಹಿಂದಿಯಷ್ಟೇ ಶುದ್ಧವಾಗಿ ದೀಪಿಕಾ ಕನ್ನಡ ಸಹ ಮಾತನಾಡುತ್ತಾರೆ. ದೀಪಿಕಾ ಪಡುಕೋಣೆ ಅವರು ಕೆಲ ವರ್ಷಗಳ ಹಿಂದೆ ಡಿಪ್ರೆಷನ್ ಅಂದರೆ ಖಿನ್ನತೆಗೆ ಒಳಗಾಗಿದ್ದರು. ಈ ಬಗ್ಗೆ ಹಲವು ಬಾರಿ ಪಬ್ಲಿಕ್‌ನಲ್ಲೇ ಹೇಳಿಕೊಂಡಿದ್ದಾರೆ. ಅಭಿಮಾನಿಗಳಲ್ಲಿ ಖಿನ್ನತೆ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಕನ್ನಡದಲ್ಲೇ ಖಿನ್ನತೆ ಬಗ್ಗೆ ಅರಿವು ಮೂಡಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
ನಾನು ಕೂಡ ಖಿನ್ನತೆಯ ಬಗ್ಗೆ ಬೇರೆಯವರ ಬಳಿ ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದೆ. ನನಗೆ ಖಿನ್ನತೆ ಹೆಚ್ಚುತ್ತಿದೆ ಎನಿಸಿದಾಗ ಔಷಧ ತೆಗೆದುಕೊಳ್ಳೋಕೆ ಆರಂಭಿಸಿದೆ. ಅಮ್ಮ ಸಮಯಕ್ಕೆ ಸರಿಯಾಗಿ ನಾನು ಔಷಧಿ ಪಡೆದೆನೋ ಇಲ್ಲವೋ ಎಂದು ಕೇಳುತ್ತಿದ್ದರು. ನನ್ನ ಸ್ಟೋರಿನ ಎಲ್ಲರಿಗೂ ಹೇಳ್ತೀನಿ. ಇದರಿಂದ ಕೆಲವರಿಗೆ ಸಹಾಯ ಆದರೆ ಒಳ್ಳೆಯದು ಎಂದಿದ್ದಾರೆ.
ಔಷಧಿ ಜೊತೆಗೆ ಒಳ್ಳೆಯ ಆಹಾರ, ವ್ಯಾಯಾಮ, ನಿದ್ದೆ ಹಾಗೂ ಒತ್ತಡದಿಂದ ದೂರ ಇರಲು ಪ್ರಯತ್ನಿಸುತ್ತಿದ್ದೆ. ಈಗ ಯಾವುದೇ ತೊಂದರೆ ಇಲ್ಲ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.ದೀಪಿಕಾ ಪಡುಕೋಣೆ ಇತ್ತೀಚೆಗೆ ಹೆಣ್ಣು ಮಗುವಿನ ತಾಯಿಯಾದರು.
ದೀಪಿಕಾ ಪಡುಕೋಣೆ ತಾಯಿಯಾದ ಕಾರಣ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ದೀಪಿಕಾ ಪಡುಕೋಣೆ ಕಲ್ಕಿ 2898 ಎಡಿ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಸಿಂಗಂ ಅಗೇನ್’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.