ದೀಪಿಕಾ ರಣವೀರ್ ಮಗಳ ಫೋಟೋ ವೈರಲ್, ಯಾರ ತರಹ ಇದ್ದಾಳೆ ಗೊತ್ತಾ

 | 
ಗೀ
 ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಹೆಣ್ಣು ಮಗುವಿನ ಪೋಷಕರಾಗಿರುವುದು ಎಲ್ಲರಿಗೂ ಗೊತ್ತೆ ಇದೆ. ಹುಟ್ಟುತ್ತಲೇ ಕೋಟಿ ಸಂಪತ್ತಿಗೆ ಒಡತಿಯಾದ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್‌ ಪುತ್ರಿಯನ್ನು ದೇಶದ ಶ್ರೀಮಂತ ಉದ್ಯಮಿ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಹೊಸ ತಾಯಿ ಮಗಳ ಕ್ಷೇಮ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ದೀಪಿಕಾ ಪಡುಕೋಣೆ ಸೆಪ್ಟೆಂಬರ್ 8 ರಂದು ಮುಂಬೈನ ಹೆಚ್‌ ಎನ್‌ ರಿಲಯನ್ಸ್‌ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗಣೇಶ ಹಬ್ಬದ ಮರುದಿನವೇ ಮನೆಗೆ ಆಗಮಿಸಿದ ಗೌರಿಯನ್ನು ಸ್ವಾಗತಿಸುತ್ತಾ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದರು. 
ಹೆಣ್ಣು ಮಗುವಿಗೆ ಸ್ವಾಗತ 8.9.2024, ರಣ್ವೀರ್ & ದೀಪಿಕಾ ಎಂದು ಬರೆದಿದ್ದ ಈ ಫೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈಗ ತಮ್ಮದೇ ಮಾಲೀಕತ್ವದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ ಅವರನ್ನು ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಭೇಟಿ ಮಾಡಿ ಕ್ಷೇಮ ವಿಚಾರಿಸಿದ್ದಾರೆ. 
ಮುಕೇಶ್ ಅಂಬಾನಿ ಅವರ ಈ ನಡೆ ಅಂಬಾನಿ ಕುಟುಂಬದ ಜೊತೆ ರಣ್ವೀರ್ ಹಾಗೂ ದೀಪಿಕಾ ಕುಟುಂಬ ಹೊಂದಿರುವ ಬಾಂಧವ್ಯವನ್ನು ತೋರಿಸುತ್ತದೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಒಟ್ಟು ಆಸ್ತಿ 745 ಕೋಟಿ ರೂ ಇದೆ. ಈಗ ತಾನೇ ಜಗತ್ತಿಗೆ ಬಂದಿರುವ ಮುದ್ದು ಮಗಳು ಕೋಟಿಗಳ ಒಡತಿಯಾಗಿದ್ದಾಳೆ. ಮಗಳಿಗಾಗಿಯೇ ಇತ್ತೀಚಿಗಷ್ಟೇ ದೀಪಿಕಾ ದಂಪತಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ರು. ಮನೆಯ ನಿರ್ಮಾಣ ಹಾಗೂ ಇಂಟೀರಿಯರ್ ಕೆಲಸ ಕೂಡ ಪೂರ್ಣಗೊಂಡಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.