'ಸಿಹಿಸುದ್ದಿ ಕೊಟ್ಟ ದೀಪಿಕಾ ಪಡುಕೋಣೆ' ಕರುನಾಡಿಗೆ ಹಬ್ಬದೂಟ

 | 
ಪಗದತ

ಬಾಲಿವುಡ್​ನಲ್ಲಿ ಪ್ರೆಗ್ನೆಂಟಾ ಎಂದು ನೆಟ್ಟಿಗರು ಯಾವಾಗಲೂ ಚರ್ಚಿಸುವ ಹೆಸರುಗಳಲ್ಲಿ ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ ಹೆಸರುಗಳಿವೆ. ಕತ್ರೀನಾ ಕೈಫ್​​ ಅವರಿಗಿಂತಲೂ ದೀಪಿಕಾ ಪಡುಕೋಣೆ ಅಮ್ಮನಾಗ್ತಿದ್ದಾರಾ ಎಂದು ಅಭಿಮಾನಿಗಳು ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ. ಈಗ ಅಭಿಮಾನಿಗಳ ವೈಟಿಂಗ್ ಕೊನೆಗೊಳ್ಳುವ ಸಾಧ್ಯತೆ ಕಂಡುಬಂದಿದೆ.

ನಟಿ ದೀಪಿಕಾ ಪಡುಕೋಣೆ ಅವರು ಗರ್ಭಿಣಿ ಎಂದ ಬಾಲಿವುಡ್​ ಲೈಫ್ ವರದಿ ಮಾಡಿದೆ. ಫೈಟರ್ ನಟಿ ದೀಪಿಕಾ ಅವರ ಪತಿ ರಣವೀರ್ ಸಿಂಗ್ ಜೊತೆ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಇಬ್ಬರೂ ಕೂಡಾ ತಮ್ಮ ಲೈಫ್​​ನ ಮತ್ತೊಂದು ಹಂತಕ್ಕೆ ಹೆಜ್ಜೆ ಇಡಲು ರೆಡಿಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ದೀಪಿಕಾ ಪಡುಕೋಣೆಗೆ ಟೈಟಾನಿಕ್ ನಟನ ಮೇಲೆ ಲವ್ವೋ ಲವ್ವು.

ಬಾಲಿವುಡ್​ನ ಬೇಡಿಕೆಯ ನಟಿ ದೀಪಿಕಾಗೆ ಹಾಲಿವುಡ್ ನಟ, ಟೈಟಾನಿಕ್ ಖ್ಯಾತಿಯ ಲಿಯಾನಾರ್ಡೋ ಡಿಕಾಪ್ರಿಯೋ ಮೇಲೆ ಕ್ರಶ್ ಇದೆಯಂತೆ.ದೀಪಿಕಾ ಪಡುಕೋಣೆ ಅವರಿಗೆ ಈಗ 2 ತಿಂಗಳಾಗಿದೆ. ಅವರು ತಾಯ್ತನವನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ನಿಯಮಿತವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವ ದೀಪಿಕಾ ಅವರಲ್ಲಿ ಇದುವರೆಗೂ ಬೇಬಿ ಬಂಪ್ ಕಂಡುಬಂದಿಲ್ಲ. 2 ತಿಂಗಳಿಗೆ ಬೇಬಿ ಬಂಪ್ ತಿಳಿಯುವುದಿಲ್ಲ. ಹಾಗಾಗಿ ಅದನ್ನು ಪರಿಗಣಿಸಲು ಸಾಧ್ಯವಿಲ್ಲ.

ಈ ಒಂದು ವಿಚಾರ ಹೊರಗಡೆ ಕೇಳಿ ಬರುತ್ತಿದ್ದಂತೆ ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. ರಣವೀರ್ ಮತ್ತು ದೀಪಿಕಾ ಅವರು ಈ ಕುರಿತು ಅಧಿಕೃತವಾಗಿ ಗುಡ್​ನ್ಯೂಸ್ ಕೊಡುವುದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸುದ್ದಿ ಸದ್ಯ ಇಬ್ಬರು ಸ್ಟಾರ್ ದಂಪತಿ ಅಭಿಮಾನಿಗಳ ಮಧ್ಯೆ ಹೆಚ್ಚು ವೈರಲ್ ಆಗಿದೆ.ದೀಪಿಕಾ 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾದರು. ಇವರ ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಇನ್ನೂ ಫ್ಯಾಮಿಲಿ ಪ್ಲಾನಿಂಗ್ ಮಾಡಿಲ್ಲ. ಬದಲಾಗಿ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.