ಧನರಾಜ್ ಆಚಾರ್ ಯಶಸ್ಸಿನ ಹಿಂದಿದ್ದಾರೆ ಪವಾಡ ಪುರುಷ, ಧನು ಬಿಗ್ಬಾಸ್ ಗೆಲ್ಲೋದು ಪಕ್ಕಾ

 | 
Hii
ಬಿಗ್ ಬಾಸ್ ಕನ್ನಡ ಸೀಸನ್​ 11 ರಿಯಾಲಿಟಿ ಶೋನಲ್ಲಿ ಚೈತ್ರಾ ಕುಂದಾಪುರ ಅವರ ಆಟ ಮುಗಿದಿದೆ. ಹಲವು ಬಾರಿ ನಾಮಿನೇಟ್ ಆಗಿ ಬಚಾವ್ ಆಗಿದ್ದ ಅವರು ಈ ವಾರ ದೊಡ್ಮನೆಯಿಂದ ಔಟ್​ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವಾಗ ಚೈತ್ರಾ ಅವರು ಸಖತ್ ಎಮೋಷನಲ್ ಆಗಿದ್ದರು. ಈ ಮನೆಯ ಅನ್ನದ ಋಣ ಮುಗಿಯಿತು ಎಂದಿದ್ದರು. ಆದರೆ ದೇವರ ಭಕ್ತ ಧನರಾಜ್ ಕೈ ಅನ್ನು ಆ ದೇವರು ಬಿಡಲಿಲ್ಲ.
ಎಲಿಮಿನೇಷನ್​ ಪ್ರಕ್ರಿಯೆ ನಡೆಯುವಾಗ ‘ಬಿಗ್ ಬಾಸ್ ಮನೆಯಲ್ಲಿ ಒಂದು ಲಕೋಟೆ ಇರಲಿದೆ. ಅದರಲ್ಲಿ ಸೇಫ್ ಆದವರ ಹೆಸರು ಬರೆದಿರುತ್ತದೆ’ ಎಂದು ಸುದೀಪ್ ಹೇಳಿದರು. ಮನೆ ಪೂರ್ತಿ ಸುತ್ತಾಡಿ ಧನರಾಜ್ ಮತ್ತು ಚೈತ್ರಾ ಅವರು ಲಕೋಟೆ ಹುಡುಕಿದರು. ಹುಡುಕುವ ವೇಳೆ ಧನರಾಜ್ ಅವರು ‘ಸ್ವಾಮಿ ಕೊರಗಜ್ಜ’ ಎಂದು ದೇವರನ್ನು ಸ್ಮರಿಸಿದರು. ಅಚ್ಚರಿ ಎಂದರೆ, ಧನರಾಜ್ ಅವರೇ ಸೇಫ್ ಆದರು.
ಈಗಾಗಲೆ ಹಲವಾರು ಅಭಿಮಾನಿಗಳ ಹೊಂದಿರುವ ಧನರಾಜ್ ಆಚಾರ್ ಮೋಸ ಮಾಡಿದ್ದಾರೆ ಎಂಬ ಗುಲ್ಲೆದ್ದಿದೆ.ಈ ಬಗ್ಗೆ ಖುದ್ದು ಬಿಗ್​ಬಾಸ್​ ಮನೆಯವರ ಮುಂದೆ ಅಸಲಿ ಸತ್ಯವನ್ನು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾರೆ. ಬಿಗ್​ಬಾಸ್​ ಮಾತನ್ನು ಕೇಳಿಸಿಕೊಂಡ ಧನರಾಜ್​ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಬಿಗ್​ಬಾಸ್​ ನನ್ನಿಂದ ಅಷ್ಟು ದೊಡ್ಡ ತಪ್ಪಾಗಿದೆ ಅಂತ ಗೊತ್ತಾಲಿಲ್ಲ. ಆ ಗೆಲುವು ನನ್ನದು ಅಲ್ಲ ಅಂತ ಅನಿಸುತ್ತಿದೆ. ನನ್ನನ್ನೂ ನಾಮಿನೇಟ್ ಮಾಡಿಕೊಂಡೆ ಪ್ರಕ್ರಿಯೆ ಶುರು ಮಾಡಿ ಪ್ಲಿಸ್​ ಅಂತ ಬೇಡಿಕೊಂಡಿದ್ದಾರೆ.​ ಇಂದು ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ಬಿಗ್​ಬಾಸ್​ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಅಂತ ಕಾದು ನೋಡಬೇಕಿದೆ.
ಬಳಿಕ ಮಾತನಾಡಿರುವ ಧನರಾಜ್, "ನನ್ನಿಂದ ಇಷ್ಟೊಂದು ದೊಡ್ಡದಾಗಿದೆ ಎಂಬುದು ನನಗೆ ಗೊತ್ತಿರಲಿಲ್ಲ ಬಿಗ್ ಬಾಸ್. ಈ ಗೆಲುವು ನಂದಲ್ಲ ಅಂತ ಅನ್ನಿಸ್ತಾ ಇದೆ ಬಿಗ್ ಬಾಸ್‌. ನನ್ನನ್ನೂ ನಾಮಿನೇಷನ್‌ನಲ್ಲಿ ಇರಿಸಿಕೊಂಡೇ ಪ್ರಕ್ರಿಯೆಯನ್ನು ಶುರು ಮಾಡಿ ಪ್ಲೀಸ್.." ಎಂದು ಕೈಮುಗಿದು ಬೇಡಿಕೊಂಡಿದ್ದಾರೆ. ಪ್ರೋಮೋದ ಎಂಡ್‌ನಲ್ಲಿ, "ಮುಖ್ಯದ್ವಾರದ ಮೂಲಕ ಹೊರಗೆ ಹೋಗುತ್ತಿರುವವರು…" ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಲ್ಲಿ ಆ ಪ್ರೋಮೋ ಮುಕ್ತಾಯವಾಗಿದೆ. ಅಲ್ಲಿಗೆ ಇಂದು .ಹೊರಗೆ ಹೋಗುವುದು ಯಾರು ಅನ್ನೋ ಕುತೂಹಲ ಹಾಗೇ ಉಳಿದುಕೊಂಡಿದೆ. ಕೆಲವರ ಪ್ರಕಾರ ದೈವ ಬಲದಿಂದ ಉಳಿಯಬಹುದು ಎನ್ನಲಾಗ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.