ವರ್ಷಗಳ ಹಿಂದೆ ಮೋಕ್ಷಿತಾ ಪೈ ಮನೆಗೆ ಹೆಣ್ಣು ಕೇಳಲು ಹೋಗಿದ್ದ ಧನರಾಜ್
Jan 9, 2025, 17:33 IST
|
ಕನ್ನಡಿಗರ ಮೆಚ್ಚಿನ ಶೋ ಬಿಗ್ಬಾಸ್ ಕನ್ನಡ ಸೀಜನ್ 11 ಅಂತಿಮ ವಾರಗಳತ್ತ ಸಾಗುತ್ತಿದ್ದು, ಇನ್ನೇನು ಮೂರು ವಾರಗಳಲ್ಲಿ ಈ ಸೀಜನ್ ಮುಗಿಯಲಿದೆ. ಈ ವಾರ ಟಿಕೆಟ್ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ಬಿಗ್ ಬಾಸ್ ಮನೆಯಲ್ಲಿ ಜೋರಾಗಿದ್ದು, ಇರುವ ಒಂಬತ್ತು ಜನರ ಪೈಕಿ ಒಬ್ಬರು ಈ ವಾರವೇ ಫಿನಾಲೆಗೆ ಹೋಗುವುದು ಖಚಿತವಾಗಿದೆ.
ಇನ್ನು ಬಿಗ್ ಬಾಸ್ ಕನ್ನಡ ಸೀಜನ್ 11ರ ಗ್ರ್ಯಾಂಡ್ ಫಿನಾಲೆ ಜನವರಿ 26 ಗಣರಾಜೋತ್ಸವದ ಭಾನುವಾರ ನಡೆಯಲಿದೆ. ಈ ಬಗ್ಗೆ ಸ್ವತಃ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಹೇಳಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಈ ಸೀಜನ್‌ನಲ್ಲಿ ಕಾಲಿಟ್ಟ 20 ಜನರ ಪೈಕಿ ಇದೀಗ ಕೇವಲ ಒಂಬತ್ತು ಜನ ಉಳಿದುಕೊಂಡಿದ್ದು, ಈಗ ಮನೆಯೊಳಗೆ ಇರುವವರು ತಮ್ಮದೇ ಆದ ಸ್ನೇಹವನ್ನು ಸಂಪಾದಿಸಿಕೊಂಡಿದ್ದಾರೆ.
ಒಂದೆಡೆ ಭವ್ಯಾ ಗೌಡ, ತ್ರಿವಿಕ್ರಮ್ ಹಾಗೂ ರಜತ್ ಜೊತೆಯಾಗಿದ್ದರೆ, ಮತ್ತೊಂದೆಡೆ ಉಗ್ರಂ ಮಂಜು ಹಾಗೂ ಗೌತಮಿ ಈ ಸೀಜನ್‌ನ ಒಳ್ಳೆಯ ಸ್ನೇಹಿತರಾಗಿದ್ದಾರೆ. ಇನ್ನು ಈ ಸೀಜನ್‌ನ ಹಿಟ್ ಫ್ರೆಂಡ್‌ಶಿಪ್ ಅಂದರೆ ಅದು ಧನರಾಜ್ ಮತ್ತು ಹನುಮಂತ. ಹೀಗಿರುವಾಗ ಚೈತ್ರಾ ಕುಂದಾಪುರ ಹಾಗೂ ಮೋಕ್ಷಿತಾ ಪೈ ಯಾರ ಜೊತೆಗೂ ಸೇರದೇ ತಮ್ಮ ಪಾಡಿಗೆ ತಾವಿದ್ದಾರೆ.
ಸದ್ಯ ಯಾರ ಗೆಳೆತನದಲ್ಲೂ ಮುಳುಗಿ ಹೋಗದ ಮೋಕ್ಷಿತಾ ಪೈಗೆ ಧನರಾಜ್ ಆಚಾರ್ ಬಿಗ್ ಬಾಸ್‌ಗೂ ಮೊದಲೇ ಪರಿಚಿತರು ಅಥವಾ ಸ್ನೇಹಿತರು ಎಂದರೆ ನೀವು ನಂಬಲೇಬೇಕು. ಈ ಮನೆಯೊಳಗೆ ಬರುವ ಮುನ್ನವೇ ತುಂಬಾ ಪರಿಚಿತರಾಗಿರುವ ಇವರು ಎಂದೂ ಬಿಗ್ ಬಾಸ್ ಮನೆಯಲ್ಲಿ ಪರಿಚಿತರಂತೆ ಅಥವಾ ಸ್ನೇಹಿತರಂತೆ ನಡೆದುಕೊಂಡಿಲ್ಲ. ಜೋಡಿ ಟಾಸ್ಕ್ ಅನ್ನು ಜೊತೆಯಾಗಿ ಆಡಿದರೂ ಕೂಡ ಅಪರಿಚಿರಂತೆ ಇಬ್ಬರು ಇದ್ದರು.
ಪಾರು ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಮೋಕ್ಷಿತಾ ಪೈ ಹಾಗೂ ಗಿಚ್ ಗಿಲಿಗಿಲಿ ರಿಯಾಲಿಟಿ ಶೋ, ಅಬ್ಬಬ್ಬಾ ಸಿನಿಮಾ ಸೇರಿದಂತೆ ನಟನೆಯಲ್ಲಿ ಗುರುತಿಸಿಕೊಂಡಿರುವ ಧನರಾಜ್ ಆಚಾರ್ ಒಂದು ಪ್ರಾಜೆಕ್ಟ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಮದುಮಗ ಎನ್ನುವ ವೆಬ್ ಸಿರೀಸ್‌ಅನ್ನು ಇಬ್ಬರು ಜೊತೆಯಾಗಿ ಮಾಡಿದ್ದು, ಇವರಿಬ್ಬರ ಮದುವೆ ಮಾತು-ಕತೆ ನಡೆಯುವಂತಹ ದೃಶ್ಯವೊಂದು ಈ ವೆಬ್ ಸಿರೀಸ್‌ನಲ್ಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.