ಕನ್ನಡಿಗರಿಗೆ ಬಹು ವರ್ಷಗಳ ಬಳಿಕ ಸಿಹಿಸುದ್ದಿ ಕೊಟ್ಟ ಧನ್ವೀರ್, ಇದೇ ವರ್ಷ ಕಂಕಣ ಭಾಗ್ಯ
 | Jul 19, 2025, 21:58 IST
                                                
                                            
    
  
 ರೇಷ್ಮಾ ಹಾಗೂ ಧನ್ವೀರ್ ಇಬ್ಬರೂ ನಟ ದರ್ಶನ್ ಅವರ ಗರಡಿಯಲ್ಲೇ ಪಳಗಿರುವ ಸೆಲೆಬ್ರಿಟಿಗಳು. ಇಬ್ಬರಿಗೂ ದರ್ಶನ್ ಅವರೇ ಅಚ್ಚುಮೆಚ್ಚು. ಈ ಹಿಂದೆ ರೇಷ್ಮಾ ಅವರು ಮದುವೆ ವಿಚಾರ ಪ್ರಸ್ತಾಪಿಸಿದಾಗ ನಾನು ಗೌಡ್ರು ಹುಡುಗನನ್ನೇ ಮದುವೆ ಆಗ್ತೀನಿ ಅನ್ನೋ ಮೂಲಕ ಕುತೂಹಲ ಮೂಡಿಸಿದ್ರು. ಇಷ್ಟಾಗಿದ್ದೇ ತಡ ಧನ್ವೀರ್ ಗೌಡ ಹಾಗೂ ರೇಷ್ಮಾ ಅವರ ಬಗ್ಗೆ ಲವ್‌ಸ್ಟೋರಿಗೆ ಹಲವರು ನಿರ್ದೇಶಕರಾಗಿಬಿಟ್ರು.
 ರೇಷ್ಮಾ ಅವರು ನಿನ್ನೆ ಮೊನ್ನೆ ಚಿತ್ರರಂಗಕ್ಕೆ ಬಂದವರು.ಈ ಸಮಯದಲ್ಲೇ ಧನ್ವೀರ್ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದರು. ರೇಷ್ಮಾ ಅವರು ತಾವು ಮದುವೆಯಾಗುವುದು ಗೌಡರ ಹುಡುಗನನ್ನೇ ಎಂದ ಸಮಯದಲ್ಲೇ ಧನ್ವೀರ್ ಹಾಗೂ ರೇಷ್ಮಾ ಅವರ ಸೆಲ್ಫೀ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆಗ ರೇಷ್ಮಾ ಹೇಳಿದ್ದ ಗೌಡರ ಹುಡುಗ ಧನ್ವೀರ್ ಅವರೆ ಎಂದು ಹಲವು ಭಾವಿಸಿದ್ದರು. ಅಂದಿನಿಂದಲೂ ಇವರ ಲವ್‌ಸ್ಟೋರಿ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಇವರಿಬ್ಬರೂ ವಾಮನ ಚಿತ್ರದಲ್ಲಿ ನಟಿಸಿದ್ದಾರೆ.
  
 ಇನ್ನೂ ಹಲವರ ಜೊತೆ ಸಂಬಂಧ ಕಟ್ಟಿ ಚೌಟ್ರಿ ಕೂಡ ಬುಕ್ ಮಾಡಿದ್ದರು. ಇನ್ನು ನಮ್ಮಿಬ್ಬರಿಗೆ ತಾಂಬೂಲ ಒಂದು ಎಕ್ಸ್‌ಚೇಂಜ್ ಮಾಡಿಲ್ಲ ಅಷ್ಟೇ, ಬಾಕಿ ಇನ್ನೆಲ್ಲವನ್ನೂ ಆಗಲೇ ಮಾಡಿದ್ದರು ಎಂದು ಧನ್ವೀರ್ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಜನ ಹೇಗೆ ಅಂದ್ರೆ ಈಗ ಯಾವ ನಟಿ ಜೊತೆ ಸುಮ್ಮನೆ ಕಾಣಿಸಿಕೊಂಡ್ರೂ ಒಂದು ಫೋಟೋ ತಗೋತಾರೆ, ಆ ಮೇಲೆ ಇವರಿಬ್ಬರ ಮಧ್ಯೇ ಏನೋ ಇದೆ ಅಂತ ಕಥೆ ಹೇಳ್ತಾರೆ. ಆದರೆ ನಾವೇನೂ ಅನ್ನೋದು ನಮಗೆ ಮಾತ್ರ ಗೊತ್ತು. ಈಗ ನಾನು ಹಾಗೂ ರೇಷ್ಮಾ ಅವರೊಂದಿಗೆ ಶೇರ್ ಮಾಡುವ ಬಾಂಡಿಂಗ್ ಕೂಡ ಬೇರೆ. ನಾವಿಬ್ಬರೂ ಕಷ್ಟ ಸುಖವನ್ನು ಬೇರೆ ರೀತಿ ಶೇರ್ ಮಾಡ್ಕೋತೀವಿ. ಅಷ್ಟಕ್ಕೇ ಏನೇನೋ ಸುದ್ದಿ ಹಬ್ಬಿಸ್ತಾರೆ ಎನ್ನುವ ಮೂಲಕ ಧನ್ವೀರ್ ಎಲ್ಲ ವದಂತಿಗೆ ಬ್ರೇಕ್ ಹಾಕಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
 

