ಮನೆ ಬಾಡಿಗೆ ಕಟ್ಟಲಾಗದೆ ಕೈಯಲ್ಲಿದ್ದ ಕಾರು ಮಾರಿಕೊಂಡು ಜೀವನ ಸಾಗಿಸುತ್ತಿರುವ ಧರ್ಮ ಕಿರ್ತೀರಾಜ್
Mar 7, 2025, 09:27 IST
|

ನಟ ಧರ್ಮ ಅಂದ್ರೆ ಒಮ್ಮೆಲೆ ನೆನಪಾಗಲಿಕ್ಕಿಲ್ಲ.ಕನ್ನಡ ಚಿತ್ರರಂಗದ ಹಿರಿಯ ನಟ ಕೀರ್ತಿ ರಾಜ್ ಪುತ್ರ ಧರ್ಮ ಅಂದ್ರೆ ಬೇಗ ಗೊತ್ತಾಗುತ್ತದೆ. ಇವ್ರು ಕಾಲೇಜ್‌ನಲ್ಲಿ ಓದುತ್ತಿರುವಾಗಲೇ ನವಗ್ರಹ ಆಫರ್ ಪಡೆದರು. ಅದಾದ ಮೇಲೆ ಸುಮಾರು 20 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿಗೆ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿ 50 ದಿನಗಳನ್ನು ಪೂರೈಸಿದ್ದರು. ತಮ್ಮ ಜೀವನದಲ್ಲಿ ಹಣ ವಹಿಸಿರುವ ಪಾತ್ರವನ್ನು ಹಂಚಿಕೊಂಡಿದ್ದಾರೆ.
ನಾನು ದುಡಿದಿರುವುದರಲ್ಲಿ ಸಾಧನೆ ಮಾಡಿರುವುದರ ಬಗ್ಗೆ ನನಗೆ ತೃಪ್ತಿ ಇಲ್ಲ. ಖಂಡಿತಾ ಮುಂದೆ ತುಂಬಾ ಮಾಡಬೇಕಿದೆ. ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ನೋಡಿದ್ದೀನಿ. ಕೋವಿಡ್ ಸಮಯದಲ್ಲಿ ನನ್ನ ಕಾರನ್ನು ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿತ್ತು. ನಾನು ಕಷ್ಟ ಪಟ್ಟು ಖರೀದಿ ಮಾಡಿರುವ ಕಾರು ಅದು ಆಗಲೇ ಒಂದು ಲಕ್ಷ ಕಿಮೀ. ಓಡಾಡಿತ್ತು ಹೀಗಾಗಿ ಬೇಡಪ್ಪ ಮುಂದೆ ಒಂದು ದಿನ ತೆಗೆದುಕೊಳ್ಳಬಹುದು ಅಂತ ಸುಮ್ಮನಾದೆ.
ನಾನು ಕಷ್ಟ ಪಟ್ಟು ದುಡಿದ ಹಣದಲ್ಲಿ ಆಡಿ ಏ 4 ಕಾರನ್ನು ಖರೀದಿಸಿದ್ದು. ನಾಲ್ಕು ವರ್ಷ ಇಟ್ಟುಕೊಂಡ ಕಾರಿಗೆ ನಾನು ಡೌನ್ ಪೇಮೆಂಟ್ ಮಾಡಿದೆ EMI ಗಳನ್ನು ಕಟ್ಟಿದೆ ಆದರೆ ಪರಿಸ್ಥಿತಿ ಈ ರೀತಿ ಆದಾಗ ನಾನು ಮಾರಾಟ ಮಾಡಿದೆ. ನನಗೆ ಎಲ್ಲೂ ಮುಜುಗರ ಇರಲಿಲ್ಲ ಏಕೆಂದರೆ ನನ್ನ ಕಷ್ಟಕ್ಕೆ ಆಗಿ ಬಂತು. ಆ ಸಮಯ ಕಳೆದ ಮೇಲೆ ಮತ್ತೆ ಹೊಸ ಕಾರು ಖರೀದಿಸಿ ಬೌನ್ಸ್ ಬ್ಯಾಕ್ ಮಾಡಿದೆ.
ತಂದೆ ತಾಯಿಗೆ ಮಗನಾಗಿ ಏನು ಮಾಡಿಕೊಡಬೇಕಿತ್ತು ಅದನ್ನು ಮಾಡಿದ್ದೀನಿ. ಇರುವೆಗೆ ಅದರದ್ದೇ ಚಿಂತೆ, ಆನೆಗೆ ಅದರದ್ದೇ ಚಿಂತೆ ಅನ್ನೋದು ಸತ್ಯ. ಸದ್ಯಕ್ಕೆ ಮನೆ ನಡೆಸಲು ಎಷ್ಟು ಬೇಕು, ಅಪ್ಪ ಅಮ್ಮನಿಗೆ ಎಷ್ಟು ಬೇಕೋ ನನ್ನ EMIಗಳು ಕಟ್ಟಲು ಎಷ್ಟು ಬೇಕು.ಇದಕ್ಕೆ ಯಾವುದೇ ಸಮಸ್ಯೆ ಇಲ್ಲ. ನನ್ನ ಅಪ್ತರಿಗೆ ಒಂದಿಷ್ಟು ಮಾಡುವುದು, 6 ತಿಂಗಳಿಗೆ ಒಮ್ಮೆ ವಿದೇಶ ಟ್ರಿಪ್ ಹೋಗುವುದು ಮಾಡಲು ಅಷ್ಟೇ ಆಗುತ್ತಿರುವುದು.
ಮುಂದೆ ಹಂತವಾಗಿ ಬೆಳೆಯಬೇಕು ಏಕೆಂದರೆ ಲೆಕ್ಕಾಚಾರ ಹಾಕಿ ನಾನು ಜೀವನದ ನಡೆಸಬಾರದು. ಖಂಡಿತಾ ಹಣ ಬರುವಂತೆ ಆದರೆ ಅದಕ್ಕೆ ಅಗೌರವ ಕೊಡುವುದಿಲ್ಲ ಎಂದು ಧರ್ಮ ಕೀರ್ತಿರಾಜ್ ಮಾತನಾಡಿದ್ದಾರೆ. ಮೊದಲ ಸಿನಿಮಾಗೆ ದರ್ಶನ್ ಸರ್ ಬಂದು ಚೆಕ್ ಕೊಟ್ಟರು. ನನಗೆ ಲಕ್ಕಿ ನಂಬರ್ 3 ಅಂತ ಮೂರು ಲಕ್ಷ ಕೈಗೆ ಇಟ್ಟಾಗ ಖುಷಿ ಆಯ್ತು. ಬಿಗ್ ಬಾಸ್ ಮುಗಿದ ಮೇಲೆ ಸಂಭಾವನೆ ಜಾಸ್ತಿ ಆಗಿದೆ ಅದು ಇದು ಅಂತಿದ್ದಾರೆ.
ಏನೇ ಇದ್ದರೂ ನನಗೆ ಕಾಲ್ ಮಾಡಿ ಯಾವ ಮ್ಯಾನೇಜರ್ ಇರಲ್ಲ ಗಾಸಿಪ್‌ಗಳಿಗೆ ತಲೆ ಕೊಡಬೇಡಿ ಎನ್ನುತ್ತೀನಿ. ಬಿಗ್ ಬಾಸ್‌ಯಿಂದ ಎರಡು ಮೂರು ಲಕ್ಷ ತಂದಿದ್ದೀನಿ ನೀವು ಕೂಡ ಒಂದೆರಡು ಮೂರು ಸೇರಿಸಿ ಕೊಡಿ ಎನ್ನುತ್ತೀನಿ. 20 ಸಿನಿಮಾಗಳಿಂದ ನಾನು ತಕ್ಕ ಮಟ್ಟಕ್ಕೆ ದುಡಿದ್ದಿದ್ದೀನಿ ಎಂದು ರ್ಯಾಪಿಡ್ ರಶ್ಮಿ ಸಂದರ್ಶನದಲ್ಲಿ ಧರ್ಮ ಹೇಳಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.