ಚಿರು ಸಮಾಧಿ ಮುಂದೆ ಧ್ರುವ ಸರ್ಜಾ ಹಾಗೂ ದುನಿಯಾ ವಿಜಯ್ ಮುಖಾಮುಖಿ, ಘಟನುಘಟಿಗಳ ಸಮಾಗಮ

 | 
Jd

ಕಳೆದ ವಾರ ಧ್ರುವ ಸರ್ಜಾ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಬಳಿ ಮಲಗಿ ಸುದ್ದಿಯಾಗಿದ್ದರು. ಇದೀಗ ಪತ್ನಿ ಪ್ರೇರಣಾ ಸೀಮಂತ ಶಾಸ್ತ್ರವನ್ನು ಅಣ್ಣನ ಸಮಾಧಿ ಬಳಿ ನೆರವೇರಿಸಿ ಸರಳತೆ ಮೆರೆದಿದ್ದಾರೆ. ಹೌದು ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ತಿಂಗಳು ಈ ಸಿಹಿ ಸುದ್ದಿ ಹಂಚಿಕೊಂಡಿದ್ದ ಧ್ರುವಾ ಈಗ ಶಾಸ್ತ್ರೋಕ್ತವಾಗಿ ಪತ್ನಿ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. 

ಪ್ರೇರಣಾ ಸದ್ಯ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಬೆಂಗಳೂರಿನ ಕನಕಪುರ ರಸ್ತೆಯ ನೆಲಗುಳಿಯಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಸೀಮಂತ ಶಾಸ್ತ್ರ ನಡೆದಿದೆ. 
ಈ ಸೀಮಂತ ಕಾರ್ಯಕ್ರಮದಲ್ಲಿ ಕೆಲವೇ ಕೆಲವು ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಿದ್ದು, ಅರ್ಜುನ್ ಸರ್ಜಾ, ಮೇಘನಾ ರಾಜ್ ಭಾಗಿಯಾಗಿಲ್ಲ ಎನ್ನಲಾಗಿದೆ. 
ಈ ವಿಶೇಷ ಸಂದರ್ಭದಲ್ಲಿ ಧ್ರುವ ತಮ್ಮ ಅಣ್ಣ ಚಿರು ಸರ್ಜಾ ಅವರನ್ನ ತುಂಬಾನೇ ಮಿಸ್ ಮಾಡಿಕೊಂಡಿದ್ದಾರೆ. 

ತಮ್ಮ ಮಗಳಿಗೆ ಚಿರು ಫೋಟೋ ತೋರಿಸಿ ದೊಡ್ಡಪ್ಪ ಅನ್ನು ಅಂತ ಹೇಳಿಕೊಡ್ತಿದ್ದ ದೃಶ್ಯ ಹೃದಯ ಸ್ಪರ್ಶಿಸುವಂತಿತ್ತು. ಇನ್ನು 2019ರಲ್ಲಿ ಪ್ರೇರಣಾ ಜೊತೆ ಹೊಸ ಜೀವನ ಆರಂಭಿಸಿದ್ದ ಧ್ರುವಾ ಸರ್ಜಾಗೆ ಈಗಾಗಲೇ ಒಂದು ಮುದ್ದಾದ ಹೆಣ್ಣು ಮಗು ಇದೆ. 2022 ಅಕ್ಟೋಬರ್ 2ರಂದು ಮನೆಗೆ ಭಾಗ್ಯಲಕ್ಷ್ಮಿಯನ್ನ ಬರಮಾಡಿಕೊಂಡಿದ್ರು. ಇದೀಗ ಎರಡನೇ ಮಗುವಿನ ಆಗಮನವಾಗ್ತಿದ್ದು, ಈ ಸಲ ಕೃಷ್ಣನ ನಿರೀಕ್ಷೆಯಲ್ಲಿದ್ದಂತೆ ಧ್ರುವ ಸರ್ಜಾ ದಂಪತಿ.

ಇನ್ನು ಅದೇ ದಿನ ಚಿರು ಸರ್ಜಾ ಅವರ ಸಮಾಧಿಗೆ ಪೂಜೆ ಸಲ್ಲಿಸಲು ಬಂದ ದುನಿಯಾ ವಿಜಯ್ ಅವರು ಅಣ್ಣನ ನೆನಪಿನಲ್ಲಿ ಕಣ್ಣೀರಿಟ್ಟ ಧ್ರುವ ಸರ್ಜಾ ಅವರಿಗೆ ಸಮಾಧಾನ ಹೇಳಿ ಪ್ರೆರಣಾ ಗೆ ಆಶೀರ್ವಾದ ಮಾಡಿದ್ದಾರೆ. ಧ್ರುವ ಸರ್ಜಾ ಮನಸ್ಸು ಮಾಡಿದರೆ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಪತ್ನಿ ಪ್ರೇರಣಾ ಸೀಮಂತ ಕಾರ್ಯ ಮಾಡಬಹುದಿತ್ತು. 

ಆದರೆ ಅವರು ಚಿರಂಜೀವಿ ಸರ್ಜಾ ಸಮಾಧಿ ಬಳಿ ಕಾರ್ಯ ಮಾಡಿದ್ದಾರೆ ಎಂದರೆ ಅಣ್ಣನ ಬಗ್ಗೆ ಅವರಿಗೆ ಎಷ್ಟು ಪ್ರೀತಿ, ಗೌರವ ಇದೆ ಎಂಬುದು ತಿಳಿಯುತ್ತದೆ. ನಿಮ್ಮ ಅಣ್ಣನೇ ಮಗನಾಗಿ ಹುಟ್ಟಿ ಬರಲಿ ಎಂದು ನೆಟಿಜನ್ಸ್‌ ಹಾರೈಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.