ಮನೆಯಲ್ಲಿ ದನಗಳನ್ನು ತೊಳೆದ ನಂತರ ಗೋ ಮೂತ್ರವನ್ನು ತೀರ್ಥವಾಗಿ ಸೇವಿಸಿದ ಧ್ರುವ ಸರ್ಜಾ

 | 
ಹ

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ  ಶ್ರೀ ಸಾಮಾನ್ಯನಂತೆ ಸಂಕ್ರಾಂತಿ ಹಬ್ಬ ಸೆಲೆಬ್ರೇಟ್  ಮಾಡಿದ್ದಾರೆ. ಹಳ್ಳಿಗಳಲ್ಲಿ ರೈತರ ಮಾಡೋ ಕೆಲಸಗಳನ್ನೂ ಧ್ರುವ ಸರ್ಜಾ ಮಾಡಿದ್ದಾರೆ.ಹಳ್ಳಿಗಳಲ್ಲಿ ರೈತರ ಮಾಡೋ ಕೆಲಸಗಳನ್ನೂ ಧ್ರುವ ಸರ್ಜಾ ಮಾಡಿದ್ದಾರೆ. ಎತ್ತುಗಳ ಸಗಣಿ ಬಾಚಿದ್ದಾರೆ. ಎತ್ತುಗಳ ಮೈ ತೊಳೆದಿದ್ದಾರೆ. 

ಹೂವಿನಿಂದ ಅಲಂಕಾರಗೊಂಡ ಎತ್ತುಗಳ ಪೂಜೆಯನ್ನು ಅಷ್ಟೇ ಶ್ರದ್ಧೆಯಿಂದಲೇ ಮಾಡಿದ್ದಾರೆ. ಸಂಜೆ ಕತ್ತಲಾಗುತ್ತಲೇ ಎತ್ತುಗಳ ಜೊತೆಗೆ ತಾವು ಕಿಚ್ಚು ಹಾಯಿಸಿದ್ದಾರೆ. ಈ ಒಂದು ದೃಶ್ಯ ನಿಜಕ್ಕೂ ವಿಶೇಷ ಅನಿಸುತ್ತದೆ. ಸ್ಟಾರ್ ನಟರ ಸರಳತೆಯ  ಪ್ರತೀಕ ಇದು ಅನ್ನೋ ಫ್ಯಾನ್ಸ್  ಈ ಕ್ಷಣದ ವಿಡಿಯೋವನ್ನ ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ. ಸ್ವತಃ ಧ್ರುವ ಸರ್ಜಾ ತಮ್ಮ ಈ ಸಂಭ್ರಮದ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. 

ಇಬ್ಬರು ಪುಟ್ಟ ಮಕ್ಕಳೊಂದಿಗೆ ಸಂಭ್ರಮದ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಪ್ರೇರಣಾ ಸೀರೆ ಉಟ್ಟು ಕಂಗೊಳಿಸಿದರೆ ಧ್ರುವ ಸರ್ಜಾ ಶಲ್ಯ ಪಂಚೆಯಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ಬೆಳಗ್ಗೆಯಿಂದ ರೆಡಿ ಮಾಡಿದ್ದ ಎತ್ತುಗಳು ಸಂಜೆ ಹೊತ್ತಿಗೆ ಹೂವಿನಿಂದ ಅಲಂಕೃತಗೊಂಡಿದ್ದವು. ಕತ್ತಲಾಗುತ್ತಲೇ ಕಿಚ್ಚು ಹಾಯಿಸೋ ಸಂಭ್ರಮ ಶುರು ಆಯಿತು. ಸ್ವತಃ ಧ್ರುವ ಸರ್ಜಾ ಎತ್ತುಗಳನ್ನ ಕಿಚ್ಚು ಹಾಯಿಸಿದ್ದಾರೆ. 

ಒಂದು ರೀತಿ ಇದು ಥ್ರಿಲ್ಲಿಂಗ್ ಕ್ಷಣ ಅಂತಲೂ ಹೇಳಬಹುದೇನೋ. ಇನ್ನು ಮಾರ್ಟಿನ್ ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಇನ್ನೇನು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಬೇಕಿದೆ. ಆದರೆ ಅಭಿಮಾನಿಗಳು ಚಿತ್ರದ ನಿರೀಕ್ಷೆಯಲ್ಲಿಯೇ ಇದ್ದಾರೆ. ಸಂಕ್ರಾಂತಿ ಹಬ್ಬದ ಧ್ರುವ ಸರ್ಜಾ ವಿಡಿಯೋ ನೋಡಿದವ್ರು, ಮಾರ್ಟಿನ್ ಚಿತ್ರಕ್ಕೆ ವೇಟ್ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಮಾರ್ಟಿನ್ ಮತ್ತು ಕೆಡಿ ಸಿನಿಮಾದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದರ ಬೆನ್ನಲ್ಲಿಯೇ ಮೊದಲು ಯಾವ ಚಿತ್ರ ಬರುತ್ತದೆ ಅನ್ನೋ ಕುತೂಹಲವೂ ಇದೀಗ ಹೆಚ್ಚಾಗುತ್ತಿದೆ ಅಂತಲೇ ಹೇಳಬಹುದು.( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.