ಮೇಘನಾ ರಾಜ್ ಪುತ್ರ ರಾಯನ್ ಜೊತೆ ಆನೆಯಂತಿರುವ ಧ್ರುವ ಸರ್ಜಾ ಡ್ಯಾನ್ಸ್

 | 
ಕರು ಿಿಿ

ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಇದೇ ಅಕ್ಟೋಬರ್ 6 ರಂದು ರಿಲೀಸ್ ಆಗಿದೆ. ಚಿರು ಅಗಲಿದ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾ ಆಗಿರುವುದರಿಂದ ಅಭಿಮಾನಿಗಳು ಭಾವುಕರಾಗಿದ್ದಾರೆ. 

ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾಯುತ್ತಿದ್ದಾರೆ. ಚಿರಂಜೀವಿ ಸರ್ಜಾ ಅಗಲುವಾಗ 'ರಾಜಮಾರ್ತಾಂಡ' ಸಿನಿಮಾದ ಶೂಟಿಂಗ್ ಅನ್ನು ಮುಗಿಸಿದ್ದರು. ಆದರೆ, ಡಬ್ಬಿಂಗ್ ಮುಗಿಸಿರಲಿಲ್ಲ. ಅದನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಗಿಸಿಕೊಟ್ಟಿದ್ದಾರೆ. ಹೀಗಾಗಿ ಅಣ್ಣನ ನಟನೆಗೆ ತಮ್ಮ ಧ್ವನಿ ನೀಡಿರುವ ಸಿನಿಮಾವನ್ನು ನೋಡುವುದಕ್ಕೆ ಸಿನಿ ರಸಿಕರು ತುದಿಗಾಲಲ್ಲಿ ನಿಂತಿದ್ದಾರೆ.

ಚಿರು ಕೊನೆಯ ಸಿನಿಮಾ ರಿಲೀಸ್ ಆಗುತ್ತಿರುವ ಈ ಸಂದರ್ಭದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿಡಿಯೋ ಮಾಡಿ ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಚಿರು ಹಾಗೂ ಧ್ರುವ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸೋದನ್ನು ನೋಡುವ ಆಸೆಯಿತ್ತು ಎಂದು ಹೇಳಿಕೊಂಡಿದ್ದಾರೆ ಇನ್ನು ಧ್ರುವ ಸರ್ಜಾ ಚಿರುವನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ.

ಇತ್ತೀಚಿಗೆ ಅಣ್ಣ ಚಿರು ಸಮಾಧಿಯ ಬಳಿಯೇ ಹೋಗಿ ಮಲಗಿದ್ದು ಹಾಗೂ ಪತ್ನಿಯ ಸೀಮಂತ ಕಾರ್ಯಕ್ರಮ ಕೂಡ ಅಲ್ಲಿಯೇ ನೆರವೇರಿಸಿದ್ದರು ಇದೀಗ ಚಿರು ಸರ್ಜಾ ಮಗ ರಾಯನ್ ಸರ್ಜಾ ಮಗನೊಂದಿಗೆ ಕರಾಬು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಒಟ್ಟಿನಲ್ಲಿ ಇನ್ನಿಲ್ಲವಾದ ಅಣ್ಣನನ್ನು ಧ್ರುವ ಸರ್ಜಾ ರಾಯನ್ ಅಲ್ಲಿ ಕಾಣುತ್ತಿದ್ದಾರೆ.  (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.