ಧ್ರುವ ಸರ್ಜಾ ತನ್ನ ಇಬ್ಬರು ಮಕ್ಕಳಿಗೂ ಸನಾತನ ಧರ್ಮದ ಹೆಸರನ್ನು ನಾಮಕರಣ, ಉರಿದು ಬಿದ್ದ ಮೇಘನಾ ರಾಜ್

 | 
Hd

ನಟ ಧ್ರುವ ಸರ್ಜಾ ಅವರ ಮಕ್ಕಳಿಗೆ ನಾಮಕರಣ ಮಾಡಲಾಗಿದೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿನ್ನೆ ರಾಮ ಮಂದಿರ ಉದ್ಘಾಟನೆ ನಡೆದಿದೆ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಭವ್ಯವಾಗಿ ಜರುಗಿದೆ. ಇದೇ ದಿನ ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡುವುದಾಗಿ ನಟ ಧ್ರುವ ಸರ್ಜಾ ತಿಳಿಸಿದ್ದರು.

 ಇದೀಗ ಅದರಂತೆಯೇ, ಅದೇ ದಿನದಂದು ಮಕ್ಕಳಿಗೆ ಹೆಸರನ್ನಿಟ್ಟಿದ್ದಾರೆ. ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ ಎಂದು ಹೆಸರನ್ನಿಟ್ಟಿರುವ ಧ್ರುವ ಸರ್ಜಾ, ಮಗನಿಗೆ ಹಯಗ್ರೀವ ಡಿ ಸರ್ಜಾ ಎಂದು ಹೆಸರನ್ನು ಇಟ್ಟಿದ್ದಾರೆ.ರುದ್ರಾಕ್ಷಿ ಮತ್ತು ಹಯಗ್ರೀವ ಈ ಎರಡೂ ಹೆಸರುಗಳು ದೇವರಿಗೆ ಸಂಬಂಧಿಸಿದ ಹೆಸರುಗಳಾಗಿವೆ. ರುದ್ರಾಕ್ಷಿ ಎಂಬುದು ಪವಿತ್ರವಾದ ವಸ್ತುವಿನ ಹೆಸರಾಗಿದೆ. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವಭಕ್ತರ ಕೊರಳ ಮಣಿ-ಮಾಲೆಯಾಗಿ ಉಪಯೋಗಿಸಲ್ಪಡುತ್ತವೆ. 

ಇನ್ನು ಹಯಗ್ರೀವ ಎನ್ನುವುದು ವಿಷ್ಣುವಿನ ಕುದುರೆಮುಖದ ಅವತಾರದ ಹೆಸರಾಗಿದೆ. ಹೀಗೆ ತಮ್ಮ ಮಕ್ಕಳಿಗೆ ಧ್ರುವ ಸರ್ಜಾ ಅವರು ದೇವರ ಕುರಿತ ಹೆಸರುಗಳನ್ನು ನಾಮಕರಣ ಮಾಡಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಧ್ರುವ ಸರ್ಜಾ ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.2022ರ ಅಕ್ಟೋಬರ್ 2 ರಂದು ಹೆಣ್ಣು ಮಗುವಿನ ತಂದೆಯಾಗಿದ್ದರು ನಟ ಧ್ರುವ ಸರ್ಜಾ. 

ಹಾಗೆಯೇ, ಅವರು 2023ರ ಸೆಪ್ಟಂಬರ್‌ನಲ್ಲಿ ಗಂಡು ಮಗುವಿಗೆ ತಂದೆಯಾಗಿದ್ದರು. ಆದರೆ ಮಕ್ಕಳ ಹೆಸರುಗಳೇನು ಎಂಬುದನ್ನು ಅವರು ಎಲ್ಲಿಯೂ ಹೇಳಿರಲಿಲ್ಲ. ಮಗನಿಗೆ ಈ ನಾಲ್ಕು ತಿಂಗಳು ತುಂಬಿದ್ದರೆ, ಮಗಳಿಗೆ ಆಗಲೇ ಒಂದೂವರೆ ವರ್ಷ ತುಂಬಿದೆ. ಇದೀಗ ಈ ಇಬ್ಬರು ಕಂದಮ್ಮಗಳ ನಾಮಕರಣ ಸಮಾರಂಭವನ್ನು ಕನಕಪುರ ರಸ್ತೆಯಲ್ಲಿರುವ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಧ್ರುವ ಸರ್ಜಾ ಅವರು ಅದ್ದೂರಿಯಾಗಿ ನೆರವೇರಿಸಿದ್ದಾರೆ. 

ಈ ಹಿಂದೆ ಪತ್ನಿಯ ಸೀಮಂತ ಸಮಾರಂಭವನ್ನು ಕೂಡ ಇದೇ ಫಾರ್ಮ್‌ ಹೌಸ್‌ನಲ್ಲಿ ಧ್ರುವ ಸರ್ಜಾ ಅವರು ನೆರವೇರಿಸಿದ್ದರು. ಈ ಕಾರ್ಯಕ್ರಮಕ್ಕೆ ಸಂಜಯ್ ದತ್, ಜೋಗಿ ಪ್ರೇಮ್, ರಕ್ಷಿತಾ ಪ್ರೇಮ್, ನಿರ್ಮಾಪಕ ಸುಪ್ರೀತ್ ಮುಂತಾದವರು ಸಮಾರಂಭಕ್ಕೆ ಆಗಮಿಸಿದ್ದರು. ಪುತ್ರ ರಾಯನ್ ರಾಜ್ ಸರ್ಜಾ ಜೊತೆಗೆ ನಟಿ ಮೇಘನಾ ರಾಜ್ ಸರ್ಜಾ ಅವರು ಧ್ರುವ ಮಕ್ಕಳ ನಾಮಕರಣ ಸಮಾರಂಭದಲ್ಲಿ ಭಾಗಿಯಾಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.