ಪೊ,ಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಫಯಾಜ್? ನೇಹಾಳನ್ನೇ ಪ್ರೀತಿಸಿದ್ಯಾಕೆ

 | 
ರ್

ಪ್ರೀತಿಯೋ, ಲವ್ ಜಿಹಾದ್ ಎನು ಎಂದೇ ಅರಿಯಲಾಗದ ನೇಹಾ ಘಟನೆ ನಿಜಕ್ಕೂ ಹೆಣ್ಣು ಮಕ್ಕಳನ್ನು ಚಿಂತೆಗೀಡು ಮಾಡಿದೆ.ಕಾರ್ಪೋರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

 ಘಟನೆ ನಡೆದು ಒಂದು ಗಂಟೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು 4:45 ವೇಳೆಗೆ ನೇಹಾ ಕ್ಲಾಸ್​​ನಿಂದ‌ ಹೊರಗಡೆ ಬಂದಾಗ ಘಟನೆ ನಡೆದಿದೆ. ಫಯಾಜ್ ಎನ್ನುವ ವ್ಯಕ್ತಿ ಏಕಾಏಕಿ ಚಾಕುವಿನಿಂದ‌ ಇರಿದಿದ್ದಾನೆ. ಕೂಡಲೇ ಯುವತಿಯನ್ನು ಕಾಲೇಜ್ ಸಿಬ್ಬಂದಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮುನ್ನ ಯುವತಿ ಸಾವನ್ನಪ್ಪಿದ್ದಾಳೆ.

ಇನ್ನು ಆರೋಪಿ ಫಯಾಜ್ ತನ್ನೂರಿನತ್ತ ಪರಾರಿಯಾಗಲು ಪ್ರಯತ್ನಿಸಿದ್ದನು. ತಕ್ಷಣ ಆರೋಪಿಯನ್ನು ಬಂಧನ‌ ಮಾಡಲಾಗಿದೆ. ಬಿಸಿಎ ಓದುವಾಗಿನಿಂದಲು‌ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ಆರೋಪಿ ಹೇಳಿದ್ದಾನೆ. ಆದರೆ ಯುವತಿ ಅದನ್ನು ತಿರಸ್ಕಾರ ಮಾಡಿದ್ದಳು. ಈ ಕುರಿತು ಎಲ್ಲ ಆಯಾಮಗಳಿಂದ‌ ತನಿಖೆ ನಡೆಯುತ್ತಿದೆ ಎಂದು ರೇಣುಕಾ ಸುಕುಮಾರ್ ಹೇಳಿದ್ದಾರೆ.

ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಫಯಾಜ್   ತಂದೆ ಬಾಬಾ ಸಾಹೇಬ್, ತಾಯಿ ಮುಮತಾಜ್ ಇಬ್ಬರು ಸರ್ಕಾರಿ ಶಾಲೆಯ ಶಿಕ್ಷಕರು. ಫೇಲ್ ಆಗಿದ್ದರಿಂದ ಕಾಲೇಜ್ ಬಿಟ್ಟಿದ್ದ ಫಯಾಜ್ ಆರು ತಿಂಗಳು ಮನೆಯಲ್ಲಿಯೇ ಇದ್ದನು. ಪ್ರೀತಿ ಪ್ರೇಮ ಎಂದು ತಲೆ ಕೆಡಿಸಿಕೊಂಡಿದ್ದನು. ಕೊನೆಯಲ್ಲಿ ಇಂತಹಾ ದುರಂತಕ್ಕೆ ಕಾರಣವಾದನು ಎಂದಿದ್ದಾರೆ ಅವರ ತಂದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.