ಪಾಕ್ ಬೌಲರ್ ಮೇಲೆ ದರ್ಶನ್ ಜೊತೆ ನಟಿಸಿದ ನಟಿಗೆ ಲವ್ ಆಯ್ತಾ? ಮುದ್ದಾದ ನಟಿಗೆ ಆ ಆಸೆ ಬಂದಿದ್ದು ಯಾಕೆ ಗೊತ್ತಾ

 | 
Hd

ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ರಿಷಬ್ ಪಂತ್ ವಿಷ್ಯವಾಗಿ ನಟಿ ನ್ಯೂಸ್‌ನಲ್ಲಿದ್ದರು. ಈಗ ಪಾಕ್ ಕ್ರಿಕೆಟಿಗ ನಸೀಮ್ ಶಾ ವಿಷ್ಯವಾಗಿ ಮತ್ತೆ ಟ್ರೆಂಡಿಂಗ್‌ನಲ್ಲಿದ್ದಾರೆ. ಇವರಿಬ್ಬರ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ. 

ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸುತ್ತಿರುವ `ಐರಾವತ’ ನಟಿ ಈಗ ನಸೀಮ್ ಶಾಗೆ ಬೋಲ್ಡ್ ಆಗಿದ್ದಾರೆ. ಇನ್ನೂ ಊರ್ವಶಿ ರೌಟೇಲಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಪಾಕಿಸ್ತಾನದ ವೇಗದ ಬೌಲರ್ ನಸೀಮ್ ಶಾ ನಗುತ್ತಿರುವುದನ್ನು ಕಾಣಬಹುದು. 

ಈ ವೀಡಿಯೋದ ಹಿನ್ನೆಲೆಯಲ್ಲಿ ಅತೀಫ್ ಅಸ್ಲಾಂ ಅವರ ರೊಮ್ಯಾಂಟಿಕ್ ಹಾಡು ಪ್ಲೇ ಆಗುತ್ತಿದೆ. ಅದರ ನಂತರ ಊರ್ವಶಿ ಮತ್ತು ನಸೀಮ್ ನಡುವೆ ಏನೋ ನಡೆಯುತ್ತಿದೆ ಎಂದು ಊಹಿಸಲಾಗಿದೆ. ಇಬ್ಬರು ಕಣ್ಣಲ್ಲೇ ಮಾತನಾಡಿದ್ದಾರೆ. ಸದ್ಯ ವೀಡಿಯೋ ಸಖತ್‌ ಟ್ರೋಲ್‌ ಆಗುತ್ತಿದೆ.ವೀಡಿಯೋದಲ್ಲಿ ನಸೀಮ್‌ನ ಈ ನಗುವನ್ನು ನೋಡಿ ಊರ್ವಶಿ ರೌಟೇಲಾಳ ಕ್ಯೂಟ್ ಆಗಿ ಸ್ಮೈಲ್ ಮಾಡಿದ್ದಾರೆ. 

ಆದರೆ, ಸದ್ಯಕ್ಕೆ ಇಬ್ಬರ ನಡುವಿನ ಸಂಬಂಧದ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಈ ಮೊದಲು ಅವರು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಹಿಂದೆ ಬಿದ್ದಿದ್ದರು. ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿ ಸುದ್ದಿ ಆಗಿದ್ದರು.ಊರ್ವಶಿ ರಾಟೆಲಾ ಹಾಗೂ ರಿಷಭ್ ಪಂತ್ ಇಬ್ಬರೂ ಡೇಟಿಂಗ್ ಮಾಡಿದ್ದರು ಎನ್ನಲಾಗಿತ್ತು. ಬಳಿಕ ಇಬ್ಬರೂ ಬೇರೆ ಆದರು. ಪಂತ್ ಈ ವಿಚಾರದಲ್ಲಿ ರಹಸ್ಯ ಕಾಪಾಡಿಕೊಂಡು ಬಂದಿದ್ದರು. 

ಆದರೆ, ಊರ್ವಶಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು. ‘ರಿಷಭ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು’ ಎಂದೆಲ್ಲ ಹೇಳಿಕೊಂಡಿದ್ದರು. ಸಿನಿಮಾ ವಿಚಾರಕ್ಕೆ ಬರೋದಾದರೆ ‘ಪುಷ್ಪ 2’ ಚಿತ್ರದಲ್ಲಿ ಊರ್ವಶಿ ವಿಶೇಷ ಹಾಡಿಗೆ ಹೆಜ್ಜೆ ಹಾಕುತ್ತಾರೆ ಎನ್ನಲಾಗಿದೆ.  (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.