ಬಿ.ಕಿನಿ ಬಟ್ಟೆ ಹಾಕಿ ನೀರಿಗಿಳಿದ ಡಿಂಪಲ್ ಕ್ವಿನ್, ಬಾಯಿ ಮೇಲೆ ಬೆರಳಿಟ್ಟ ಕನ್ನಡಿಗರು

 | 
Yuu

ಕೊಡಗಿನ ಬೆಡಗಿ ಡೈಸಿ ಬೋಪಣ್ಣ ಕನ್ನಡ, ತಮಿಳು, ತೆಲಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಸಕ್ರಿಯವಾಗಿರುವ ನಟಿ. ಡೈಸಿ ಬೋಪಣ್ಣ ಸಾಮಾಜಿಕ ಜಾಲತಾಣದಲ್ಲಿ ಬಿಕಿನಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಟಿ ಡೈಸಿ ಬೋಪಣ್ಣ ಗ್ರೀನ್ ಮತ್ತು ಬ್ಲ್ಯಾಕ್ ಬಿಕಿನಿ ಧರಿಸಿದ್ದಾರೆ. 

ಅಲ್ಲದೇ ಎಲ್ಲಾ ಫೋಟೋಗಳಲ್ಲೂ ಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ. ನೀರಿನಲ್ಲಿ ನಗುತ್ತಾ ಚೆಂದವಾಗಿ ಕಾಣ್ತಾ ಇದ್ದಾರೆ.ನಟಿ ಡೈಸಿ ಬೋಪಣ್ಣ ಶೇರ್ ಮಾಡಿರುವ ಫೋಟೋಗಳಿಗೆ 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಅಲ್ಲದೇ ಭೂಮಿಯ ಬಹುಪಾಲು ಹೀಗೆ ಇರಬೇಕು ಎಂದು ನಟಿ ಬರೆದುಕೊಂಡಿದ್ದಾರೆ. 

ಪಂಚ ಭಾಷೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡೈಸಿ ಉಪೇಂದ್ರ, ಶಿವಣ್ಣ, ದರ್ಶನ್, ಕಮಲ್ ಹಾಸನ್, ಮಮ್ಮೂಟಿ ,ಅಕ್ಷಯ ಕುಮಾರ್ ಮುಂತಾದ ಟಾಪ್ ನಟರೊಂದಿಗೆ ನಟಿಸಿದ್ದಾರೆ. ಬಿ.ಜಯಶ್ರೀರವರ ಸ್ಪಂದನ ನಾಟಕ ತಂಡದಲ್ಲಿ ಕೆಲಕಾಲ ನಾಟಕಗಳಲ್ಲಿ ನಟಿಸುತ್ತಿದ್ದ ಡೈಸಿ ಕವಿತಾ ಲಂಕೇಶ್‍ರ `ಬಿಂಬ' ಚಿತ್ರದಿಂದ ಸಿನಿರಂಗ ಪ್ರವೇಶಿಸಿದರು. ಈ ಚಿತ್ರ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆಯಿತು. 

ತೆಲುಗುವಿನಲ್ಲಿ ರವಿತೇಜ ಜೊತೆ `ಚಂಟಿ' ಚಿತ್ರ ಮಾಡಿದರು. ಪ್ರಿಯದರ್ಶನ್ ನಿರ್ದೇಶನದ ಕಿಲಾಡಿ ಅಕ್ಷಯಕುಮಾರ್ ಅಭಿನಯದ `ಗರಂ ಮಸಲಾ' ಚಿತ್ರದಿಂದ ಬಾಲಿವುಡ್ ಪ್ರವೇಶಿಸಿದರು. ಅಲ್ಲದೇ ಡೈಸಿ ಸುಮಾರು 150 ಜಾಹೀರಾತುಗಳಲ್ಲಿ ನಟಿಸಿದ್ದಾರೆ.