1,413 ಕೋಟಿ ರೂಪಾಯಿ ಮೂಲಕ ದೇಶದ ಎರಡನೇ ಶ್ರೀಮಂತ ರಾಜಕಾರಣಿ ಪಟ್ಟಿಗೆ ಸೇರಿದ ಡಿಕೆ ಶಿವಕುಮಾರ್

 | 
ಗ
ಭಾರತದಲ್ಲಿ ರಾಜಕಾರಣಿಗಳ ಸಾಮ್ರಾಜ್ಯ ವರ್ಷದಿಂದ ವರ್ಷಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ನಾವೇ ವೋಟ್‌ ಹಾಕಿ ಗೆಲ್ಲಿಸಿದಂಥಹ ರಾಜಕಾರಣಿಗಳು ಸಾವಿರಾರು ಕೋಟಿ ಒಡೆಯರಾಗಿದ್ದಾರೆ. ಭಾರತ ಟಾಪ್‌ 10 ಶ್ರೀಮಂತ ಶಾಸಕರ ಪಟ್ಟಿ ಈಗ ರಿಲೀಸ್‌ ಆಗಿದೆ. ಭಾರತದ ಟಾಪ್‌ 10 ಶ್ರೀಮಂತರ ಶಾಸಕರ ಪಟ್ಟಿಯಲ್ಲಿ ನಮ್ಮ ಕರ್ನಾಟಕದ ನಾಲ್ವರು ಶಾಸಕರು ಇದ್ದಾರೆ. 
ಅದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಅತ್ಯಂತ ಶ್ರೀಮಂತ ರಾಜಕಾರಣಿ ಆಗಿ ಹೊರಹೊಮ್ಮಿದ್ದಾರೆ. ಸಹಜವಾಗಿ ಸಾಮಾನ್ಯ ಜನರಿಗೆ ಯಾರಪ್ಪ ದೇಶದ ನಂಬರ್‌ 1 ಶ್ರೀಮಂತ ರಾಜಕಾರಣಿ, ನಮ್ಮ ಕರ್ನಾಟಕದಲ್ಲಿ ಯಾರಿದ್ದಾರೆ ಎಂದು ತಿಳಿದುಕೊಳ್ಳುವ ಕೌತುಕ ಇದ್ದೇ ಇರುತ್ತೆ, ಅದರಂತೆ ಈಗ ಭಾರತದ ಟಾಪ್‌ 10 ಶ್ರೀಮಂತ ಶಾಸಕರ ಪಟ್ಟಿ ರಿಲೀಸ್‌ ಆಗಿದೆ. 
ನಮ್ಮ ಶಾಸಕರೇನು ಬಡವರಲ್ಲ ಹೌದು ದೇಶದ ಶ್ರೀಮಂತ ಶಾಸಕರ ಪಟ್ಟಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮಸ್ ಬಿಡುಗಡೆ ಮಾಡಿದ್ದು, ಟಾಪ್ 10 ಶಾಸಕರ ಪೈಕಿ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ.28 ರಾಜ್ಯ, 3 ಕೇಂದ್ರಾಡಳಿತ ಪ್ರದೇಶದಲ್ಲಿನ ಒಟ್ಟು 4,092 ಶಾಸಕರ ಆಸ್ತಿ ಅಧ್ಯಯನದ ಮಾಡಿ ಈ ವರದಿ ಬಿಡುಗಡೆ ಮಾಡಿದ್ದು, ಈ ಪೈಕಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದ್ದು, 223 ಶಾಸಕರ ಒಟ್ಟು ಆಸ್ತಿ 14,179 ಕೋಟಿ ರೂ.ನಷ್ಟಿದೆ.
ಈಗಾಗಲೇ ಬಿಡುಗಡೆಯಾಗಿರುವ ವರದಿಯ ಪ್ರಕಾರ, ಮುಂಬೈನ ಘಾಸ್ಕೋಪರ್ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿಯ ಪರಾಗ್ ಶಾ 3,383 ಕೋಟಿ ರೂ. ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕೆಪಿಸಿಸಿ ಅಧ್ಯಕ್ಷ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 1,413 ಕೋಟಿ ರೂ. ಆಸ್ತಿಯೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ಕರ್ನಾಟಕದವರೇ ಆದ ಗೌರಿಬಿದನೂರಿನ ಪಕ್ಷೇತರ ಶಾಸಕ ಕೆ.ಹೆಚ್.ಪುಟ್ಟಸ್ವಾಮಿ ಗೌಡ 1,267 ಕೋಟಿ ಆಸ್ತಿಯೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ 4ನೇ ಸ್ಥಾನದಲ್ಲಿ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಾ ಕೃಷ್ಣ ಹಾಗೂ 1ಂನೇ ಸ್ಥಾನದಲ್ಲಿ ಹೆಬ್ಬಾಳ ಕ್ಷೇತ್ರದ ಬೈರತಿ ಸುರೇಶ್ ಕ್ರಮವಾಗಿ 1,156 ಕೋಟಿ ರೂ. ಆಸ್ತಿ ಹಾಗೂ 648 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. ಕರ್ನಾಟಕದ ಎಲ್ಲಾ ಶಾಸಕರ ಆಸ್ತಿ ಒಟ್ಟು 14,179 ಕೋಟಿ ರೂ. ಎಂದು ವರದಿ ತಿಳಿಸಿದೆ. ಇನ್ನೂ ವರದಿಯ ಪ್ರಕಾರ, ಅತೀ ಕಡಿಮೆ ಆಸ್ತಿ ಹೊಂದಿರುವ ಶಾಸಕ ಎಂದು ಪಶ್ಚಿಮ ಬಂಗಾಳದ ಇಂಡಸ್ ಕ್ಷೇತ್ರದ ಶಾಸಕ ನಿರ್ಮಲ್ ಕುಮಾರ್ ಧಾರಾ ಎಂದು ತಿಳಿಸಿದ್ದು, ಇವರ ಆಸ್ತಿ ಕೇವಲ 1,700 ರೂ. ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.