ಮಾ.ಬಿಜೆಪಿ ಶಾಸಕಿಯ ಮನೆಯಲ್ಲಿ ಡಿಕೆ ಶಿವಕುಮಾರ್ ಭರ್ಜರಿ ಊಟ, ಇಡ್ಲಿ ತಿಂದು ತೃಪ್ತಿಗೊಂಡ ಡಿಸಿಎಮ್

 | 
Hg

ಡಿಸಿಎಂ ಡಿ ಕೆ ಶಿವಕುಮಾರ್ರು ಮಾಜಿ ಸಚಿವ ಕೃಷ್ಣಪ್ಪ ಅವರ ಪುತ್ರಿ, ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ಅವರ ಕೆ.ಆರ್ ಪುರಂ ದೇವಸಂದ್ರದ ನಿವಾಸಕ್ಕೆ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬುಧವಾರ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ​, ಇವತ್ತು ಕೃಷ್ಣ ಜನ್ಮಾಷ್ಟಮಿ ಹಬ್ಬ, ನಮ್ಮ ಸಹೋದರಿ ಮನೆಗೆ ಬಂದಿದ್ದೆ. 

ಕೃಷ್ಣಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು, ಅವರ ಮಗಳು ಪೂರ್ಣಿಮಾ ಊಟಕ್ಕೆ ಕರೆದಿದ್ದರು. ಊಟ ಮಾಡಿದೆ, ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ನಾವು ಆಪರೇಷನ್ ಹಸ್ತ ಮಾಡಲ್ಲ, ಸಹಕಾರದ ಸರ್ಕಾರ ನಾವು ಮಾಡ್ತೇವೆ ಎಂದು ಹೇಳಿದರು. ಆ ಬಳಿಕ ಮಾತನಾಡಿದ ಮಾಜಿ ಶಾಸಕಿ ‌ಪೂರ್ಣೀಮಾ ಶ್ರೀನಿವಾಸ್, ಇವತ್ತು ಡಿ‌ಕೆ ಶಿವಕುಮಾರ್ ಅವರು ನಮ್ಮ ಮನಗೆ ಬಂದಿದ್ದರು. 

ಹಬ್ಬದ ಕಾರಣಕ್ಕೆ ಬಂದು ಊಟ ಮಾಡಿ ಹೋದರು. ಕಾಂಗ್ರೆಸ್ಸಿನಿಂದ ನನಗೆ ಆಹ್ವಾನ ಇದೆ, ಆದರೆ ನಾನು ಬಿಜೆಪಿಯಲ್ಲಿ ಇದ್ದೇನೆ, ಬಿಜೆಪಿ ಬಿಡುವ ಯೋಚನೆ ಮಾಡಿಲ್ಲ. ಚುನಾವಣೆಗೂ ಮುಂಚಿತವಾಗಿ ಈ ಚರ್ಚೆ ಇತ್ತು, ಆದರೆ ನಾನು ಎಲ್ಲಿಯೂ ಬಿಜೆಪಿ ಬಿಡ್ತೇನೆ ಅಂತ ಹೇಳಲಿಲ್ಲ. ಈಗಲೂ ಕೂಡ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಅಲ್ಲದೇ, ಹೋಗುವುದಾದರೆ ಎಲ್ಲರಿಗೂ ಹೇಳಿಯೇ ಹೋಗುತ್ತೇನೆ. ಕದ್ದು ಮುಚ್ಚಿ ನಾನು ಕಾಂಗ್ರೆಸ್ ಸೇರಲ್ಲ. ನನಗೆ ಬಿಜೆಪಿ ಮೇಲೆ ಯಾವುದೇ ಅಸಮಾಧಾನ ಇಲ್ಲ. ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನನಗೆ ಯಾವುದೇ ಅಸಮಧಾನ ಇಲ್ಲ, ಆದಷ್ಟು ಬೇಗ ವಿಪಕ್ಷ ನಾಯಕ ಹಾಗೂ ರಾಜ್ಯಧ್ಯಕ್ಷರ ಆಯ್ಕೆ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.