ಹಿಂದೂ ದೇವಾಲಯಕ್ಕೆ ಹೆಚ್ಚಾಗಿ ಹೋಗುತ್ತಿರುವ ಡಿಕೆಶಿ; ಬಿಜೆಪಿ ಜೊತೆ ಸೇರರ್ತಾರ ಡಿ ಕೆ ಶಿವಕುಮಾರ್?
Updated: Jan 14, 2025, 09:24 IST
|

ಕೆಲ ದಿನಗಳ ಹಿಂದೆ ನ್ಯಾಷನಲ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ತಮಗೂ ಹಾಗೂ ಹೈಕಮಾಂಡ್ ನಡುವೆ ಒಪ್ಪಂದ ಆಗಿದೆ ಎಂಬುದನ್ನು ಬಹಿರಂಗಪಡಿಸಿದ್ದರು. ಈ ಹೇಳಿಕೆಯ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಬಣದ ನಾಯಕರುಗಳು ಅಲೆರ್ಟ್ ಆಗಿದ್ದಾರೆ. ಮಾತ್ರವಲ್ಲ ಕಾಂಗ್ರೆಸ್ ನಾಯಕರುಗಳು ಡಿನ್ನರ್ ಪಾಲಿಟಿಕ್ಸ್ ಕೂಡ ನಡೆಸುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿಕೆ ಶಿವಕುಮಾರ್ ಮಾತ್ರ ಯಾವುದಕ್ಕೂ ಹೆಚ್ಚಿನ ಮಹತ್ವ ನೀಡದೆ ಸೈಲೆಂಟ್ ಆಗಿ ದೇವಸ್ಥಾನಗಳಿಗೆ ಭೇಟಿ ಕೊಡ್ತಾ ಇದ್ದಾರೆ.ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆಯ ಕೂಗು ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಮಾತ್ರ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದಾರೆ. ಆದ್ರೆ, ಡಿಕೆ ಶಿವಕುಮಾರ್ ನಿರಂತರವಾಗಿ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಹೇಗಾದರೂ ಮಾಡಿ ಇದೇ ಅವಧಿಯಲ್ಲಿ ಅಧಿಕಾರ ಹಿಡಿಯಬೇಕೆಂದು ಪಣ ತೊಟ್ಟಿದ್ದಾರೆ.
https://kannada.news18.com/news/state/astrologer-advised-to-dk-shivakumar-to-visit-temples-ddr-1967856.html
ಆದ್ರೆ, ವಿರೋಧಿಗಳು ನಿರಂತರವಾಗಿ ಡಿಕೆ ಶಿವಕುಮಾರ್ ವಿರುದ್ಧ ಹೇಳಿಕೆ ಕೊಡ್ತಾನೆ ಬಂದಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಅಹಿಂದ ನಾಯಕರುಗಳು ಡಿಕೆ ವಿರುದ್ಧ ಹೇಳಿಕೆ ನೀಡ್ತಾ ಬಂದಿದ್ದಾರೆ. ಆದ್ರೆ, ಡಿಕೆ ಸೈಲೆಂಟ್ ಹಿಂದೆ ಕೂಡ ಪ್ಲಾನ್ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಡಿಕೆ ಶಿವಕುಮಾರ್ ಅವರಿಗೆ ಖ್ಯಾತ ಜ್ಯೋತಿಷಿಯೊಬ್ಬರು ಶೀಘ್ರವೇ ನಿಮಹಗೆ ರಾಜಯೋಗವಿದೆ. ಸೈಲೆಂಟ್ ಆಗಿರಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಹಾಗಾಗಿಯೇ ಡಿಕೆ ಶಿವಕುಮಾರ್ ಅವರು ಡಿನ್ನರ್ ಮೀಟಿಂಗ್‌ಗಳ ಬಗ್ಗೆ ಮೌನವಾಗಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲ ಡಿಕೆ ಶಿವಕುಮಾರ್ ಅವರು ಸೈಲೆಂಟ್ ಆಗಿಯೇ ಇದ್ದು, ದೇವರನ್ನ ಪ್ರಾರ್ಥಿಸು ಶುಭವಾಗಲಿದೆ ಎಂದಿದ್ದಾರಂತೆ, ಜ್ಯೋತಿಷಿ ಸಲಹೆ ಮೇರೆಗೆ ಡಿಕೆ ಶಿವಕುಮಾರ್ ಅವರು ನಿರಂತರವಾಗಿ ಟೆಂಪಲ್ ರನ್ ಮಾಡ್ತಾ ಇದ್ದಾರೆ ಎನ್ನಲಾಗಿದೆ. ಮಾತ್ರವಲ್ಲ ಹೋಮ, ಹವನ, ಪೂಜೆ ಮಾಡಿಸ್ತಿರೋದು ಕೂಡ ಇದೇ ಕಾರಣಕ್ಕೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.