ತನಿಷಾ ತಂಗಿ ಎಷ್ಟು ಮುದ್ದಾಗಿದ್ದಾರೆ ಗೊತ್ತಾ, ಅಕ್ಕನನ್ನೇ ನೋಡುತ್ತ ನಿಂತ ಸಹೋದರಿ

 | 
ಪಾ

ಬಿಗ್‌ಬಾಸ್‌ ಗ್ರ್ಯಾಂಡ್ ಪ್ರೀಮಿಯರ್‌ನ ಝಗಮಗಿಸುವ ವೇದಿಕೆಯಲ್ಲಿ ಸುದೀಪ್‌ ನಿಮ್ಮ ಮೇಲೆ ನಿಮಗೆಷ್ಟು ವಿಶ್ವಾಸವಿದೆ ಎಂದು ಪ್ರಶ್ನೆಯನ್ನು ಕೇಳಿದಾಗ ತನಿಷಾ ಕುಪ್ಪಂಡ  ಕ್ಷಣಮಾತ್ರವೂ ಯೋಚಿಸದೆ, very much ಎಂದಿದ್ದರು. ಆ ಮಾತಿನಲ್ಲಷ್ಟೇ ಅಲ್ಲ, ಅವರ ನಿಲುವಿನಲ್ಲಿ, ಮುಖದಲ್ಲಿ, ನಗುವಿನಲ್ಲಿಯೂ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು.  ಆ ವಿಶ್ವಾಸವೇ ಅವರನ್ನು ಬಿಗ್‌ಬಾಸ್ ಮನೆಯೊಳಗೆ ನೂರನೇ ದಿನದ ಗಡಿಯನ್ನೂ ದಾಟುವಂತೆ ಮಾಡಿದೆ. 

ಅಂತಿಮ ಹಂತಕ್ಕೆ ಒಂದೇ ಒಂದು ಹೆಜ್ಜೆ ಬಾಕಿ ಇರುವಾಗಲ ತನಿಷಾ ಮನೆಯಿಂದ ಅನಿರೀಕ್ಷಿತವಾಗಿ ಹೊರಬಿದ್ದರು. ಬಿಗ್‌ಬಾಸ್ ಮನೆಯಿಂದ ಹೊರ ಬಂದ ತನಿಷಾ ಪ್ರತಿಕ್ರಿಯಿಸಿದ್ದಾರೆ. ಆದರೆ ಬಿಗ್‌ಬಾಸ್ ಜರ್ನಿ ಬಗ್ಗೆ ಮಾತನಾಡಿಲ್ಲ. ಅಭಿಮಾನಿಗಳಿಂದ ಸಿಕ್ಕ ರೆಸ್ಪಾನ್ಸ್ ಬಗ್ಗೆ ಸ್ಪಂದಿಸಿದ್ದಾರೆ. ತನಿಷಾ ಬಿಗ್‌ಬಾಸ್ ಮನೆಯಲ್ಲಿದ್ದಾಗ ಆಕೆಯ ಆಟವನ್ನು ನೋಡಿ ಬೆಂಕಿ ಬಂತೋ ಎನ್ನುವ ಆಲ್ಬಮ್ ಸಾಂಗ್ ರಿಲೀಸ್ ಆಗಿತ್ತು. ಶಶಾಂಕ್ ಶೇಷಗಿರಿ ಮ್ಯೂಸಿಕ್ ಮಾಡಿ ಹಾಡಿದ್ದರು. ಶಮಂತ್ ನಾಗರಾಜ್ ಸಾಹಿತ್ಯ ಬರೆದಿದ್ದರು. ಈ ಹಾಡು ಕೇಳಿ ತನಿಷಾ ಖುಷಿ ವ್ಯಕ್ತಪಡಿಸಿದ್ದಾರೆ.

ಶಮಂತ್ ನಾಗರಾಜ್ ತುಂಬಾ ಚೆನ್ನಾಗಿ 'ಬೆಂಕಿ ಬಂತೋ' ಹಾಡು ಬರೆದಿದ್ದಾರೆ. ನನಗೆ ಹಾಡು ಕೇಳಿ ಬಹಳ ಖುಷಿ ಆಯಿತು. ಎಲಿಮಿನೇಷ್ ಆದೆ ಎನ್ನುವ ಬೇಸರದಲ್ಲಿ ಬಂದೆ ಆದರೆ ಹಾಡು ಕೇಳಿ ಬಹಳ ಖುಷಿಪಟ್ಟೆ. ನನ್ನನ್ನು ಇಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡು ಹಾಡು ಬರೆದಿದ್ದು ಸಂತೋಷ ಆಗುತ್ತಿದೆ. ನೀವು ನನ್ನ ಅಭಿಮಾನಿ ಅಂತ ಗೊತ್ತಾಯ್ತು, ಆದಷ್ಟು ಬೇಗ ಭೇಟಿ ಆಗೋಣ ಎಂದಿದ್ದಾರೆ. ಅದರ ಬೆನ್ನಲ್ಲೇ ದೇವಸ್ಥಾನಗಳಿಗೆ ತಂಗಿ ಅಮೃತಾ ಜೊತೆ ಭೇಟಿ ನೀಡಿದ್ದಾರೆ.ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಹೌದು ಅವರ ತಂಗಿ ಅಮೃತಾ ಅವರು ಅಕ್ಕನನ್ನು ಬಹಳ ಮಿಸ್ ಮಾಡಿಕೊಂಡಿದ್ದಾರೆ. ಹಾಗಾಗಿ ಅಕ್ಕಾನೊಂದಿಗೆ ಎಲ್ಲೆಡೆ ಹೆಜ್ಜೆ ಹಾಕಿದ್ದಾರೆ. ಇದೆ ಮೊದಲ ಬಾರಿಗೆ ಅವರು ಇಷ್ಟೆಲ್ಲಾ ದಿನ ಅಕ್ಕನನ್ನು ಬಿಟ್ಟು ಉಳಿದಿದ್ದು. ಅಕ್ಕ ಫೈನಲ್ ತಲುಪುತ್ತಾರೆ ಎಂದು ಕೊಂಡಿದ್ದೆ. ಆದರೂ ಇದ್ದಷ್ಟು ದಿನ ಚೆನ್ನಾಗಿ ಆಡಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.