ಪೊಗರು ಚಿತ್ರದಲ್ಲಿ ಕರಾಬು ಆಗಿದ್ದ ಧ್ರುವ ಸಜಾ೯ ಈಗ ಹೇಗಾಗಿದ್ದಾರೆ ಗೊತ್ತಾ

 | 
ಕ್

ಧ್ರುವ ಸರ್ಜಾ ಅಭಿನಯಿಸಿದ್ದು ಬೆರಳಣಿಕಯಷ್ಟು ಚಿತ್ರಗಳಾದರೂ ಅದರಲ್ಲಿ ಅವರ ಹಾರ್ಡ್ವರ್ಕ್ ಎದ್ದು ಕಾಣುತ್ತಿತ್ತು. ಹೌದು ಇವರು ಅಭಿನಯಿಸಿದ ಚಿತ್ರಗಳೆಲ್ಲವೂ ಹಿಟ್ ಚಿತ್ರಗಳೇ ಆಗಿವೆ. ಇದೀಗ ಜೋಗಿ ಪ್ರೇಮ್ ನಿರ್ದೇಶನದ ಕೆ.ಡಿ ಸಿನಿಮಾಗಾಗಿ ನಟ ಧ್ರುವ ಸರ್ಜಾ ತೂಕ ಇಳಿಸಿಕೊಂಡಿದ್ದಾರೆ. ಈ ವಿಷಯವನ್ನು ಸ್ವತಃ ಪ್ರೇಮ್ ಅವರೇ ಹಂಚಿಕೊಂಡಿದ್ದಾರೆ.

ಕೆವಿಎನ್‌ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದ್ದು ಧ್ರುವ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಏಕೆಂದರೆ ಇದ್ದಕ್ಕಿದ್ದಂತೆ ಸಣ್ಣಗಾಗಿರು ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.ಕೆಡಿ ಯುದ್ಧ ಭೂಮಿಗೆ ಎಂಟರ್‌ ಆಗಲು ಧ್ರುವ ಸರ್ಜಾ ರೆಡಿಯಾಗಿದ್ದಾರೆ. 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಯುದ್ಧವು ನಾಯಕನನ್ನು ಬಿಡಿಸಲು ಸಿದ್ಧವಾಗಿದೆ ಎಂದು ಪ್ರೇಮ್ ಬರೆದುಕೊಂಡಿದ್ದಾರೆ.

ಕೆಡಿ ಸಿನಿಮಾ ಅನೌನ್ಸ್ ಮಾಡಿದ ಆರಂಭದಲ್ಲಿ ಸೆರೆ ಹಿಡಿದ ಫೋಟೋ ಮತ್ತು ಈಗ ತೂಕ ಇಳಿಸಿಕೊಂಡ ನಂತರ ಧ್ರುವ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆಂದು ಪ್ರೇಮ್ ಅಪ್ಲೋಡ್‌ ಮಾಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಧ್ರುವ ತೂಕ ಕಳೆದುಕೊಂಡಿರುವುದಕ್ಕೆ ಅಭಿಮಾನಿಗಳು ಗಾಬರಿ ಆಗಿದ್ದಾರೆ. ಸಣ್ಣ ದಪ್ಪ ಅಂತ ಆಗಾಗ ಬದಲಾಗುವುದಕ್ಕೆ ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪಾತ್ರಕ್ಕಾಗಿ ಧ್ರುವ ಸರ್ಜಾ ಡೆಡಿಕೇಷನ್ ಹೇಗಿರುತ್ತೆ ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. ಒಂದು ಸಿನಿಮಾ ಮುಗಿಯೋವರೆಗೂ ಮತ್ತೊಂದು ಸಿನಿಮಾ ಒಪ್ಪಿಕೊಳ್ಳದ ಧ್ರುವ ಪಾತ್ರಕ್ಕಾಗಿ ತೂಕ ಹೆಚ್ಚಿಸುವುದು, ಇಳಿಸುವುದು, ಬಾಡಿ ಬಿಲ್ಡ್ ಮಾಡುವುದನ್ನು ಮಾಡುತ್ತಲೇ ಇರುತ್ತಾರೆ.

ಈ ಹಿಂದೆ ಪೊಗರು ಚಿತ್ರದ ಶಿವನ ಪಾತ್ರಕ್ಕೂ ಇಂತದ್ದೇ ಸಾಹಸ ಮಾಡಿದ್ದರು. ಇದೀಗ ಇದೀಗ 'ಕೆಡಿ' ಚಿತ್ರಕ್ಕಾಗಿ 18 ಕೆಜಿ ತೂಕ ಇಳಿಸಿಕೊಂಡು ಸಿಕ್ಕಾಪಟ್ಟೆ ಸ್ಲಿಮ್ ಆಗಿ ದರ್ಶನ ಕೊಟ್ಟಿದ್ದಾರೆ. ಹಿಂದೆ ತಾವು ದಪ್ಪಗೆ ಇದ್ದ ಫೋಟೊ ಹಾಗೂ ಈಗ ಸಣ್ಣಗಾಗಿರುವ ಫೋಟೊವನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.