ಅಭಿಷೇಕ್ ಅಂಬರೀಶ್ ಅರಶಿನ ಶಾಸ್ತ್ರ ಎಷ್ಟೊಂದು ಅದ್ಧೂರಿಯಾಗಿತ್ತು ಗೊತ್ತಾ, ಸ್ವತಃ ಮೋದಿಯೇ ಶಾಕ್

 | 
Nx

ರೆಬೆಲ್‌ ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಈಗ ಮದುವೆ ಸಂಭ್ರಮದಲ್ಲಿದ್ದಾರೆ. ಜೂನ್‌ 5ರಂದು ಅದ್ಧೂರಿಯಾಗಿ ಅಭಿಷೇಕ್-ಅವಿವ ಮದುವೆ ನಡೆಯಲಿದ್ದು, ಜೂನ್‌ 7ರಂದು ಆರತಕ್ಷತೆ ಸಮಾರಂಭ ನಡೆಯಲಿದೆ. ಬೆಂಗಳೂರಿನಲ್ಲಿರುವ ಅಂಬಿ ಮನೆಯಲ್ಲಿ ಈಗಾಗಲೇ ಮೆಹೆಂದಿ, ಅರಿಷಿಣ ಶಾಸ್ತ್ರ ಭರ್ಜರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಕೆಲ ಗಣ್ಯರು ಆಗಮಿಸಿದ್ದರು. 

ಕಳೆದ ನಾಲ್ಕೈದು ವರ್ಷಗಳಿಂದ ಅಭಿಷೇಕ್‌ ಅಂಬರೀಶ್‌- ಅವಿವ ಬಿದ್ದಪ್ಪ ಪ್ರೀತಿ ಮಾಡುತ್ತಿದ್ದರು. ಆದರೆ ಎಲ್ಲಿಯೂ ಪ್ರೀತಿ ಬಗ್ಗೆ ಸುಳಿವು ನೀಡಿರಲಿಲ್ಲ. ಈಗ ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗುತ್ತಿದ್ದಾರೆ. ಅಭಿಷೇಕ್‌- ಅವಿವ ವಿವಾಹದ ಆಮಂತ್ರಣ ಕೂಡ ಸಖತ್ ಅದ್ದೂರಿಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅರಿಷಿಣ ಶಾಸ್ತ್ರ, ಮೆಹೆಂದಿ ಕಾರ್ಯಕ್ರಮಕ್ಕೆ ಅಭಿಷೇಕ್ ಅದ್ದೂರಿಯಾಗಿ ರೆಡಿ ಆಗಿದ್ದರು.

ಜೂನ್‌ 4ರಂದು ಬೆಂಗಳೂರಿನ ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್‌ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಗ್ಗೆ ಕರ್ಕಾಟಕ ಲಗ್ನದಲ್ಲಿ ಈ ಜೋಡಿಯ ಮದುವೆ ಸಮಾರಂಭ ನಡೆಯಲಿದೆ. ಜೂನ್‌ 7ರಂದು ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಆಗಲಿದೆ. 

ಅಂಬರೀಶ್ ಹಾಗೂ ಸುಮಲತಾ ಅವರು ನಟನೆ ಜೊತೆಗೆ ರಾಜಕೀಯದಲ್ಲಿಯೂ ನಂಟು ಬೆಳೆಸಿಕೊಂಡಿರುವುದರಿಂದ ಸಿನಿಮಾ- ರಾಜಕೀಯ ಕ್ಷೇತ್ರಗಳ ಗಣ್ಯರು ಅಭಿಷೇಕ್‌- ಅವಿವ ಆರತಕ್ಷತೆಗೆ ಬರಲಿದ್ದಾರೆ. ಮದುವೆಗೆ ಮಾತ್ರ ಆಪ್ತ ಬಳಗದವರಿಗಷ್ಟೇ ಆಹ್ವಾನ ನೀಡಲಾಗಿದೆ. ಜೂನ್‌ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. 

ಇನ್ನು ಅಂಬರೀಶ್ ತಂಗಿ ಅರಿಶಿನ ಶಾಸ್ತ್ರ ಮಾಡಿ ಅಣ್ಣ ಅಂಬರೀಶ್ ಅವರನ್ನು ನನಪಿಸಿಕೊಂಡು ಕಣ್ಣೀರು ಇಟ್ಟಿದ್ದಾರೆ. ಈಗಾಗಲೇ ಮದುವೆ ಶಾಶ್ತ್ರಗಳು ನಡೆಯುತ್ತಿವೆ. ಬಿಳಿ ಬಣ್ಣದ ಉಡುಗೆಯಲ್ಲಿ ಅಭಿಷೇಕ್ ಅರಿಶಿನ ಶಾಸ್ತ್ರದಲ್ಲಿ ಮಿಂಚಿದ್ದಾರೆ. ಮನೆಯನ್ನು  ಕೂಡ ಅದ್ದೂರಿಯಾಗಿ ಅಲಂಕರಿಸಲಾಗಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.