ಮುದ್ದು ಸೊಸೆ ಧಾರಾವಾಹಿ ನಟಿ ಎಷ್ಟು ಓದಿದ್ದಾರೆ ಗೊತ್ತಾ, ಇನ್ನು PUC ಮಾಡಿಲ್ವಾ ನಮ್ಮ ಸೊಸೆ

 | 
Vhhh
ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದಿನಿಂದ ರಾತ್ರಿ 7.30ಕ್ಕೆ ಮುದ್ದು ಸೊಸೆ ಎಂಬ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಈ ಸೀರಿಯಲ್‌ನಲ್ಲಿ ಬಿಗ್‌ಬಾಸ್‌ ಸೀಸನ್ ೧೧ರ ಸ್ಪರ್ಧಿ ತ್ರಿವಿಕ್ರಮ್ ನಾಯಕನಾಗಿ ಕಾಣಿಸಿಕೊಂಡಿದ್ದು, ಇವರಿಗೆ ಪ್ರತಿಮಾ ಠಾಕೂರ್ ಜೋಡಿಯಾಗಿದ್ದಾರೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಲೀಡ್ ಪಾತ್ರ ಮಾಡುತ್ತಿರುವ ಪ್ರತಿಮಾ ಅವರ ನಿಜವಾದ ವಯಸ್ಸು, ಶಿಕ್ಷಣ, ಊರು ಸೇರಿದಂತೆ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿದೆ.
ಅಷ್ಟಕ್ಕೂ ಮುದ್ದು ಸೊಸೆ ಸೀರಿಯಲ್‌ನಲ್ಲಿ ವಿದ್ಯಾ ಎಂಬ ಶಾಲಾ ಬಾಲಕಿ ಪಾತ್ರದಲ್ಲಿ ನಟಿಸುತ್ತಿರುವ ಪ್ರತಿಮಾ ಠಾಕೂರ್, ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹೀರೋಯಿನ್ ಆಗಿದ್ದಾರೆ. ನಟನೆಗೆ ಕಾಲಿಡುವ ಮುನ್ನ ಸೋಶಿಯಲ್ ಮೀಡಿಯಾ ಇನ್‌ಫ್ಯುಯೆನ್ಸರ್ ಆಗಿ ಸಿಕ್ಕಾಪಟ್ಟೆ ಜನಪ್ರಿಯ ಗಳಿಸಿದ್ದ ಇವರಿಗೆ 996K ಫಾಲೋವರ್ಸ್ ಇದ್ದಾರೆ.
ಪಿಯುಸಿ ಓದಿಕೊಂಡಿರುವ ಪ್ರತಿಮಾ, ಅಲ್ಲಿಗೆ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಕಿರುತೆರೆಯಲ್ಲೂ ಬ್ಯುಸಿಯಾಗಿದ್ದರಿಂದ ಓದಿನ ಮೇಲೆ ಹೆಚ್ಚು ಗಮನ ನೀಡಲು ಸಾಧ್ಯವಾಗದ ಕಾರಣ ಅರ್ಧಕ್ಕೆ ನಿಲ್ಲಿಸಿದ್ದಾರಂತೆ. ಮುಂದೆ ಕರೆಸ್ಪಾಂಡೆನ್ಸ್‌ನಲ್ಲಿ ಡಿಗ್ರಿ ಓದಬೇಕೆಂಬ ಕನಸು ಹೊಂದಿದ್ದಾರಂತೆ.
ಮುದ್ದು ಸೊಸೆಯಲ್ಲಿ ವಿದ್ಯಾರ್ಥಿ ಪಾತ್ರ ಮಾಡುತ್ತಿರುವ ಪ್ರತಿಮಾಗೆ ಈಗ ಕೇವಲ 20 ವರ್ಷ ವಯಸ್ಸು. ಇವರಿಗೆ ಇನ್ನಿಬ್ಬರು ಸಹೋದರಿಯರಿದ್ದು, ಕುಟುಂಬಸ್ಥರಿಂದ ಪ್ರತಿಮಾಗೆ ಸಿಕ್ಕಾಪಟ್ಟೆ ಸಪೋರ್ಟ್ ಇದೆಯಂತೆ. ಹಲವು ದಿನಗಳಿಂದ ಕನ್ನಡ ಧಾರಾವಾಹಿಯಲ್ಲಿ ಹೀರೋಯಿನ್ ಆಗಬೇಕೆಂಬ ಕನಸು ಹೊಂದಿದ್ದ ಇವರು, ಇದೀಗ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಮುದ್ದು ಸೊಸೆಯಲ್ಲಿ ಇವರ ಪಾತ್ರಕ್ಕೆ ಸಿಕ್ಕಾಪಟ್ಟೆ ಪ್ರಾಮುಖ್ಯತೆಯಿದೆ ಎಂದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub