ರಂಜಿನಿ ರಾಘವನ್ ಪ್ರೇಮ ಕಥೆ ಶುರುವಾಗಿದ್ದು ಹೇಗೆ, ಅಂದು ಕಾಲೇಜಿನಲ್ಲಿ ಏನಾಗಿತ್ತು ಗೊತ್ತಾ
| Sep 22, 2024, 12:31 IST
ಕನ್ನಡತಿ ಧಾರಾವಾಹಿ ಮೂಲಕ ಜನರ ಮನಸ್ಸು ಗೆದ್ದಿದ್ದ ನಟಿ ರಂಜನಿ ರಾಘವನ್ ಅವರು ಜೀವನ ಸಂಗಾತಿಯನ್ನು ಪರಿಚಯಿಸಿದ್ದಾರೆ. ಇಷ್ಟುದಿನಗಳ ಲವ್, ಮದುವೆ ವಿಚಾರದಲ್ಲಿ ಮೌನ ತಾಳಿದ್ದ ರಂಜನಿ ರಾಘವನ್ ಅವರು ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಇವನೇ ನನ್ನ ಹುಡುಗ ಎಂದು ಹೇಳಿದ್ದಾರೆ.
ರಂಜನಿ ರಾಘವನ್ ಅವರ ಹುಡುಗನ ಹೆಸರು ಸಾಗರ್ ಭಾರದ್ವಾಜ್. ಇವರು ಸೈಕ್ಲಿಸ್ಟ್, ಬೈಕರ್, ರನ್ನರ್ ಕೂಡ ಹೌದು. ಇಲ್ಲಿಯವರೆಗೆ ಅವರು 20000 ಕಿಮೀ ಸೈಕಲ್ ರೈಡ್ ಮಾಡಿದ್ದು, 2000 ಕಿಮೀ ರನ್ನಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ 100000ಕಿಮೀಗಳಿಗೂ ಜಾಸ್ತಿ ಬೈಕ್ ರೈಡ್ ಮಾಡಿದ್ದಾರೆ. ಇನ್ನು ಸಾಗರ್ ಭಾರದ್ವಾಜ್ ಅವರು ರಂಜಿನಿಗೆ ಕಾಲೇಜಿನಿಂದ ಪರಿಚಯಸ್ಥರು.
ಇನ್ನು ರಂಜನಿ ರಾಘವನ್ ಅವರು ಕೆಲ ಧಾರಾವಾಹಿಗಳಲ್ಲಿ ನಟಿಸುವಾಗ ಸಹನಟರ ಜೊತೆ ಲವ್‌ನಲ್ಲಿದ್ದಾರೆ ಎಂದು ಗಾಸಿಪ್ ಹರಡಿತ್ತು. ಇವೆಲ್ಲ ಕೆಲವರು ಸೃಷ್ಟಿ ಮಾಡಿದ್ದು ಬಿಟ್ಟರೆ ಆ ಥರದ್ದು ಏನೂ ಇಲ್ಲ ಅಂತ ರಂಜನಿ ರಾಘವನ್ ಅವರೇ ಸ್ಪಷ್ಟನೆ ನೀಡಿದ್ದರು. ಈಗ ರಂಜನಿ ರಾಘವನ್ ಅವರೇ ಸ್ವತಂ ತಮ್ಮ ಲವ್ ಬಗ್ಗೆ ಹೇಳಿಕೊಂಡಿದ್ದಾರೆ.
ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಸಾಗರ್ ಭಾರದ್ವಾಜ್ ಜೊತೆಗಿನ ಫೋಟೋ ಹಂಚಿಕೊಂಡ ರಂಜನಿ ರಾಘವನ್ ಅವರು ನನ್ ಹುಡುಗ, ಜೀವನ ಸಂಗಾತಿ, BFF” ಎಂದು ಹೇಳಿಕೊಂಡಿದ್ದಾರೆ. ಅನೇಕರು ರಂಜನಿ ರಾಘವನ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ರಂಜನಿ ರಾಘವನ್ ಅವರೇ ಫೋಟೋ ಹಂಚಿಕೊಂಡಿರೋದಿಕ್ಕೆ ಅವರು ಆದಷ್ಟು ಬೇಗ ನಿಶ್ಚಿತಾರ್ಥ ಮಾಡಿಕೊಳ್ಳಬಹುದು ಎಂದು ಕಾಣುತ್ತದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.