ಉಡುಪಿ ಕೊ.ಲೆ ಹಂತಕ ವಿಮಾನದಲ್ಲಿ ಅಯ್ನಾಜ್ ಜೊತೆ ಹೇಗಿದ್ದ ಗೊತ್ತಾ, ಹೊರಬಿತ್ತು ಕಾರಣ

 | 
Gg

ಇತ್ತೀಚೆಗೆ ಮನ ಕಲಕುವ ಘಟನೆಯೊಂದು ಉಡುಪಿಯ ನೇಜಾರಿನಲ್ಲಿ ನಡೆದಿತ್ತು ಹೌದು ಒಂದೇ ಕುಟುಂಬದ ನಾಲ್ವರನ್ನು  ಅತ್ಯಂತ ಬರ್ಬರವಾಗಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಇನ್ನು ಕೊಲೆ ಮಾಡಿದ ಹಂತಕನನ್ನು  36 ಘಂಟೆಗಳ ಒಳಗೆ ಪೋಲಿಸರು ಬಂಧಿಸಿದ್ದರು. 

ಇದೀಗ ಪ್ರವೀಣ್‌ ಅರುಣ್‌ ಚೌಗುಲೆಯನ್ನು ಉಡುಪಿಯ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 14 ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ. ಈ ನಡುವೆ ಈ ಕೊಲೆಗೆ ಪ್ರವೀಣ್‌ ಚೌಗುಲೆಯ ಟಾರ್ಗೆಟ್‌ ಆಗಿದ್ದದ್ದು ನೂರ್‌ ಮಹಮದ್‌ ಅವರ ಎರಡನೇ ಮಗಳು, ಏರ್‌ ಹೋಸ್ಟೆಸ್‌ ಆಗಿರುವ ಅಯ್ನಾಜ್‌ ಎನ್ನುವುದು ಸ್ಪಷ್ಟವಾಗಿದೆ. 

ಇದನ್ನು ಸ್ವತಃ ಪ್ರವೀಣ್‌ ಚೌಗುಲೆ ಬಾಯಿ ಬಿಟ್ಟಿದ್ದಾನೆ.
ಪ್ರವೀಣ್‌ ಚೌಗುಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಖಾಸಗಿ ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅವನ ಟಾರ್ಗೆಟ್‌ ಆಗಿದ್ದದ್ದು ಅಯ್ನಾಜ್‌ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಆಕೆಯನ್ನು ಕೊಲ್ಲಲೆಂದು ಹೋದವನು ತನ್ನ ಕೃತ್ಯಕ್ಕೆ ಸಾಕ್ಷಿಯಾದ ಇತರ ಮೂವರನ್ನು ಕೂಡಾ ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದ್ದಾನೆ.

ಅಷ್ಟಕ್ಕೂ ಪ್ರವೀಣ್‌ ಚೌಗುಲೆ ಹಾಗೂ ಅಯ್ನಾಜ್‌ ಏರ್ ಇಂಡಯಾ ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಇನ್ನು ಇದೀಗ ಆರೋಪಿ ಏರ್ ಇಂಡಿಯಾ ವಿಮಾನದಲ್ಲಿ ಬೆಲ್ಟ್ ಹಾಕಿಕೊಳ್ಳುವುದು ಹೇಗೆ ಹಾಗೂ ಸೇಫ್ಟಿ ಬಗ್ಗೆ ಪ್ರಯಾಣಿಕರಿಗೆ ವಿವರಿಸುತ್ತಿರುವ ವೀಡಿಯೊ ಎಲ್ಲೆಡೆ ಹರಿದಾಡಿದೆ.
ಒಂದು ಮಾಹಿತಿಯ ಪ್ರಕಾರ, ಪ್ರವೀಣ್‌ ಚೌಗುಲೆಗೆ ಮದುವೆಯಾಗಿದ್ದರೂ ಆತ ಅಯ್ನಾಜ್‌ ಮೇಲೆ ಅನುರಕ್ತನಾಗಿದ್ದ. 

ಇದು ಆತನ ಹೆಂಡತಿಗೆ ಕೂಡಾ ಗೊತ್ತಾಗಿತ್ತು. ಈ ವಿಚಾರದಲ್ಲಿ ಅವನ ಮನೆಯಲ್ಲಿ ದೊಡ್ಡ ಜಗಳವೇ ನಡೆದಿತ್ತು. ಇದರಿಂದ ಪ್ರವೀಣ ಚೌಗುಲೆಯ ಸಂಸಾರದಲ್ಲಿ ಬಿರುಕು ಮೂಡಿತ್ತು. ಈ ನಡುವೆ, ಅಯ್ನಾಜ್‌ ಕೂಡಾ ಆತನಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದಳು. ಇದು ಚೌಗುಲೆಯ ಆಕ್ರೋಶಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ. 

ತಾನೇ ಮನೆಗೆ ಬರುವುದಾಗಿ ಆತ ಬೆದರಿಕೆ ಹಾಕಿರುವ ಸಾಧ್ಯತೆ ಇದ್ದು, ಹಾಗೆ ಬಂದವನು ಕೊಲೆ ಮಾಡಿ ಹೋಗಿದ್ದಾನೆ ಎನ್ನುವುದು ಈಗಿರುವ ಮಾಹಿತಿ. ಆದರೆ, ಇದನ್ನೂ ಮೀರಿದ ಬೇರೆ ಕಾರಣಗಳೇನಾದರೂ ಇವೆಯಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.