ಹುಟ್ಟಿ ಬೆಳೆದ ಊರನ್ನು ಬಿಡುತ್ತಿರುವ ಮಲೆನಾಡ ಜನರು, ಕಾರಣ ಏನು ಗೊತ್ತಾ

 | 
Hfd

ಸದಾ ಹಸಿರಿನಿಂದ ಕೂಡಿದ, ಶಾಂತ ವಾತಾವರಣ ಮತ್ತು ಸಜ್ಜನರು ವಾಸಿರುವ ಪ್ರದೇಶವಾದ ಮಲೆನಾಡು ಇಂದು ವಾಸಕ್ಕಲ್ಲ, ಪ್ರವಾಸೋದ್ಯಮಕ್ಕೆ ಮಾತ್ರ ಸೀಮಿತವಾಗಿದೆ. ಜಾಗತಿಕ ತಾಪಮಾನ ಹಲವಾರು ಸಮಸ್ಯೆಗಳಿಗೆ ನಾಂದಿ ಹಾಡಿದೆ. ಮಲೆನಾಡಿನ ಬೇಗುದಿಗಳು ದಿನದಿಂದ ದಿನಕ್ಕೆ ಮತ್ತಷ್ಟು ಜಾಸ್ತಿಯಾಗಿದ್ದು ಬಿಗಿಯಾಗುತ್ತಿರುವ ಉರುಳಾಗಿದೆ. ಕಾಡು ಪಾಣಿಗಳು-ಮಾನವ ಸಂಘರ್ಷದಿಂದ ಹಿಡಿದು ಹತ್ತಾರು ಸಮಸ್ಯೆಗಳು ತಲೆದೋರಿವೆ ಎಂದರು. 

ಕಾಡಾನೆಗಳ ದಾಳಿಗೆ ಹತ್ತಾರು ಮಂದಿ ಬಲಿಯಾಗಿದ್ದಾರೆ.
ಇದು ಆನೆಗಳ ತಪ್ಪಿನಿಂದ ನಡೆದ ಪ್ರಮಾದವಲ್ಲ. ಬದಲಾಗಿ ಅವುಗಳು ನೆಲೆ ಕಳೆದುಕೊಳ್ಳುವಂತೆ ಮಾಡಿರುವವರ ತಪ್ಪಾಗಿದೆ. ಇಂದು ಮಂಗಗಳ ಕಾಟಕ್ಕೆ ಜನರು ಊರೇ ಖಾಲಿ ಮಾಡುವಂತಹ ಪರಿಸ್ಥಿತಿಗಳು ನಿರ್ಮಾಣವಾಗಿವೆ. ಜಾಗತೀಕರಣ ನೆಪದಲ್ಲಿ ಕಾಡುಪ್ರಾಣಿಗಳ ನೆಲೆಯನ್ನೇ ಕಸಿದುಕೊಳ್ಳುತ್ತಿರುವ ಪರಿಣಾಮ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಮಲೆನಾಡಲ್ಲಿ ಅಡಕೆ ಹೊರತಾದ ಆರ್ಥಿಕತೆ ಇಲ್ಲ. ಆದರೆ ಇಂದು ಅದೇ ಅಡಕೆಗೆ ಎಲೆಚುಕ್ಕಿ ರೋಗ ಬಾಧಿಸುತ್ತಿದೆ. ಸರ್ಕಾರಗಳು ರೋಗ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜನರನ್ನು ಕಾಪಾಡಬೇಕಾದ ಸರ್ಕಾರಗಳ ನಿರ್ಲಕ್ಷೃದಿಂದ ಇಂದು ದೈವದ ಮೊರೆ ಹೋಗುವಂತಾಗಿದೆ. ಕಾಡು ಉಳಿಸುವುದರಿಂದ ಪರಿಸರ ರಕ್ಷಣೆ ಸಾಧ್ಯ ಎಂದು ಬಹಳಷ್ಟು ಜನರಲ್ಲಿ ತಪ್ಪು ಕಲ್ಪನೆ ಇದೆ. ಆದರೆ ಕಾಡು ಒಂದೇ ಪರಿಸರ ರಕ್ಷಣೆ ಮಾಡುವ ಸಾಧನವಲ್ಲ ಎಂಬುದನ್ನು ಮರೆಯುವಂತಿಲ್ಲ.

ತೀರ್ಥಹಳ್ಳಿ ಅಪ್ಪಟ ಮಲೆನಾಡಿನ ಸೆರಗು ಹೊದ್ದುಕೊಂಡ ಹಳ್ಳಿಗಳಲ್ಲೊಂದು. ಹೀಗಾಗಿ ಇಲ್ಲಿ ಸೂರುಗಳಡಿ ಇರುವ ಪ್ರವಾಸಿ ತಾಣಗಳ ಒಳಹೊಕ್ಕು ಮಾಹಿತಿ ಹುಡುಕಬೇಕಿಲ್ಲ. ‘ನೋಡಿ ಬರುವ’ ಸ್ಥಳಕ್ಕಿಂತ ಇಲ್ಲಿರುವುದು ಆಸ್ವಾದಿಸಬೇಕಾದ ತಾಣಗಳು. ಇದಕ್ಕೆ ಪ್ರಕೃತಿ ಸೊಬಗನ್ನು ಸವಿಯುವ ಆಸಕ್ತಿ ಮತ್ತು ಉತ್ಸಾಹದ ಜೊತೆ, ಬಿರುಮಳೆಯನ್ನು ಸಹಿಸಿಕೊಳ್ಳುವ ಸಹನೆ ಹಾಗೂ ಛಾತಿಯೂ ಬೇಕು. 

ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವವರಿಗೆ ಇಲ್ಲಿ ಪ್ರಸಿದ್ಧ ದೇವಸ್ಥಾನಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಆದರೆ ಮಳೆಸೋಕುವ ಕಾಲದಲ್ಲಿ ಪ್ರಕೃತಿ ಮತ್ತು ನಡುವಣ ಒಡನಾಟವೇ ಹೆಚ್ಚು ಪ್ರೀಯವಾಗಿತ್ತದೆ. ಆದರೆ ಇದೀಗ ಮಲೆನಾಡಿನ ಮನೆಗಳು ಬಿಕೋ ಎನ್ನುತ್ತಿವೆ ಜನರಿಲ್ಲದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.