ನಮ್ಮ ದೇಶದ ಹೆಮ್ಮೆಯ ರಾಷ್ಟ್ರಪತಿ ದ್ರೌಪದಿ ಮುಮು೯ ಅವರ ಸಂಬಳ ಎಷ್ಟು ಗೊತ್ತಾ, ಕೇಳಿದ್ರೆ ತಲೆ ತಿರುಗುತ್ತೆ

 | 
ಹಗಗ

ಶೋಷಿತ ಸಮುದಾಯಕ್ಕೆ ಸೇರಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವಳನ್ನು ನೂತನ ಸಂಸತ್‌ ಭವನ ಹಾಗೂ ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೆ ಕರೆಯಲಿಲ್ಲ ಎಂದು ಏಕವಚನದಲ್ಲಿ ಮಾತನಾಡಿಸಿದ್ದ ಸಿದ್ದರಾಮಯ್ಯ ಅವರು ನಂತರ ವಿಷಾದ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ದ್ರೌಪದಿ ಮುರ್ಮು ಅವರ ಬಾಲ್ಯದ ದಿನಗಳು ಎಲ್ಲರ ಗಮನ ಸೆಳೆಯಿತು.

ಒಡಿಶಾ ಮೂಲದ ದ್ರೌಪದಿ ಮುರ್ಮು ತಂದೆ ಬಿರಂಚಿ ನಾರಾಯಣ್ ಟುಡು. ಕಳೆದ ಎರಡು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ದ್ರೌಪದಿ ಒಡಿಶಾದ ಮಾಜಿ ಸಚಿವೆ ಜಾರ್ಖಂಡ್ ರಾಜ್ಯದ ಮಾಜಿ ರಾಜ್ಯಪಾಲರಾಗಿದ್ದವರು. ಕೇಂದ್ರ ಸಚಿವೆಯಾಗಿದ್ದವರು. ಉತ್ತಮ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇವರು ರಾಷ್ಟ್ರಪತಿಯಾದರೆ ಹಲವು ಪ್ರಥಮಗಳಿಗೆ ನಾಂದಿ ಹಾಡಲಿದ್ದಾರೆ.ಪ್ರತಿಭಾ ಪಾಟೀಲ್ ನಂತರ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಲಿದ್ದಾರೆ. ಬುಡಕಟ್ಟು ಜನಾಂಗದ ಮಹಿಳೆ, ಒಡಿಶಾ/ಜಾರ್ಖಂಡ್ ಮೂಲದಿಂದ ಉನ್ನತ ಹುದ್ದೆಗೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪತ್ರರಾಗಿದ್ದಾರೆ.

ಭಾರತದ ರಾಷ್ಟ್ರಪತಿಗಳು ದೇಶದ ಮುಖ್ಯಸ್ಥರು ಮಾತ್ರವಲ್ಲ, ಭಾರತದ ಪ್ರಥಮ ಪ್ರಜೆಯೂ ಹೌದು. ರಾಷ್ಟ್ರಪತಿಗಳು ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಕೂಡ ಆಗಿದ್ದಾರೆ. ಭಾರತದಲ್ಲಿ ಅಧ್ಯಕ್ಷರನ್ನು ಮತದಾನದ ಮೂಲಕ ಶಾಸಕರು, ಸಂಸದರು ಆಯ್ಕೆ ಮಾಡುತ್ತಾರೆ. ಸಂಸತ್ತಿನ ಎರಡೂ ಸದನಗಳ ಚುನಾಯಿತ ಸrದಸ್ಯರು ಮತದಾನ ಮಾಡುತ್ತಾರೆ. ಭಾರತದ ರಾಷ್ಟ್ರಪತಿಗಳು ಇಲ್ಲಿ ರಾಷ್ಟ್ರಪತಿ ಭವನದಲ್ಲಿ ವಾಸಿಸುತ್ತಿದ್ದಾರೆ ಹಾಗೂ ಇದು ವಿಶ್ವದ ಅತಿದೊಡ್ಡ ರಾಷ್ಟ್ರಪತಿ ಭವನವಾಗಿದೆ.

ಭಾರತದ ರಾಷ್ಟ್ರಪತಿಗಳು ತಿಂಗಳಿಗೆ 5 ಲಕ್ಷ ರೂಪಾಯಿಗಳನ್ನು ಸಂಬಳವಾಗಿ ಪಡೆಯುತ್ತಾರೆ. ಅದರ ಮೇಲೆ ಅವರು ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಇದಲ್ಲದೇ ರಾಷ್ಟ್ರಪತಿಗಳು ಹಲವು ಭತ್ಯೆಗಳನ್ನು ಪಡೆದುಕೊಳ್ಳುತ್ತಾರೆ. ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನವು ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿದೆ. ಇದನ್ನು 2,00,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ ಮತ್ತು 340 ಕೊಠಡಿಗಳನ್ನು ಹೊಂದಿದೆ. ಸುಮಾರು 200 ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧ್ಯಕ್ಷರ ನಿವಾಸ, ಸಿಬ್ಬಂದಿ, ಅತಿಥಿಗಳು ಮತ್ತು ಆಹಾರ ಇತ್ಯಾದಿಗಳು ವಾರ್ಷಿಕವಾಗಿ ಸುಮಾರು 22.5 ಮಿಲಿಯನ್ ಹಣ ಖರ್ಚು ಮಾಡುತ್ತದೆ.

ನಿವೃತ್ತಿಯ ನಂತರ ರಾಷ್ಟ್ರಪತಿಗಳು ತಿಂಗಳಿಗೆ 1.5 ಲಕ್ಷ ಪಿಂಚಣಿ ಪಡೆಯುತ್ತಾರೆ. ಅಲ್ಲದೇ ಸಿಬ್ಬಂದಿಗೆ ಖರ್ಚು ಮಾಡಲು ಪ್ರತ್ಯೇಕವಾಗಿ ಮಾಸಿಕ 60 ಸಾವಿರ ರೂ. ಒಂದು ಉಚಿತ ಬಂಗಲೆ (ಟೈಪ್ VIII) ಜೀವನಕ್ಕಾಗಿ ಲಭ್ಯವಿದೆ. ಎರಡು ಉಚಿತ ಲ್ಯಾಂಡ್‌ಲೈನ್‌ಗಳು ಮತ್ತು ಮೊಬೈಲ್ ಫೋನ್. ರೈಲು ಅಥವಾ ವಿಮಾನದಲ್ಲಿ ಸಂಗಾತಿಯೊಂದಿಗೆ ಉಚಿತ ಪ್ರಯಾಣ ಮತ್ತು ಜೀವನಕ್ಕಾಗಿ ಉಚಿತ ವಾಹನ ಸೌಲಭ್ಯ.ಭದ್ರತೆ ಮತ್ತು 2 ದೆಹಲಿ ಪೊಲೀಸ್ ಕಾರ್ಯದರ್ಶಿಗಳು ಕೂಡ ಅವರ ಸೆಕ್ಯುರಿಟಿ ಆಗಿ ನೀಡಲಾಗುತ್ತದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.