ಅಂಬಾನಿ ಮನೆಯ 27ನೇ ಅಂತಸ್ತಿನ ರಹಸ್ಯ ಏನು ಗೊತ್ತಾ, ನಿಜಕ್ಕೂ ಬೆಚ್ಚಿಬೀಳ್ತೀರಾ

 | 
ಬಬೇ

ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಮದುವೆ ಇತ್ತೀಚೆಗೆ  ಬಾರೀ ಅದ್ಧೂರಿಯಾಗಿ ನಡೆಯಿತು ಅನಂತ್ ಅವರು ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಅದ್ದೂರಿಯಾಗಿ ವಿವಾಹವಾದರು . ರಾಧಿಕಾ ಅವರು ಎನ್‌ಕೋರ್ ಹೆಲ್ತ್‌ಕೇರ್‌ನ ಸಿಇಒ ವೀರೇನ್ ಮರ್ಚೆಂಟ್ ಅವರ ಪುತ್ರಿ. ರಾಧಿಕಾ ಮರ್ಚೆಂಟ್ ಅಂಬಾನಿ ಕುಟುಂಬದ ಸೊಸೆಯಾಗಿ ಮುಂಬೈನಲ್ಲಿರುವ ಅಂಬಾನಿ ಕುಟುಂಬದ ಐಷಾರಾಮಿ ಮನೆ ಆಂಟಿಲಿಯಾದ ಭಾಗವಾಗಲಿದ್ದಾರೆ.  

ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಆಂಟಿಲಿಯಾ  27 ಅಂತಸ್ತಿನ ಐಷಾರಾಮಿ ಮನೆಯಲ್ಲಿ, ಮುಖೇಶ್ ಅಂಬಾನಿ ಅವರ ತಾಯಿ ಕೋಕಿಲಾ ಬೆನ್, ಪತ್ನಿ ನೀತಾ, ಇಬ್ಬರು ಪುತ್ರರಾದ ಆಕಾಶ್-ಅನಂತ್, ಸೊಸೆ ಶ್ಲೋಕಾ ಮತ್ತು ಮೊಮ್ಮಗ ಪೃಥ್ವಿ ಅಂಬಾನಿ ಅವರೊಂದಿಗೆ ವಾಸಿಸುತ್ತಿದ್ದಾರೆ.ಆಂಟಿಲಿಯಾ 27 ಅಂತಸ್ತಿನ ಐಷಾರಾಮಿ ಬಂಗಲೆ. ಆದರೆ ಅಂಬಾನಿ ಕುಟುಂಬವು ಅದರ 27ನೇ ಮಹಡಿಯಲ್ಲಿಯೇ ವಾಸಿಸುತ್ತಿದೆ. 

ಇದರ ಹಿಂದಿನ ಕಾರಣವೇನು? ಸ್ವತಃ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ ಈ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.
ಬಿಸಿನೆಸ್ ಇನ್‌ಸೈಡರ್‌ ವರದಿಯ ಪ್ರಕಾರ, ನೀತಾ ಅಂಬಾನಿ ಎಲ್ಲಾ ಕೊಠಡಿಗಳಲ್ಲಿಯೂ ಸಾಕಷ್ಟು ಸೂರ್ಯನ ಬೆಳಕು ಧಾರಳವಾಗಿ ಬೀಳಬೇಕೆಂದು ಆಶಿಸಿದ್ದರು. ಆದ್ದರಿಂದ ಅವರು ಮೇಲಿನ ಭಾಗದಲ್ಲಿ ಉಳಿಯಲು ನಿರ್ಧರಿಸಿದ್ದಾರಂತೆ. ವಿಶೇಷ ವ್ಯಕ್ತಿಗಳಿಗೆ ಮಾತ್ರ ಈ ಮಹಡಿಗೆ ಹೋಗಲು ಅನುಮತಿ ಇದೆ. 

ವರದಿಗಳ ಪ್ರಕಾರ, 24 ಗಂಟೆಗಳ ಕಾಲ ಆಂಟಿಲಿಯಾದಲ್ಲಿ 600 ಜನರ ಸಿಬ್ಬಂದಿ ಇದ್ದಾರೆ. ಇದು ತೋಟಗಾರರು, ಎಲೆಕ್ಟ್ರಿಷಿಯನ್‌ಗಳು, ಸೆಕ್ಯುರಿಟಿ ಗಾರ್ಡ್‌ಗಳು, ಪ್ಲಂಬರ್‌ಗಳು, ಚಾಲಕರು ಮತ್ತು ಸೇವಕರಿಗೆ ಅಡುಗೆ ಮಾಡುವವರು ಒಳಗೊಂಡಿರುತ್ತದೆ. ನೀತಾ ಅಂಬಾನಿ ಪ್ರಕಾರ, ಅವರ ಮನೆಯಲ್ಲಿರುವ ಪ್ರತಿಯೊಬ್ಬ ಉದ್ಯೋಗಿಯೂ ಕುಟುಂಬದ ಸದಸ್ಯರಂತೆಯೇ ಇರುತ್ತಾರೆ.
ಸುಮಾರು 4 ಲಕ್ಷ ಚದರ ಅಡಿಗಳಲ್ಲಿ 'ಆಂಟಿಲಿಯಾ' ನಿರ್ಮಿಸಲಾಗಿದೆ. ಮುಖೇಶ್ ಅಂಬಾನಿ ಅವರ ಮನೆಯನ್ನು 200 ಮಿಲಿಯನ್ ಡಾಲರ್ ಅಂದರೆ ಸುಮಾರು 11 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಂಟಿಲಿಯಾ ತೆರೆದ ಆಕಾಶ ಮತ್ತು ಅರೇಬಿಯನ್ ಸಮುದ್ರದ ಅತ್ಯಂತ ಸುಂದರವಾದ ಒಳಾಂಗಣ ಹೊಂದಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.