ಯಶ್ ಫ್ಯಾನ್ಸ್ ಮೃ.ತ ಪಟ್ಟಿದ್ದಕ್ಕೆ ನಟ ಪ್ರೇಮಾ ಹೇಳಿದ್ದೇನು ಗೊತ್ತಾ, ಕನ್ನಡಿಗರು ದಿಗ್ಬ್ರಮೆ

 | 
ಕ್

ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ವಿದ್ಯುತ್‌ ಶಾಕ್‌ನಿಂದ‌ ಮೃತಪಟ್ಟ ಮೂವರು ಅಭಿಮಾನಿಗಳ ಮನೆಗೆ ನಟ ಯಶ್‌ ಅವರು ಸೋಮವಾರ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದರು. ಅದೇ ಹೊತ್ತಿಗೆ ಅಭಿಮಾನಿಗಳು ಹುಟ್ಟು ಹಬ್ಬದ ಸಂದರ್ಭದಲ್ಲಿ  ತಮ್ಮ ಅಭಿಮಾನವನ್ನು ಬ್ಯಾನರ್‌, ಕಟೌಟ್‌ಗಳ ಮೂಲಕ ತೋರಿಸುವ ಬದಲು ಒಳ್ಳೆಯ ಕೆಲಸದ ಮೂಲಕ, ಒಳ್ಳೆಯ ಬದುಕಿನ ಮೂಲಕ ತೋರಿಸಬೇಕು ಎಂದು ಮನವಿ ಮಾಡಿದರು.

ಕಳೆದ ಸೋಮವಾರ ಚಿತ್ರ ನಟ ಯಶ್‌ ಅವರ ಜನ್ಮ ದಿನವಿತ್ತು. ಸ್ವತಃ ಯಶ್‌ ಅವರೇ ಇದನ್ನು ಸಾರ್ವಜನಿಕವಾಗಿ ಆಚರಿಸುವುದಿಲ್ಲ ಎಂದು ಘೋಷಿಸಿದ್ದರು. ಈ ನಡುವೆ, ಸೂರಣಗಿ ಗ್ರಾಮದ ಕೆಲವು ಯುವಕರು ಸೇರಿ ಬೃಹತ್‌ ಗಾತ್ರದ ಕಟೌಟ್‌ ರೂಪಿಸಿ ಅದನ್ನು ಕಟ್ಟುವ ಹಂತದಲ್ಲಿ ಅದು ವಿದ್ಯುತ್‌ ತಂತಿಗೆ ಸ್ಪರ್ಶಿಸಿತ್ತು. ಇದರಿಂದ ಹನುಮಂತ ಹರಿಜನ , ಮುರಳಿ ನಡುವಿನಮನಿ ಮತ್ತು ನವೀನ್ ಗಾಜಿ  ಎಂಬ ಮೂವರು ಯುವಕರು ಮೃತಪಟ್ಟರೆ, ಮಂಜುನಾಥ್ ಹರಿಜನ, ದೀಪಕ್ ಹರಿಜನ, ಪ್ರಕಾಶ್ ಮ್ಯಾಗೇರಿ ಎಂಬುವವರು ಗಾಯಗೊಂಡಿದ್ದರು.

ಈ ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಚಿತ್ರ ನಟ ಯಶ್‌ ಅವರು ಸಂಜೆಯ ಹೊತ್ತಿಗೆ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿ ಮೂಲಕ ಸೂರಣಗಿಗೆ ಆಗಮಿಸಿದರು. ಅಲ್ಲಿ ಮೃತರ ಮನೆಗಳಿಗೆ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದರು. ಮಗನನ್ನು ಕಳೆದುಕೊಂಡರು, ಬದುಕಿಗೆ ದಿಕ್ಕಾದ ಮಗನನ್ನು ಕಳೆದುಕೊಂಡವರು ಯಶ್‌ ಮುಂದೆ ಕಣ್ಣೀರಿಟ್ಟರು. ಮೃತಪಟ್ಟ ತಂದೆ ತಾಯಿಯ ಕೈ ಹಿಡಿದು ಅವರಿಗೆ ಸಾಂತ್ವನ ಹೇಳಿದ ಯಶ್‌ ಅವರ ಕಣ್ಣೀರು ಒರೆಸಿದರು.

ಇನ್ನು ಈ ಕುರಿತಾಗಿ ನಟ ದರ್ಶನ್ ಸಾಕಷ್ಟು ಸಾರಿ ಹೇಳಿದ್ದಾರೆ. ಆದರೆ ಅದನ್ನು ಕಿವಿಗೆ ಹಾಕಿಕೊಳ್ಳದ ಅಭಿಮಾನಿಗಳು ಇಂತಹ ಹುಚ್ಚಾಟ ಮಾಡುತ್ತಾ ಬಂದಿದ್ದಾರೆ. ಈಗ ಈ ಕುರಿತಾಗಿ ನಟ ಪ್ರೇಮ್ ಕೂಡ ಕಿಡಿಕಾರಿದ್ದಾರೆ. ನೀವು ಮಾತಲ್ಲಿ ಕೃತಿಯಲ್ಲಿ ಅಭಿಮಾನ ತೋರಿಸಿ ಅದರ ಹೊರತಾಗಿ ಇಂತಹ ಕೆಲಸ ಮಾಡಬೇಡಿ ಎಂದು ನೋವಿನಿಂದ ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.