ಬೆಳ್ಳಿ ಬೊಂಬೆಯಂತಿದ್ದ ನಟಿ ಚಾರುಲತಾ ಮಾಡುತ್ತಿರುವ ಕೆಲಸ ಏನು ಗೊತ್ತಾ

 | 
Ir
 ಓ ಮಲ್ಲಿಗೆ ಖ್ಯಾತಿಯ ನಟಿ ಚಾರುಲತಾ ಕಳೆದೇ ಹೋಗಿದ್ದಾರೆ. ಕನ್ನಡ ಸಿನಿಮಾಗಳಲ್ಲಿಯೇ ಹೆಚ್ಚು ಗುರುತಿಸಿಕೊಂಡು ಓ ಮಲ್ಲಿಗೆ ಚಾರುಲತಾ ಅಂತಲೇ ಈಗಲೂ ಗುರುತಿಸಿಕೊಳ್ತಾರೆ. ಆದರೆ ಅದ್ಯಾಕೋ ಏನೋ, ಬಣ್ಣದ ಲೋದಿಂದ ಕನ್ನಡಿಗರ ಈ ಚಾರು ದೂರ ದೂರವೇ ಹೋಗಿ ಬಿಟ್ಟಿದ್ದಾರೆ.ಚಾರುಲತಾ ಸಿಂಪಲ್ ಆಗಿಯೇ ಇದ್ದಾರೆ. ಗ್ಲಾಮರಸ್ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. 
ಆದರೆ ಡೈರೆಕ್ಟರ್ ವಿ.ಮನೋಹರ್ ಅವರ ಓ ಮಲ್ಲಿಗೆ ಸಿನಿಮಾ ಈ ನಟಿಯನ್ನ ಬೇರೆ ಲೆವಲ್‌ಗೆ ತೆಗೆದುಕೊಂಡು ಹೋಯಿತು. ವಿ.ಮೋಹನ್ ಕೊಟ್ಟ ಚಾರುತಲಾ ಅನ್ನೋ ಹೆಸರು ಶಾಶ್ವತವಾಗಿಯ ಉಳಿಯಿತು.ಚಾರುಲತಾ ಹಿನ್ನೆಲೆ ಚೆನ್ನಾಗಿದೆ. ಚಾರುಲತಾ ಹುಟ್ಟಿದ್ದು ಪಂಜಾಬಿ ಫ್ಯಾಮಿಲಿಯಲ್ಲಿಯೇ. ಆದರೆ ಬೆಳದದ್ದು ದೇವರನಾಡು ಕೇರಳದಲ್ಲಿ. ಕನ್ನಡದಲ್ಲಿ ಓ ಮಲ್ಲಿಗೆ ಮೂಲಕ ಹೀರೋಯಿನ್ ಆದ್ರು. ಕನ್ನಡ ಮತ್ತು ಓಡಿಯಾ ಚಿತ್ರದಲ್ಲಿ ಹೆಚ್ಚು ಸಿನಿಮಾ ಮಾಡಿದ್ದಾರೆ. ಇಲ್ಲಿಯೇ ಅತಿ ಹೆಚ್ಚು ಗುರುತಿಸಿಕೊಂಡಿದ್ದಾರೆ.
ಚಾರುಲತಾ ಇತರ ಭಾಷೆಯ ಚಿತ್ರಗಳನ್ನೂ ಮಾಡಿದ್ದಾರೆ. ಮಲೆಯಾಳಂ, ತಮಿಳು, ತೆಲುಗು ಹೀಗೆ ಇಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ. ಆದರೆ ದಾಸ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದಲ್ಲಿ ನಟಿಸಿದ ಬಳಿಕ ಮತ್ತೆ ಬಣ್ಣ ಹೆಚ್ಚಿಯೇ ಇಲ್ಲ ನೋಡಿ. ಈ ಚಿತ್ರ 2017 ರಲ್ಲಿ ತೆರೆಗೆ ಬಂದಿತ್ತು.ಚಾರುಲತಾ ಸಿನಿಮಾ ಜೀವನದಲ್ಲಿ ರಮೇಶ್ ಅರವಿಂದ್ ಜೊತೆಗೆ ನಟಿಸಿರೋ ಓ ಮಲ್ಲಿಗೆ ಅತಿ ಹೆಚ್ಚು ಜನರ ಮೆಚ್ಚುಗೆ ಗಳಿಸಿತ್ತು. ಶಿವರಾಜ್ ಕುಮಾರ್ ಅಭಿನಯದ ಜೋಡಿ ಹಕ್ಕಿ ಚಿತ್ರದಲ್ಲಿ ಲಾಲಿ ಹೆಸರಿನ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆದಿದ್ದರು.
ಹಲ್ಲಿನ ಮೇಲೆ ಹಲ್ಲಿದ್ರು ಮಲ್ಲಿಗೆ ನಗು ಬೀರುವ ಈ ನಟಿಗೆ ಮದುವೆಯೇ ಆಗಿಲ್ಲ. ಈಗಲೂ ತಾಯಿಯ ಜೊತೆ ಜೀವನ ನಡೆಸುತ್ತಿರುವ ಇವರು ಸ್ವಂತ ಗಾರ್ಮೆಂಟ್ ಉದ್ಯಮ ಮಾಡ್ತಿದ್ದಾರೆ.ಚಾರುತಲಾ ಇದೀಗ ಸಿನಿಮಾರಂಗದಿಂದ ದೂರವೇ ಉಳಿದಂತೆ ಇದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕನ್ನಡ ಸಿನಿಮಾಗಳ ಹಾಡುಗಳಿಗೆ ರೀಲ್ಸ್ ಮಾಡಿ ಖುಷಿಪಟ್ಟಿದ್ದಾರೆ. ಆದರೆ ಬಣ್ಣದ ಲೋಕದಿಂದ ದೂರ ಉಳಿದದ್ದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ ನೋಡಿ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.