ಟಾಯ್ಲೆಟ್ ನಲ್ಲಿ ಕೂತು ಮೊಬೈಲ್ ಬಳಸಿದರೆ ಯಾವ ಕಾಯಿಲೆ ಬರುತ್ತೆ ಗೊತ್ತಾ

 | 
ಲರಪ

 ನಾವೆಲ್ಲರೂ ಇಂದು ಮೊಬೈಲ್ ನ ಗುಲಾಮರಾಗಿದ್ದೇವೆ. ಇದು ಸ್ವಲ್ಪ ಅತಿಯೆಂದು ಅನಿಸಿದರೂ ಅದನ್ನು ಒಪ್ಪಿಕೊಳ್ಳಲೇಬೇಕು. ಮೊಬೈಲ್ ಇಲ್ಲದೆ ಯಾವುದೇ ಕೆಲಸ ಕಾರ್ಯಗಳು ನಮ್ಮಿಂದ ಸಾಧ್ಯವಾಗುತ್ತಿಲ್ಲ.ಬೆಳಗ್ಗೆ ಅಲರಾಂನಿಂದ ಹಿಡಿದು ರಾತ್ರಿ ಮಲಗುವ ಮೊದಲು ಯಾವ ಮಾತ್ರೆ ತೆಗೆದುಕೊಳ್ಳಬೇಕು ಅಥವಾ ನಾಳಿನ ಮೀಟಿಂಗ್ ಗೆ ಹೇಗೆ ತಯಾರಿ ಮಾಡಬೇಕು ಎನ್ನುವುದನ್ನು ಮೊಬೈಲ್ ನಮಗೆ ತಿಳಿಸಿಕೊಡುವುದು.ಸಾಮಾಜಿಕ ಮಾಧ್ಯಮಗಳಿಂದ ಹಿಡಿದು ಬ್ಯಾಂಕ್ ಖಾತೆ ನಿರ್ವಹಣೆ ತನಕ ನಾವು ಪ್ರತಿಯೊಂದಕ್ಕೂ ಮೊಬೈಲ್ ಬಟನ್ ಮೇಲೆ ಅವಲಂಬಿತ ರಾಗಿದ್ದೇವೆ. ನಿದ್ದೆಯಿಂದ ಎದ್ದ ತಕ್ಷಣ ಮೊಬೈಲ್ ಹಿಡಿದುಕೊಂಡು ಜಾಲಾಡುವಂತಹ ನಾವು ಹಾಗೆ ಅದನ್ನು ಟಾಯ್ಲೆಟ್ ಗೆ ಕೂಡ ಕೊಂಡು ಹೋಗುವಂತಹ ಅಭ್ಯಾಸ ಬೆಳೆಸಿಕೊಂಡಿದ್ದೇವೆ.

ಹಿಂದೆ ಪೇಪರ್ ಓದುತ್ತಾ ಶೌಚಾಲಯದಲ್ಲಿ ಕಾಲ ಕಳೆಯುತ್ತಿದ್ದ ಜನರು ಇಂದು ಮೊಬೈಲ್ ನ್ನು ಶೌಚಾಲಯದಲ್ಲಿ ತಮ್ಮ ಸಂಗಾತಿಯನ್ನಾಗಿ ಮಾಡಿಕೊಂಡಿರುವರು. ಆದರೆ ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡುವುದು ಎಷ್ಟು ಸುರಕ್ಷಿತ ಎನ್ನುವುದನ್ನು ಮಾತ್ರ ನೀವು ಗಮನಿಸಲೇಬೇಕು. ಯಾಕೆಂದರೆ ಶೌಚಾಲಯವು ಹಲವಾರು ಕೀಟಾಣುಗಳು ಹಾಗೂ ಬ್ಯಾಕ್ಟೀರಿಯಾಗಳ ತಾಣವಾಗಿದೆ.

ನೀವು ಮೊಬೈಲ್ ಬಳಕೆ ಮಾಡುವುದು ತಪ್ಪಲ್ಲ. ಆದರೆ ಶೌಚಾಲಯದಲ್ಲಿ ಕುಳಿತುಕೊಂಡ ವೇಳೆ ನೀವು ಮೊಬೈಲ್ ಹಿಡಿದುಕೊಂಡು ವ್ಯಯಿಸುವಂತ ಸಮಯವು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ.

ಟಾಯ್ಲೆಟ್ ನಲ್ಲಿ ಮೊಬೈಲ್ ಬಳಕೆ ಮಾಡುವಂತಹ ಹೆಚ್ಚಿನವರಿಗೆ ಮೂಲವ್ಯಾಧಿ ಸಮಸ್ಯೆಯು ಕಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ. ಆದರೆ ಇದರ ಪ್ರಮಾಣ ಎಷ್ಟು ಎಂದು ಮಾತ್ರ ಸ್ಪಷ್ಟವಿಲ್ಲ. ಆದರೆ ಟಾಯ್ಲೆಟ್ ನಲ್ಲಿ ದೀರ್ಘಕಾಲ ಕುಳಿತುಕೊಂಡರೆ ಮೂಲವ್ಯಾಧಿ ಬರುವುದು ಎಂದು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.
ಕೆಲವು ಅಧ್ಯಯನದ ಪ್ರಕಾರ ಮೊಬೈಲ್ ನ್ನು ಶೌಚಾಲಯದಲ್ಲಿ ಬಳಕೆ ಮಾಡಿದರೆ ಅದರಿಂದ ಇ ಕೊಲಿ ಮತ್ತು ಇತರ ಬ್ಯಾಕ್ಟೀರಿಯಾಗಳು ಬರುವುದು. ಬ್ರಿಟನ್ ನಲ್ಲಿ ನಡೆದಿರುವಂತಹ ಅಧ್ಯಯನದಲ್ಲಿ ಸ್ಮಾರ್ಟ್ ಫೋನ್ ನ ಸ್ಕ್ರೀನ್ ಟಾಯ್ಲೆಟ್ ಸೀಟ್ ಗಿಂತಲೂ ಕೊಳಕಾಗಿರುವುದು ಎಂದು ಕಂಡುಕೊಂಡಿದೆ.

ಹಾಗಾಗಿಯೇ ನೀವು ಅಗತ್ಯಕ್ಕಿಂತ ಹೆಚ್ಚಿನ ಸಮಯವನ್ನು ಶೌಚಾಲಯದಲ್ಲಿ ಕಳೆಯಬಾರದು ಎಂದು ವೈದ್ಯರು ತಿಳಿಸುವರು. ಕೇವಲ 15 ನಿಮಿಷ ಶೌಚಾಲಯದಲ್ಲಿ ಕಳೆದರೆ ಅದು ತುಂಬಾ ಆರೋಗ್ಯಕಾರಿ. ಇದಕ್ಕಿಂತ ಹೆಚ್ಚು ಕಳೆದರೆ ಅದು ಮಲಬದ್ಧತೆ ಸಮಸ್ಯೆ ಎಂದು ಪರಿಣಿಸಲಾಗುತ್ತದೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.