ಕುದಿಯುವ ಸಂಬಾರಿಗೆ ಕೈ ಹಾಕಿದ ಪವಾಡ ಪುರುಷ, 90 ಡಿಗ್ರಿ ಎಣ್ಣೆಯಲ್ಲಿ ಏನಾಯಿತು ಗೊತ್ತಾ

ಭರತ ಹುಣ್ಣಿಮೆ ದಿನವಾದ ಬುಧವಾರ ನಾಡಿನ ಎಲ್ಲೆಡೆ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನಡೆದವು. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನಲ್ಲಿಯೂ ಭಾರತ ಹುಣ್ಣೆಮೆ ದಿನದಂದು ಪವಾಡವೊಂದು ಜರುಗಿತು.ಹೌದು..! ಸ್ವಾಮೀಜಿಯೋರ್ವರು ಸುಡು ಸುಡು ಸಾಂಬಾರ್ ಕೈ ಹಾಕಿ ಸಾಂಬಾರ್ ಬಡಿಸಿದರು.
ಈ ಧಾರ್ಮಿಕ ಕಾರ್ಯಕ್ಕೆ ಸಾಕ್ಷಿಯಾಗಿದ್ದು, ರಾಯಭಾಗ ತಾಲೂಕಿನ ಬಾವನ ಸೌದತ್ತಿ ಗ್ರಾಮ. ಬಾವನ ಸೌದತ್ತಿ ಗ್ರಾಮದಲ್ಲಿ ಭರತ ಹುಣ್ಣಿಮೆ ದಿನದಂದು ಗ್ರಾಮ ದೇವತೆ ರೇಣುಕಾ ದೇವಿಯ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ಜಾತ್ರಾ ಮಹೋತ್ಸವ ವೈಭವದಿಂದ ನಡೆಯಿತು, ಜಾತ್ರೆಯ ನಿಮಿತ್ತ ನಡೆಯಬೇಕಾಗಿದ್ದ ಎಲ್ಲ ಪೂಜೆ, ಧಾರ್ಮಿಕ ವಿಧಿ ವಿಧಾನ ಹಾಗೂ ಅನ್ನ ಪ್ರಸಾದ ಸಾಂಗವಾಗಿ ಜರುಗಿದವು.
ಜಾತ್ರೆಯ ನಿಮಿತ್ತ ರೇಣುಕಾ ದೇವಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ಎಂದಿನಂತೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಹುಗ್ಗಿ, ಅನ್ನ ಹಾಗೂ ಸಾಂಬಾರ್ ಪ್ರಸಾದ ರೂಪದಲ್ಲಿ ಭಕ್ತರಿಗೆ ಉಣ ಬಡಿಸಲಾಯಿತು. ಅನ್ನ ಪ್ರಸಾದಕ್ಕೆ ಓಂಕಾರ ಆಶ್ರಮದ ಮುಖ್ಯಸ್ಥರು ವಿದ್ಯುಕ್ತವಾಗಿ ಚಾಲನೆ ನೀಡಿದರು. ಬುಧವಾರ ಬೆಳಗ್ಗೆಯಿಂದ ಸಿದ್ಧಪಡಿಸಲಾದ ಪ್ರಸಾದದ ಪಾತ್ರೆಗಳಿಗೆ ಮೊದಲು ಪೂಜೆ ಸಲ್ಲಿಸಲಾಯಿತು.
ನಂತರ ಕೊಪ್ಪರಿಗೆಯಲ್ಲಿ ಸಿದ್ಧಪಡಿಸಲಾದ ಸಾಂಬಾರ್ ಹಾಕಿದ ಸ್ವಾಮೀಜಿಯವರು, ಐದು ಬೊಗಸೆ ಸುಡು ಸುಡು ಹುಗ್ಗಿಯನ್ನು ಕೂಡ ದೇವಿಯ ನೈವೇದ್ಯಕ್ಕೆ ತೆಗೆದಿರಿಸಿದರು. ಅದೇ ರೀತಿ ಅನ್ನದ ಬುಟ್ಟಿಯಿಂದಲೂ ಬೊಗಸೆಯಿಂದ ನೈವೇದ್ಯಕ್ಕೆ ತೆಗೆಯಲಾಯಿತು. ಪ್ರಸಾದಕ್ಕೆ ಸಿದ್ಧಪಡಿಸಲಾದ ಅನ್ನ ಹಾಗೂ ಹುಗ್ಗಿ ಸುಡುತ್ತಿದ್ದರೂ ಸ್ವಾಮೀಜಿಯವರು ಕೈ ಅದ್ದಿ ನೈವೇದ್ಯಕ್ಕೆ ಹುಗ್ಗಿ ತೆಗೆದಿರುವುದು ಪವಾಡವೇ ಸರಿ ಎಂದು ಅಲ್ಲಿನ ಜನರ ಹಾಡಿ ಹೊಗಳಿದರು. ಈ ಒಂದು ಧಾರ್ಮಿಕ ಕಾರ್ಯಕ್ಕೆ ಗ್ರಾಮದ ನೂರಾರು ಜನರು ಸಾಕ್ಷಿಯಾದರು. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.