ಕನ್ನಡದ ಜನಪ್ರಿಯ ನಟಿ ಪರಿಸ್ಥಿತಿ ಏನಾಯಿತು ಗೊತ್ತಾ, ಬಿಕ್ಕಿ ಬಿಕ್ಕಿ ಅತ್ತ ಸಿನಿ ದಿಗ್ಗಜರು

 | 
Hdhd

ನಟಿ ತಾರಾ ವಿರುದ್ಧ ಎಫ್​ಐಆರ್ ದಾಖಲಾಗಿದೆ. ನಟಿಯ ಮನೆಯನ್ನೂ ಪರಿಶೀಲನೆ ಮಾಡಲಾಗಿದೆ. ಹೌದು ನಟಿ ತಾರಾಅನುರಾಧ ಮೇಲೆ ಎಫ್​ಐಆರ್ ದಾಖಲಾಗಿದೆ. ಸರಕಾರಿ ಕಾರನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಂಡ ಆರೋಪದಲ್ಲಿ ನಟಿಯ ವಿರುದ್ಧ ಕೇಸ್ ದಾಖಲಾಗಿದೆ.ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ನಟಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. 

ವಿಡಿಯೋ ಆಧರಿಸಿ ಫ್ಲೈಯಿಂಗ್ ಸ್ವ್ಕಾಡ್ ದೂರು ದಾಖಲಿಸಿದೆ.ದೂರು ದಾಖಲಾದ ಬಳಿಕ ತಾರಾ ಅವರ ಮನೆ ಬಳಿ ಪರಿಶೀಲನೆಯನ್ನೂ ನಡೆಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ ಕಾರು ಮನೆ ಬಳಿ ಇರಲಿಲ್ಲ. ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ನಟಿ ತಾರಾ ವಿರುದ್ಧ ಪ್ರಕರಣ ದಾಖಲಾಗಿದೆ. ನಟಿ ತಾರಾ ಅವರು ಸ್ಯಾಂಡಲ್​​ವುಡ್​ನಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಪೋಷಕ ಪಾತ್ರಗಳ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. 

ಅವರು ಈ ಮೊದಲು ಎಂಎಲ್​ಸಿ ಆಗಿಯೂ ಸೇವೆ ಸಲ್ಲಿಸಿದ್ದರು. ತಾರಾ ಅವರು ಸಿನಿಮಾ, ರಿಯಾಲಿಟಿ ಶೋಗಳಲ್ಲಿಯೂ ಮಿಂಚುತ್ತಿದ್ದಾರೆ. ಸದ್ಯ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದಾರೆ ತಾರಾ. ನಟಿ ತಾರಾ ಖಾಸಗಿ ವಾಹಿನಿ ರಿಯಾಲಿಟಿ ಶೋ ರಾಜಾರಾಣಿ, ನಮ್ಮಮ್ಮ ಸೂಪರ್​ಸ್ಟಾರ್ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿದ್ದರು. ಈ ಮೂಲಕ ಪ್ರೇಕ್ಷಕರ ಮನಸು ಗೆದ್ದಿದ್ದರು.ಒಂದುವೇಳೆ ಆರೋಪ ಸಾಬೀತಾದರೆ ನಟಿ ತಾರಾ ಅವರನ್ನು ಬಂಧಿಸುವ ಸಂಭವ ಇರುವುದರಿಂದ ಕನ್ನಡ ಚಿತ್ರರಂಗ ಆತಂಕದಲ್ಲಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.