ಚಂದ್ರನ ಅಂಗಳಕ್ಕೆ ಇಳಿದ ಆ ರೋಚಕ ದೃಶ್ಯ ಹೇಗಿತ್ತು ಗೊತ್ತಾ, ಇಡೀ ವಿಶ್ವದಲ್ಲೇ ಹೊಸ ಚರಿತ್ರೆ

 | 
Bd

ಚಂದ್ರಯಾನ 3 ಏನಾಗುವುದೋ ಎಂಬ ಈ ಹೊತ್ತಿನಲ್ಲಿ ಸಕತ್ ಸುದ್ದಿಯಲ್ಲಿ ಇರೋದಂದ್ರೆ ಹಾಸ್ಯ ಚಕ್ರವರ್ತಿ ನಟ ನರಸಿಂಹ ರಾಜು ಅವರು ಹೌದು ಜಾಗತಿಕ ಚಿತ್ರರಂಗದಲ್ಲಿ ಚಾರ್ಲಿ ಚಾಪ್ಲಿನ್ ಹೇಗೋ ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಚಕ್ರವರ್ತಿ ಎಂದೇ ಖ್ಯಾತರಾದವರು ನಟ ನರಸಿಂಹರಾಜು. ಕನ್ನಡ ಚಿತ್ರರಂಗದ ಜನಪ್ರಿಯ ನಟ. 

ಆ ಕಾಲದಲ್ಲಿಯೇ ಸ್ಟಾರ್ ಪಟ್ಟಗಿಟ್ಟಿಸಿಕೊಂಡಿದ್ದ ಹಾಸ್ಯ ನಟರಾಗಿದ್ದವರು. 50ರ ದಶಕದಿಂದ 79ರವರೆಗೆ ಸುಮಾರು 250 ಸಿನಿಮಾಗಳಲ್ಲಿ ತಿಪಟೂರು ರಾಮಾರಾಜು ನರಸಿಂಹರಾಜು ಅವರು ನಟಿಸಿ ಕನ್ನಡಿಗರ ಜನಮಾನಸದಲ್ಲಿ ಇಂದಿಗೂ ಹಾಸುಹೊಕ್ಕಾಗಿದ್ದಾರೆ. ಕೇವಲ 4 ವರ್ಷದ ಬಾಲಕನಾಗಿದ್ದಾಗಲೇ ನರಸಿಂಹರಾಜು ಅವರು ಬಾಲನಟರಾಗಿ ರಂಗಭೂಮಿ ಪ್ರವೇಶಿಸಿದ್ದರು. 

https://youtu.be/6L_1n_TKxGU

ರಂಗಭೂಮಿಯಲ್ಲಿನ ಪೌರಾಣಿಕ ಪಾತ್ರಗಳಾದ ರಾಮ, ವಿಶ್ವಾಮಿತ್ರ, ರಾವಣ, ಭರತ ಸೇರಿದಂತೆ ಬೇಡರ ಕಣ್ಣಪ್ಪ ನಾಟಕದಲ್ಲಿ ಅರ್ಚಕನ ಪುತ್ರ ಕಾಶಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ನರಸಿಂಹ ರಾಜು ಜನಪ್ರಿಯತೆ ಪಡೆದಿದ್ದರು. ಹೀಗೆ ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ, ಎಡತೊರೆಯ ಕಂಪನಿ, ಹಿರಣ್ಣಯ್ಯನವರ ಮಿತ್ರಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿಯ ಚೆನ್ನಬಸವೇಶ್ವರ ನಾಟಕ ಕಂಪನಿಯ ನಾಟಕಗಳಲ್ಲಿ ಬಣ್ಣ ಹಚ್ಚುವ ಮೂಲಕ ಸುಮಾರು 27 ವರ್ಷಗಳಷ್ಟು ಕಾಲ ರಂಗಭೂಮಿಯಲ್ಲಿಯೇ ಕಳೆದಿದ್ದರು.

ಜಾಗತಿಕ ಮಟ್ಟದಲ್ಲಿ ಚಂದ್ರಯಾನದ ಬಗ್ಗೆ ಹಾಗೂ ಚಂದ್ರನ ಮೇಲೆ ಕಾಲಿಡುವ ಬಗ್ಗೆ ವಿಶ್ವದ ಬಲಿಷ್ಠ ರಾಷ್ಟ್ರ ಅಮೇರಿಕಾಗಿಂದ ಮುಂಚೆಯೇ ಕನ್ನಡ ನಾಡಿನಲ್ಲಿ ಚಂದ್ರಯಾನದ ಆಸಕ್ತಿ ಮೂಡಿತ್ತು. ಅಮೇರಿಕಾ ನಾಸಾದ ನೀಲ್‌ ಆರ್ಮ್‌ಸ್ಟ್ರಾಂಗ್‌ಗಿಂತ ಮುಂಚೆಯೇ 1960ರಲ್ಲಿಯೇ ಇಬ್ಬರು ಕನ್ನಡಿಗರು 'ಚಂದ್ರನ ಮೇಲೆ ಕಾಲಿಟ್ಟಿದ್ದರು'. ಇನ್ನು 1960ರ ದಶಕದ ಸಿನಿಮಾದಲ್ಲಿ ಚಂದ್ರನ ಬಳಿಗೆ ಹೋಗಲು ವಿಮಾನ ಮಾದರಿಯ ರಾಕೆಟ್‌ ಸಿದ್ಧಪಡಿಸಲಾಗಿತ್ತು. 

ಅದರಲ್ಲಿ ಇಬ್ಬರು ನಟರು ಭೂಮಿಯಿಂದ ಚಂದ್ರನ ಕಡೆಗೆ ಪ್ರಯಾಣ ಮಾಡಿದ್ದರು. ಚಂದ್ರನ ಮೇಲೆ ಕಾಲಿಡುವ ವೇಳೆ ವಿಜ್ಞಾನಿ ಪ್ರತ್ಯೇಕ ವಿಮಾನ ಲಾಂಚಿಂಗ್‌ ಯಂತ್ರವನ್ನೂ ಕೂಡ ಕಂಡುಹಿಡಿದಿದ್ದರು. ಜೊತೆಗೆ, ಅಲ್ಲಿನ ವಾತಾವರಣದ ಬಗ್ಗೆಯೂ ಅಧ್ಯಯನ ಮಾಡಿ ಚಂದ್ರಯಾನ ಯಾತ್ರಿಗಳಿಗೆ ಮಾಹಿತಿ ನೀಡಿದ್ದರು.
ಚಂದ್ರನ ಬಳಿಗೆ ಹೋಗಲು ಮೀನಿನ ಮಾದರಿಯ ರಾಕೆಟ್‌ ಸಿದ್ಧಪಡಿಸಲಾಗಿತ್ತು. ಚಂದ್ರನ ಕಕ್ಷೆಯತ್ತ ರಾಕೆಟ್ ಹೋಗುವುದನ್ನು ಕೂಡ ಸೆರೆ ಹಿಡಿಯಲಾಗಿತ್ತು.

ಚಂದ್ರಯಾನ ಮಾಡುವುದಕ್ಕೆ ಮೊದಲು ಉಸಿರಾಟಕ್ಕೆ ಸಮಸ್ಯೆ ಆಗದಂತೆ ಆಕ್ಸಿಜನ್‌ ಸಿಲಿಂಡರ್‌ ಅನ್ನೂ ಕೂಡ ತಯಾರಿಸಿದ್ದರು. ಆದರೆ, ಅದು ಗಣಪತಿಯ ಮುಖದಂತೆ ಇತ್ತು ಎನ್ನುವುದು ಇನ್ನೂ ಕುತೂಹಲಕಾರಿ ಆಗಿದೆ. ಚಂದ್ರನ ಮೇಲೆ ರಾಕೆಟ್‌ ಲ್ಯಾಂಡ್‌ ಆಗಿ, ಚಂದ್ರನ ಮೇಲೆ ಕಾಲಿಟ್ಟ ಮೊದಲ ಕನ್ನಡಿಗ ನರಸಿಂಹರಾಜು ಆಗಿದ್ದಾರೆ. ಅವರು, ಚಂದ್ರನ ಮೇಲೆ ಭೂಮಿಯ ಮೇಲೆ ಸಾಮಾನ್ಯವಾಗಿ ನಿಲ್ಲುವಂತೆ ನಿಲ್ಲಲು, ನಡೆದಾಡಲು ಆಗುವುದಿಲ್ಲ ಎನ್ನುವ ಪರಿಕಲ್ಪನೆ ತಿಳಿಸಿದ್ದರು. 

ಕನ್ನಡದ ಪ್ರಖ್ಯಾತ ನಿರ್ದೇಶಕ ಬಿ.ಆರ್. ಪಂತುಲು ಅವರ ಮಕ್ಕಳ ರಾಜ್ಯ ಸಿನಿಮಾದಲ್ಲಿ. ಚಂದ್ರನ ಮೇಲೆ ಕಾಲಿಟ್ಟ ಮೊದಲ ನಟರು ನಮ್ಮ ನರಸಿಂಹರಾಜು ಮತ್ತು ಎಂ.ಎಸ್.ಉಮೇಶ್ ಆಗಿದ್ದಾರೆ. ಅದರಲ್ಲಿ ನರಸಿಂಹರಾಜು ಕಾಲವಾಗಿದ್ದರೆ, ಉಮೇಶ್‌ ಈಗಲೂ ನಮ್ಮೊಂದಿಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.