ಸಾಕ್ಷಾತ್ ಶ್ರೀರಾಮ ಅಯೋಧ್ಯೆಯಲ್ಲಿ ಇದ್ದಾಗ ಯಾವ ರೀತಿ ಇತ್ತು ಗೊತ್ತಾ, ಅನ್ಯಾ ಧರ್ಮಗಳ ಉಪಟಳ ಅವತ್ತು ಇತ್ತಾ

 | 
ರ್
ಕೋಟ್ಯಾಂತರ ಹಿಂದೂಗಳ ಕನಸು ನನಸಾಗಿದೆ. ಶತಮಾನಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಹೌದು, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದ ಉದ್ಘಾಟನೆಯಾಗಿದೆ.ಶ್ರೀರಾಮ ಪಿತೃವಾಕ್ಯ ಪರಿಪಾಲಕ, ಪ್ರಜಾನುರಾಗಿ, ಏಕಪತ್ನಿ ವೃತಸ್ಥ ಎನ್ನುವುದು ಎಲ್ಲರಿಗೂ ಗೊತ್ತು. ಹೀಗಿದ್ದಾಗ ರಾಮನ ರಾಜ್ಯದಲ್ಲಿ ಜಾತಿ ಪದ್ಧತಿ ಇತ್ತೇ? ರಾಮನ ಆಳ್ವಿಕೆಯಲ್ಲೂ ಮೇಲೂ ಕೀಳು ಎಂಬ ಜಾತಿವರ್ಗವಿತ್ತೇ? ಅಂದು ಕೆಳಸ್ತರದ ಜನರ ಜೀವನ, ಸ್ಥಾನಮಾನ ಹೇಗಿದ್ದವು? ನೋಡೋಣ ಬನ್ನಿ.
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಜಾತಿ ಪದ್ಧತಿಗಳು ಆಗಲೂ ಇದ್ದಿರಬಹುದು. ಆದರೆ ಆಗ ಯಾರನ್ನೂ ಹುಟ್ಟಿನಿಂದ ಜಾತಿ ಎಂದು ಪರಿಗಣಿಸುತ್ತಿರಲಿಲ್ಲ. ಅವರು ಪಡೆದ ವಿದ್ಯೆ, ಮಾಡುವ ಉದ್ಯೋಗ, ಅವರ ಸಂಸ್ಕಾರ ಇತ್ಯಾದಿಗಳಿಂದ ಅವರ ಜಾತಿಯನ್ನು ನಿರ್ಧಾರ ಮಾಡಲಾಗುತ್ತಿತ್ತು.ಪ್ರಾಚೀನ ಕಾಲದಲ್ಲಿ ದಲಿತರು ಅಥವಾ ಕೆಳಜಾತಿಯವರು ಎನ್ನುವುದು ಇರಲಿಲ್ಲ ಅಂತಾರೆ ಕಲವು ತಜ್ಞರು. ಆರ್ಯರು ಮತ್ತು ಅನಾರ್ಯರು ಎಂಬ ವರ್ಗ ಇತ್ತು. ಅನಾರ್ಯರು ಆರ್ಯರೊಂದಿಗೆ ಬಹಳ ಕಡಿಮೆ ಸಂಪರ್ಕವನ್ನು ಹೊಂದಿದ್ದರು ಏಕೆಂದರೆ ಅವರು ತಮ್ಮ ನಿರ್ದಿಷ್ಟ ಆಯ್ಕೆಗಳ ಪ್ರಕಾರ ವಾಸಿಸುವ ವಿಭಿನ್ನ ನೆಲೆಗಳನ್ನು ಹೊಂದಿದ್ದರು.
ಕೆಳಜಾತಿಯವರು ಅಂತ ಕರೆಯಲ್ಪಟ್ಟಿದ್ದ ಅನೇಕರು ರಾಮಾಯಣದಲ್ಲಿ ಅಥವಾ ರಾಮರಾಜ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶೇಷ ಎಂದರೆ ರಾಮಾಯಣ ಮಹಾಗ್ರಂಥ ಬರೆದಿದ್ದೇ ವಾಲ್ಮೀಕಿ ಮಹರ್ಷಿ. ಮೂಲತಃ ಅವರು ಕೆಳಜಾತಿ ವ್ಯಕ್ತಿಯಾಗಿದ್ದರು. ಮೊದಲು ಬೇಡನಾಗಿದ್ದು, ಬಳಿಕ ಬ್ರಹ್ಮಜ್ಞಾನ ಪಡೆದು ಮಹರ್ಷಿಯಾದವರು ವಾಲ್ಮೀಕಿ. ಅವರೇ ರಾಮಾಯಣ ಬರೆದರು. ವಿಶ್ವಾಮಿತ್ರರು ಹುಟ್ಟಿನಿಂದ ಕ್ಷತ್ರಿಯರಾಗಿದ್ದು, ರಾಜನೂ ಆಗಿದ್ದರು. ಆದರೆ ಬ್ರಹ್ಮಜ್ಞಾನ ಪಡೆದು ಮಹರ್ಷಿಗಳಾದರು. 
ವಿಶ್ವಾಮಿತ್ರ ಕೂಡ ಶ್ರೀರಾಮನ ಜೀವನದ ಮೇಲೆ ಆಳವಾದ ಪ್ರಭಾವ ಬೀರಿದರು. ಅವರು ಶ್ರೀರಾಮನಿಗೆ ಬಿಲ್ಲುಗಾರಿಕೆ ಮತ್ತು ಧರ್ಮಗ್ರಂಥಗಳ ಜ್ಞಾನವನ್ನು ನೀಡಿದ್ದರು. ಭಗವಾನ್ ರಾಮನನ್ನು ಪರಮ ಯೋಧನನ್ನಾಗಿ ಮಾಡುವ ಹಿಂದಿನ ವ್ಯಕ್ತಿ ವಿಶ್ವಾಮಿತ್ರರು. ಹೀಗೇ ರಾಮನ ರಾಜ್ಯದಲ್ಲೂ ಜಾತಿ ವರ್ಗವಿತ್ತು ಆದರೆ ಎಲ್ಲರೂ ಒಂದೇ ಎಂಬಂತೆ ಬದುಕುತ್ತಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.