ಹಿಂದೂ ಯುವತಿ ಸೌಜನ್ಯ ಅನ್ಯಾಯಕ್ಕೆ ಕಾಂತಾರ ಕಿಶೋರ್ ಹೇಳಿದ್ದೇನು ಗೊತ್ತಾ

ನಟ ವಿಜಯ್ ಹೇಳಿಕೆ ನೀಡಿದ ಬೆನ್ನಲ್ಲೇ ಬಹುಭಾಷಾ ನಟ ಕಿಶೋರ್ ಹೇಳಿಕೆಯೊಂದನ್ನು ನೀಡಿದ್ದಾರೆ. ಹೌದು ಸಿನಿಮಾಗಳ ಜೊತೆಗೆ ತಮ್ಮ ಕಮೆಂಟ್ಗಳ ವಿಚಾರಕ್ಕೂ ಸದಾ ಸುದ್ದಿಯಲ್ಲಿರುತ್ತಾರೆ. ರಾಜಕಾರಣಿಗಳು ಹಾಗೂ ಸಾಮಾಜಿಕ ವಿಚಾರಗಳ ಬಗ್ಗೆ ಆಗಾಗ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಆದರೆ ಇದೀಗ ಮಾತಾಡಿದ ನಟ ಕಿಶೋರ್, ಮಣಿಪುರ ಘಟನೆ ಹಾಗೂ ಸೌಜನ್ಯ ಪ್ರಕರಣದ ಬಗ್ಗೆ ಬೇಸರ ಹೊರಹಾಕಿದ್ದಾರೆ. ಸೌಜನ್ಯ ಪ್ರಕರಣದಲ್ಲಿ ತುಂಬಾ ಅನ್ಯಾಯವಾಗಿದೆ. ಏನ್ ಮಾತಾಡಬೇಕು ಗೊತ್ತಾಗಲ್ಲ. ನನ್ನ ಪ್ರಕಾರ ಇದಕ್ಕೆಲ್ಲ ಪರಿಹಾರ ಅಂದ್ರೆ ವಿದ್ಯೆ ಅನ್ಸುತ್ತೆ. ನಾವು ಪ್ರೀತಿಯ ಬೀಜ ಬಿತ್ತಬೇಕು ವಿಷದ ಬೀಜ ಬಿತ್ತಬಾರದು.
ದೊಡ್ಡ ಸಾಧನೆ ಮಾಡ್ತೀವಿ ದೊಡ್ಡ ಎಕಾನಮಿ ಅಗುತ್ತೆ ವಿಶ್ವಗುರು ಆಗ್ತೀವಿ ಅನ್ನೋದು ಸುಳ್ಳು. ಜಗತ್ತಿನಲ್ಲಿ ಎಲ್ಲರೂ ಖುಷಿಯಾಗಿದ್ರೆ ಮಾತ್ರ ನಾವು ಖುಷಿಯಾಗಿರೋದು ಎಂದು ಕಿಶೋರ್ ಹೇಳಿದ್ದಾರೆ.
ಮನುಷ್ಯರನ್ನ ಮೃಗಗಳಾಗಿ ಮಾಡುವಂತ ದ್ವೇಷ ನಮಗೆ ಬೇಕಾ? ರಾಜಕಾರಣಕ್ಕಾಗಿ ಕೆಲವರು ಏನೇನೋ ಮಾತಾಡ್ತಾರೆ. ಆದ್ರೆ ಪ್ರಜಾಪ್ರಭುತ್ವದಲ್ಲಿ ನಾವೇ ರಾಜರು ನಾವೇ ಡಿಸೈಡ್ ಮಾಡಬೇಕು. ನಾವು ನಮ್ಮ ತಲೆಯನ್ನು ಇನ್ನೊಬ್ಬರಿಗೆ ಕೊಟ್ರೆ ನಾವು ಮನುಷ್ಯರೇ ಅಲ್ಲ ಎಂದು ಕಿಶೋರ್ ಹೇಳಿದ್ದಾರೆ.
ಸೌಜನ್ಯ ವಿಚಾರದ ಬಗ್ಗೆ ತುಂಬಾ ನೋವಾಗುತ್ತೆ. ರಾಜಕೀಯದ ದಾಳಗಳಾಗಿ ಈ ರೀತಿ ನಿರಪರಾಧಿ ಶಿಕ್ಷೆ ಅನುಭವಿಸುವುದು ತುಂಬಾ ಅನ್ಯಾಯ. ಒಂದು ಜೀವ ಇನ್ನೊಂದು ಜೀವವನ್ನು ಕೊಲ್ಲೋದು ಮನುಷ್ಯತ್ವವೇ ಅಲ್ಲ ಎಂದು ನಟ ಕಿಶೋರ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.