ಚೈತ್ರ ಕುಂದಾಪುರ ಬಗ್ಗೆ ಕಾರ್ಕಳ MLA ಸುನೀಲ್ ಕುಮಾರ್ ಹೇಳಿದ್ದೇನು ಗೊತ್ತಾ, ಶಾ.ಕ್ ಆದ ಪ್ರಜೆಗಳು

 | 
Hg

 ಚೈತ್ರಾ ಕುಂದಾಪುರ ವಂಚನೆ ಕೇಸ್ ಅಲ್ಲಿ ಈಗ ಒಬ್ಬೊಬ್ಬರದೇ ಹೆಸರು ಹೊರಗೆ ಬರುತ್ತಿದೆ. ಹೌದು ಈ ಮೊದಲು ಚೈತ್ರಾ ಕುಂದಾಪುರ ಹಾಗೂ ಅವರ ಸಹಚರರ ಹೆಸರುಗಳಷ್ಟೇ ಹೊರಗೆ ಬಂದಿತ್ತು ಆದರೆ ಈಗ ಪ್ರಭಾವಿ ನಾಯಕರೊಬ್ಬರ ಸರದಿ ಹೌದು ನನಗೂ, ಚೈತ್ರಾ ಕುಂದಾಪುರ ಕೇಸ್‌ಗೂ ಯಾವುದೇ ಸಂಬಂಧ ಇಲ್ಲದ ಘಟನೆ ಇದು. ಈ ಕುರಿತಂತೆ ಯಾವ ವಿಚಾರಣೆಗೂ ನಾನು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಚೈತ್ರಾ ಆಡಿಯೋದಲ್ಲಿ ಸುನಿಲ್ ಕುಮಾರ್ ಹೆಸರು ಪ್ರಸ್ತಾಪಿಸಿರುವ ವಿಚರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಹೆಸರಿನಲ್ಲಿ ಯಾರಿಗೆ ಯಾರು ಕೂಡ ಮೋಸ ಮಾಡಬಾರದು. ಸಿಸಿಬಿ ಅಧಿಕಾರಿಗಳು ಈಗಾಗಲೇ ಬಂಧಿಸಿರುವ ಯಾರ ಮುಖ ಪರಿಚಯ ನನಗೆ ಇಲ್ಲ. ನಾನು ಯಾರ ಜೊತೆಗೆ ಕೂಡ ಮಾತಾಡಿಲ್ಲ. ಆಕಸ್ಮಿಕವಾಗಿ ಶುಭ ಸಮಾರಂಭ ಕಾರ್ಯಕ್ರಮಗಳಲ್ಲೂ ಕೂಡ ಭೇಟಿ ಆಗಿಲ್ಲ ಎಂದಿದ್ದಾರೆ.

ಬಿಜೆಪಿಯಲ್ಲಿ ಹಣದಿಂದ ಟಿಕೆಟ್ ಸಿಗುತ್ತೆ ಅನ್ನೋದು ಒಂದು ಭ್ರಮೆ. ಹಣದಿಂದ ಟಿಕೆಟ್ ಸಿಗುತ್ತಿದ್ದರೆ ನಾನು ನಾಲ್ಕು ಬಾರಿ ಗೆದ್ದು ಬರುದಕ್ಕೆ ಸಾಧ್ಯ ಆಗುತ್ತಿರಲಿಲ್ಲ. ರಾಜಕಾರಣಿಗಳ ಹೆಸರು ಹೇಳಿ ಹಣದ ದುರುಪಯೋಗ ಮಾಡುತ್ತಾರೆ ಎಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಈ ಘಟನೆಯ ತಾರ್ಕಿಕ ಅಂತ್ಯಕ್ಕೆ ಪೊಲೀಸ್ ಇಲಾಖೆ ತೆಗೆದುಕೊಂಡು ಹೋಗಬೇಕು ಎಂದು ಶಾಸಕರು ಆಗ್ರಹಿಸಿದರು.

ಘಟನೆಯ ಹಿಂದೆ ಯಾರಿದ್ದಾರೆ, ಯಾರು ದುರುಪಯೋಗ ಮಾಡುತ್ತಾರೆ ಅಂತವರನ್ನ ಸಂಪೂರ್ಣವಾಗಿ ಮಟ್ಟ ಹಾಕಬೇಕು. ರಾಜಕಾರಣಿಯ ಹೆಸರು ಹೇಳಿ ಪಕ್ಷದ ಹೆಸರು ಹೇಳಿ ಹಣ ಸಂಗ್ರಹ ಮಾಡುವುದು ಯಾವ ಪಕ್ಷಕ್ಕೂ ಶೋಭೆ ತರುವುದಿಲ್ಲ. ಈ ಘಟನೆಯೇ ಅಂತ್ಯ ಆಗಬೇಕು ಅಂತಹ ಕ್ರಮವನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕು. ನನಗೆ ಯಾವುದೇ ಸಂಬಂಧ ಇಲ್ಲದ ಘಟನೆ ಇದು ಈ ಕುರಿತಂತೆ ಯಾವ ವಿಚಾರಣೆಗೂ ನಾನು ಸಿದ್ಧನಿದ್ದೇನೆ. ಇದರ ಹಿಂದೆ ಯಾರು ಯಾರು ಫೋನ್ ಸಂಪರ್ಕ ಮಾಡಿದ್ದಾರೆ ಅಂತವರನ್ನು ಮಟ್ಟ ಹಾಕಬೇಕು ಎಂದು ತಿಳಿಸಿದ್ದಾರೆ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.