ಮಂಗಳೂರು ದಸರಾ ಕಾರ್ಯಕ್ರಮಕ್ಕೆ ಬಂದ ಹರ್ಭಜನ್ ಸಿಂಗ್, ಯಾವ ಭಾಷೆ ಮಾತನಾಡಿದ್ದಾರೆ ಗೊತ್ತಾ

 | 
Hgg

ಮಂಗಳೂರು ನಗರದಲ್ಲಿ ನಡೆದ ಭರ್ಜರಿ ಹುಲಿವೇಷ ಸ್ಪರ್ಧೆ ಯನ್ನು ನೋಡಲು ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿಯವರು ಮುಂಬೈ ಇಂದ ಆಗಮಿಸಿದ್ದರು. 
ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ‌ ಪಿಲಿನಲಿಕೆ ಕಾರ್ಯಕ್ರಮ ನಗರದ ಉರ್ವ ಮೈದಾನದಲ್ಲಿ ನಡೆಯುತ್ತಿದೆ‌. ಹರ್ಭಜನ್ ಸಿಂಗ್ ಹಾಗೂ ಸುನೀಲ್ ಶೆಟ್ಟಿ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 

ಹುಲಿವೇಷವನ್ನು ಕಂಡು ಸಂಭ್ರಮಪಟ್ಟ ಹರ್ಭಜನ್ ಸಿಂಗ್ ಹುಲಿ ಕುಣಿತವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವೇಳೆ ಹುಲಿಕುಣಿತದ ಬಗ್ಗೆ ಅವರಿಗೆ ಸುನೀಲ್ ಶೆಟ್ಟಿ ಮಾಹಿತಿ ನೀಡಿದರು. ಹರ್ಭಜನ್ ಸಿಂಗ್ ಅವರು ಬರುತ್ತಿದ್ದಂತೆ ಎದ್ದುನಿಂತು ಕರತಾಡನ ಮಾಡಿ ಪ್ರೇಕ್ಷಕರು ಮೊಬೈಲ್ ಲೈಟ್ ಆನ್ ಮಾಡಿ ಸಂಭ್ರಮ ವ್ಯಕ್ತಪಡಿಸಿದರು. 

ಒಟ್ಟು ಹತ್ತು ತಂಡಗಳ ಹುಲಿಕುಣಿತ ಸ್ಪರ್ಧೆ ನಡೆಯುತ್ತಿದ್ದು, ಎರಡು ತಂಡಗಳ ಹುಲಿಕುಣಿತ ವೀಕ್ಷಿಸಿದರು. ಹರ್ಭಜನ್ ಸಿಂಗ್ ಮಾತನಾಡಿ, ನನಗೆ ಬಹಳಷ್ಟು ಪ್ರೀತಿ ಕೊಟ್ಟಿದ್ದೀರಿ. ಈ ಪ್ರೀತಿಗೆ ನಾನೇನು ಹೇಳಬೇಕೆಂದು ಗೊತ್ತಿಲ್ಲ ಎಂದು ನೆರೆದಿರುವ ಪ್ರೇಕ್ಷಕರಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ವಿಭಿನ್ನ ಸಂಸ್ಕೃತಿಯನ್ನು ನೋಡಿ ಖುಷಿಯಾಗಿದೆ. 

ಹುಲಿವೇಷಧಾರಿಗಳ ಎನೆರ್ಜಿ ನೋಡಿ ಒಂದು ಸಲ ನಾನೇ ದಂಗಾದೆ. ಇಷ್ಟೊಂದು ಎನೆರ್ಜಿ ಇದ್ದಲ್ಲಿ ಭಾರತ ಇಪ್ಪತ್ತು ವರ್ಷಗಳ ಕಾಲ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದು ಖಂಡಿತಾ. ವರ್ಲ್ಡ್ ಕಪ್ ಕ್ರಿಕೆಟ್ ನಲ್ಲಿ ಈ ಬಾರಿ ಭಾರತಕ್ಕೆ ಗೆಲುವು ಸಿಗಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಿ ಎಂದು ಹೇಳಿದರು. ನಟ ಸುನಿಲ್ ಶೆಟ್ಟಿ ಮಾತನಾಡಿ, ಹರ್ಭಜನ್ ಸಿಂಗ್ ಇದೇ ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದಾರೆ‌. 

ಅವರು ಇಲ್ಲಿಯ ಆಹಾರವನ್ನು ಮೆಚ್ಚಿದ್ದಾರೆ. ಪಿಲಿನಲಿಕೆಯಲ್ಲಿ ಕುಣಿದ ಹುಲಿವೇಷಧಾರಿಗಳ ಆ್ಯಕ್ಷನ್ ನೋಡಿ ನನ್ನ ಮೂವತ್ತು ವರ್ಷದ ಆ್ಯಕ್ಷನ್ ಕೊಚ್ಕೊಂಡು ಹೋಗಿದೆ ಎಂದು ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.