ಮೋದಿ ದಿನಚರಿ ಹೇಗಿದೆ‌ ಗೊತ್ತಾ, ಪ್ರಧಾನಿ ತಿನ್ನುವ ಆಹಾರ ಕೇಳಿ ಬೆಚ್ಚಿಬಿದ್ದ ಭಾರತೀಯರು

 | 
Bd

ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಕಷ್ಟು ಅಭಿಮಾನಿ ಬಳಗವಿದೆ. ಅವರ ಆರೋಗ್ಯದ ಗುಟ್ಟನ್ನು ತಿಳಿದುಕೊಳ್ಳಲು ಬಯಸುವ ಸಾವಿರಾರು ಜನ ಇದ್ದಾರೆ. ಹೌದು ನಮ್ಮ ಪ್ರಧಾನಿ ಎಷ್ಟು ಗಂಟೆಗೆ ಮಲಗುತ್ತಾರೆ. ಅದೆಷ್ಟು ಗಂಟೆಗೆ ಏಳುತ್ತಾರೆ. ಹಾಗೆ ಆಹಾರವಾಗಿ ಏನೇನೆಯನ್ನು ಸೇವಿಸುತ್ತಾರೆ ಎನ್ನುವ ಕುತೂಹಲ ಬಹಳ ಜನರಲ್ಲಿದೆ.

ಮೋದಿ ಮುಂಜಾನೆ ಬೇಗ ಏಳುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಆನ್ಲೈನ್ ಮೂಲಕ ದಿನಪತ್ರಿಕೆ ಓದಿದ ಬಳಿಕ, ಯೋಗ ಮತ್ತು ಧ್ಯಾನದಲ್ಲಿ ತೊಡಗುತ್ತಾರೆ. ಬೆನ್ನು ನೋವು ಕಾಣಿಸಿಕೊಂಡಲ್ಲಿ ಅಥವಾ ಸಮಯದ ಅಭಾವವಿದ್ದಾಗ, ವಾಕಿಂಗ್ ಮಾಡುತ್ತಾರೆ. ಸರಳ ತಿಂಡಿ ತಿನಿಸುಗಳನ್ನು ಸೇವಿಸುವ ಮೋದಿಗೆ ಗುಜರಾತಿ ಊಟವೆಂದರೆ ಇಷ್ಟ. ಮುಂಜಾನೆ ತಾಜಾ ಹಣ್ಣು-ತರಕಾರಿ ಜ್ಯೂಸ್ ಸೇವಿಸುತ್ತಾರೆ. ಪೋಹಾ ಅಥವಾ ಅವಲಕ್ಕಿ ತಿಂದು ಜೀರ್ಣಶಕ್ತಿಗಾಗಿ ಒಂದು ಚಮಚದಷ್ಟು ಶುಂಠಿ-ಜೇನುತುಪ್ಪ ತೆಗೆದುಕೊಳ್ಳುತ್ತಾರೆ. 

ಹುರುಳಿಕಾಳು ಮತ್ತು ಅನ್ನದ ಕಿಚಡಿ, ಮೊಸರು, ಕಡಿ, ಚಪಾತಿ ಮತ್ತು ತರಕಾರಿ ಮೋದಿಯವರ ಊಟದ ಮೆನು. ಮೋದಿ ಅವರು ಹೊರಗಿನ ಊಟ ಮಾಡಲು ಇಷ್ಟಪಡಲ್ಲ ಹಾಗಾಗಿ ಚುನಾವಣಾ ಪ್ರಚಾರ ವೇಳೆ ಮಧ್ಯಾಹ್ನ ಊಟಕ್ಕೆ ಬಹುತೇಕ ಎಳ್ಳುನೀರು ಬಿಡುತ್ತಾರೆ ಮೋದಿ. ಪ್ರತಿ ರ್ಯಾಲಿಯಲ್ಲಿ 30 ರಿಂದ 50 ನಿಮಿಷ ಭಾಷಣ ಮಾಡುವ ಮೋದಿ ತಮ್ಮ ಧ್ವನಿಪೆಟ್ಟಿಗೆ ಕುರಿತು ವಿಶೇಷ ಕಾಳಜಿ ವಹಿಸುತ್ತಾರೆ. ಎಣ್ಣೆ ಮತ್ತು ಕರಿದ ತಿನಿಸುಗಳಿಂದ ದೂರವೇ ಇರುತ್ತಾರೆ. 

ವಿಮಾನ ಪ್ರಯಾಣದ ವೇಳೆ ಲಘು ಉಪಹಾರವಾಗಿ ಗುಜರಾತಿ ಸೇವ್ ಮತ್ತು ನಿಂಬೆ ಜ್ಯೂಸ್ ಸೇವಿಸುತ್ತಾರೆ.
ಇನ್ನು ಪ್ರಧಾನಿ ಮೋದಿ ಅವರಿಗೆ ಕಳೆದ 20 ವರ್ಷದಿಂದ ಬದ್ರಿ ಮೀನಾ ಎನ್ನುವ ವ್ಯಕ್ತಿ ಅಡುಗೆ ಮಾಡುತ್ತಿದ್ದಾನೆ. ಅವರು ಈ ವರೆಗೆ ಎಲ್ಲಿ ಕೂಡ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇವರೊಂದಿಗೆ ಅಲ್ಲಿ 10ರಿಂದ 12 ಜನ ಕೆಲಸಮಾಡುತ್ತಾರೆ. ಅವರಿಗೆ ಮೋದಿ ಆಹಾರ ಸೇವನೆ ಯ ಬಗ್ಗೆ ಎಲ್ಲವೂ ತಿಳಿದಿದೆ. ಯಾವ ಸಮಯಕ್ಕೆ ಏನು ತಿನ್ನುತ್ತಾರೆ ಎಷ್ಟು ತಿನ್ನುತ್ತಾರೆ ಅದರಂತೆ ಇವರು ಆಹಾರ ತಯಾರಿಸುತ್ತಾರೆ.

ಊಟದ ನಂತರ ತಮ್ಮ ಅತ್ಯಂತ ಆತ್ಮೀಯರಿಗೆ, ಪ್ರೀತಿಪಾತ್ರ ಕೆಲವರಿಗೆ ತಾವೇ ಕರೆ ಮಾಡಿ ಮಾತನಾಡುತ್ತಾರೆ. ಮದ್ಯರಾತ್ರಿ ವೇಳೆಗೆ ನಿದ್ದೆಗೆ ಜಾರಿದರೆ ಮತ್ತೆ ಬೆಳಗ್ಗೆ 4ಕ್ಕೆ ಏಳುವುದು. ಉಪರಾಷ್ಟ್ರಪತಿಯಾಗಿದ್ದ ವೆಂಕಯ್ಯ ನಾಯ್ಡು ಅವರು ಒಮ್ಮೆ ಹೇಳಿದಂತೆ, “ಮೋದಿಯವರು ತಾವೂ ನಿದ್ರಿಸುವುದಿಲ್ಲ, ಬೇರೆಯವರು ನಿದ್ರಿಸಲೂ ಬಿಡುವುದಿಲ್ಲ.

” ದಿನಕ್ಕೆ 4-5 ಗಂಟೆ ಮಾತ್ರ ನಿದ್ದೆ ಮಾಡುವ ಮೋದಿಯವರು ಮನಸ್ಸನ್ನು ಅತ್ಯಂತ ಉಲ್ಲಸಿತವಾಗಿಟ್ಟುಕೊಳ್ಳುವುದರಿಂದಲೇ ಒತ್ತಡವನ್ನು, ಕಡಿಮೆ ನಿದ್ರೆಯಿಂದಾಗಬಹುದಾದ ಕಿರಿಕಿರಿಯನ್ನು ಮೆಟ್ಟಿ ನಿಲ್ಲುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.