ಸ್ಪಂದನಾ ಕೊನೆಯ ಆಸೆ ಏನಾಗಿತ್ತು ಗೊತ್ತಾ, ರಾಘುಗೂ ಗೊತ್ತಿಲ್ಲದ ಸತ್ಯ ಬಿಚ್ಚಿಟ್ಟ ಸ್ನೇಹಿತೆ

 | 
ಕಿ

ಸ್ಪಂದನಾ ರಾಘುನ ಬಿಟ್ಟು ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಸ್ಪಂದನಾ ಅವ್ರದ್ದು ಸಾಯುವ ವಯಸ್ಸಲ್ಲಾ, ಅವ್ರು ಇನ್ನೂ ಬದುಕಿ ಬಾಳಬೇಕಿತ್ತು. ಹಲವಾರು ಕನಸುಗಳನ್ನ ನನಸು ಮಾಡಬೇಕಿತ್ತು. ಸ್ಪಂದನಾ ಅವರ ಕಣ್ಣುಗಳಲ್ಲಿ ಹಲವು ಕನಸುಗಳಿದ್ವು. ಆದ್ರೆ ಆ ಕನಸುಗಳು ಕೈ ಗೂಡುವ ಮುನ್ನವೇ ಸ್ಪಂದನಾ ಕಣ್ಣು ಮುಚ್ಚಿದ್ರು. ನಾಳೆಗಳನ್ನ ನೋಡಬೇಕಿದ್ದವರು. ಮಲಗಿದ ಜಾಗದಿಂದ ಏಳಲೇ ಇಲ್ಲ. 

ಮತ್ತೆ ಕಣ್ಣು ತೆರೆಯಲೇ ಇಲ್ಲ. ಅಷ್ಟಕ್ಕೂ ರಾಘುನ ರಾಗಕ್ಕಿದ್ದ ಸಣ್ಣ ಸಣ್ಣ ಕನಸುಗಳು ಏನು ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ. ಸ್ಪಂದನಾ ಸಾಕಷ್ಟು ಮಹತ್ವಕಾಂಕ್ಷೆಯನ್ನ ಹೊಂದಿದ್ರು. ಅಪ್ಪ ಪೊಲೀಸ್ ಅಧಿಕಾರಿ, ಕಲೆಗೆ ನಂಟು ಇರಲಿಲ್ಲ. ಆದ್ರೆ ಕಲಾಕುಟುಂಬಕ್ಕೆ ಸೊಸೆಯಾಗಿ ಬಂದ ಮೇಲೆ ಅವ್ರಲ್ಲಿ ಕಲೆಯ ಮೇಲಿನ ನಂಟು ಹೆಚ್ಚಾಗಿತ್ತು. ಕಲಾ ಲೋಕಕ್ಕೆ ತಮ್ಮದೇ ಆದ ಸೇವೆ ಮಾಡುವ ಮಹದಾಸೆ ಹುಟ್ಟಿತ್ತು. 

ಅದರಂತೆ ಅವ್ರದ್ದೇ ಆದ ಒಂದು ಪ್ರೊಡಕ್ಷನ್ ಹೌಸ್ ನ ಕಟ್ಟುವ, ಹಲವಾರು ಉತ್ತಮ ಸಿನಿಮಾಗಳು, ಟಿವಿ ಶೋಗಳು, ಧಾರಾವಾಹಿಗಳನ್ನ ನಿರ್ಮಿಸೋ ಆಸೆ ಸ್ಪಂದನಾ ಅವ್ರಿಗಿತ್ತು. ಆ ಮೂಲಕ ಹೊಸ ಹೊಸ ಪ್ರತಿಭೆಗಳನ್ನ ಪ್ರೋತ್ಸಾಹಿಸಬೇಕು ಎಂಬುದು ಸ್ಪಂದನಾ ಮನದಾಸೆಯಾಗಿತ್ತು. ದೊಡ್ಡ ದೊಡ್ಡ ಆಸೆಗಳು ಕನಸುಗಳು ಅಷ್ಟೇ ಅಲ್ಲ. ಸಣ್ಣ ಸಣ್ಣ ಹಲವು ಡ್ರೀಮ್ ಇತ್ತು ಸ್ಪಂದನಾಗೆ. 

ಅದರಲ್ಲಿ ಬಾಲ್ಯದ ಗೆಳತಿ ಭಾವನಾ ಬೆಳಗೆರೆ ಜೊತೆ ಗೋವಾ ಟ್ರಿಪ್ ಹೋಗುವ ಕನಸು ಸಹ ಇತ್ತಂತೆ. ಭಾವನಾ ತಮ್ಮ ತಂದೆ ರವಿ ಬೆಳಗೆರೆಯನ್ನ ಕಳೆದುಕೊಂಡು ಕುಗ್ಗಿ ಹೋಗಿದ್ರು. ಬದುಕೇ ಮುಗಿದು ಹೋಯ್ತು ಎಂಬ ಶೂನ್ಯ ಭಾವದಲ್ಲಿ ಇದ್ದಾಗ, ಬಾ ಗೋವಾ ಹೋಗೋಣ, ಒಂದಷ್ಟು ಸಮಯ ಖುಷಿಯಾಗಿ ಕಳೆದು ಬರೋಣ ಅಂತ ಸ್ಪಂದನಾ ಕರೆದಿದ್ರಂತೆ.

ಆದ್ರೆ ವಿಧಿಯಾಟ ನೋಡಿ, ಸ್ಪಂದನಾ ಜೊತೆ ಭಾವನಾ ಗೋವಾ ಟ್ರಿಪ್ ಹೋಗೋಕೆ ಆಗಲೇ ಇಲ್ಲ. ಒಂದಷ್ಟು ಖುಷಿಯ ಕ್ಷಣಗಳನ್ನ ಜೊತೆ ಕಳೆಯಲು ಆಗಲೇ ಇಲ್ಲ ಅಂದ್ಹಾಗೆ ಭಾವನಾ ಅವರ ತಂದೆ ಬೆಳಗೆರೆ ಹಾಗೂ ಸ್ಪಂದನಾ ಅವರ ತಂದೆ ಶಿವರಾಮ್ ಇಬ್ಬರು ಆತ್ಮೀಯ ಸ್ನೇಹಿತರು. ಇಬ್ಬರ ಜೊತೆ ಒಳ್ಳೆಯ ಒಡನಾಟ ಇತ್ತು. ಅದೇ ಸ್ನೇಹ ಮಕ್ಕಳಲ್ಲೂ ಮುಂದುವರೆದಿತ್ತು. ಭಾವನಾ-ಸ್ಪಂದನಾ ಕೂಡ ಆತ್ಮೀಯ ಸ್ನೇಹಿತರಾಗಿದ್ರು.

ಇನ್ನು ಇವರಿಬ್ರು ಮಾಸ್ ಲೀಡರ್ ಸಿನಿಮಾ ಶೂಟಿಂಗ್ ಗಾಗಿ ಕಾಶ್ಮೀರಕ್ಕೆ ತೆರಳಿದ್ರಂತೆ. ಆ ವೇಳೆ ಭಾವನಾ ಅವರ ಮನೆಕೆಲಸದ ಕಲಾವತಿ ಎಂಬ ಮಹಿಳೆಗಾಗಿ ಸ್ಪಂದನಾ ಸ್ಪಂದಿಸಿದ ರೀತಿ ಅನನ್ಯವಾದದ್ದಂತೆ ಸ್ಪಂದನಾ ಅವ್ರು ಪ್ರೀತಿಗೆ ವಿಶ್ವಾಸಕ್ಕೆ ಯಾವ ರೀತಿ ಬೆಲೆ ಕೊಡ್ತಾ ಇದ್ರು.. ಎಲ್ಲರೂ ಒಂದೇ ಎಂಬಂತೆ ಹೇಗೆ ನೋಡ್ತಾ ಇದ್ರು ಎಂಬುದಕ್ಕೆ ಈ ಭಾವನಾ ಹೇಳೋ ಈ ಘಟನೆ ಸಾಕ್ಷಿ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.