ಕೋಡಿಶ್ರೀ ಭವಿಷ್ಯಕ್ಕೆ ಕೇಳಿ ಬೆಚ್ಚಿಬಿದ್ದ ಭಕ್ತರು, ಸ್ವಾಮಿಗಳು ಹೇಳಿದ್ದೇನು ಗೊತ್ತಾ

 | 
Nd

ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಹೇಳುವುದರಲ್ಲಿ ಕೋಡಿ ಮಠದ ಶ್ರೀಗಳು ಸಿದ್ದ ಹಸ್ತರು. ಹೌದು ಅವರು ಹೇಳಿದಮೇಲೆ ನಡೆದೇ ತೀರುತ್ತದೆ ಎಂಬ ನಂಬಿಕೆ ಹಲವರ ಮನದಲ್ಲಿದೆ. ಇದೀಗ ಮತ್ತೊಮ್ಮೆ ಮುಂದಿನ ದಿನಗಳ ಕುರಿತು ಕೋಡಿ ಮಠದ ಶ್ರೀಗಳು ತಮ್ಮ ಕಾಲಜ್ಞಾನದಿಂದ ಭವಿಷ್ಯ ನುಡಿದಿದ್ದಾರೆ.
ಮಳೆ, ಗುಡುಗು, ಭೂಮಿ ಬಿರುಕು ಆಗುವುದು, ದ್ವೇಷಗಳು ಹೆಚ್ಚುತ್ತವೆ. 

ಅಪಮೃತ್ಯು ಎಲ್ಲಾ ನಡೆಯುತ್ತೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಭವಿಷ್ಯ ನುಡಿದಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಳೆ ಬರುತ್ತೆ ತೊಂದರೆ ಏನಿಲ್ಲ. ಹಿಂದೆ ಒಂದು ಬಾರಿ ಮಳೆ ಬಂದಂತೆ ಇನ್ನೊಂದು ಬಾರಿ ಭಾರಿ ಮಳೆ ಬರುತ್ತೆ ಎಂದು ಹೇಳಿದ್ದಾರೆ.
ಮಳೆಗೇನು ತೊಂದರೆ ಆಗಲ್ಲ, ಕಾಲ‌ ಹೇಳ್ತಿನಿ, ಅಷ್ಟೇ ಮಳೆ‌ ಬರುತ್ತೆ. ಅನ್ನಕ್ಕೆ ತೊಂದರೆ ಇಲ್ಲಾ. 

ವಿಪರೀತ ಮಳೆಯಾಗುವ ಲಕ್ಷಣ ಇದೆ, ಬೇಕಾದಷ್ಟು ಮಳೆ ಬರುತ್ತೆ. ಪ್ರಕೃತಿಯಿಂದಲೂ ಹಾನಿ ಇದೆ, ಶ್ರಾವಣದಲ್ಲೇ ಮಳೆಯ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತೆ. ಶ್ರಾವಣದ‌ ಮಧ್ಯಭಾಗದ ಮೇಲೆ ಕಾರ್ತಿಕದವರೆಗೂ ಮಳೆ ಆಗುತ್ತೆ. ಮತ್ತೆ ಮಳೆಯಿಂದ ಅಪಾಯ ಆಗುವ ಲಕ್ಷಣಗಳಿದೆ ಎಂದು ಭವಿಷ್ಯ ನುಡಿದಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಕೋಡಿ ಶ್ರೀಗಳು, ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಾ ಇದೆ, ಏನು ಆಗಲ್ಲ. ನೋಡೋರಿಲ್ಲ, ಕೇಳೋರಿಲ್ಲ, ಆನಂದ ಪಡುವವರಿಲ್ಲ. 

ರಾಜ್ಯ ಸರ್ಕಾರಕ್ಕೆ ಏನು ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಪಾರ್ಲಿಮೆಂಟ್ ಎಲೆಕ್ಷನ್‌ ಆದ್ಮೇಲೆ ತೀರ್ಮಾನ ಆಗುತ್ತೆ. ಪಾರ್ಲಿಮೆಂಟ್ ಚುನಾವಣೆ ಬಂದಾಗ ಏನಾಗುತ್ತೆ? ಯಾವ ಸರ್ಕಾರ ಬರುತ್ತೆ ಅಂತ ಹೇಳ್ತಿನಿ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.