ಗಂಡನ ದೇಹವನ್ನು ಮಣ್ಣು ಮಾಡುವ ಕೊನೆಯ ಕ್ಷಣ ಹೆಂಡತಿ ಮಾಡಿದ್ದೇನು ಗೊತ್ತಾ

 | 
Bxbx

ಎರಡು ದಿನಗಳ ಹಿಂದೆ ಕನ್ನಡ ಕಿರುತೆರೆಗೆ ದೊಡ್ಡ ಶಾಕ್ ಕಾದಿತ್ತು. ಯಾಕೆಂದರೆ ಒಂದು ಕಾಲದಲ್ಲಿ ಕಿರುತೆರೆ ಲೋಕದಲ್ಲಿ ಜನಮನ್ನಣೆ ಗಳಿಸಿದ್ದ ಧಾರವಾಹಿ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸಿದ್ದ ಸಂಪತ್ ಜಯರಾಂ ಆತ್ಮಹತ್ಯೆಗೆ  ಶರಣಾಗಿದ್ದರು. 35 ವರ್ಷದ ನಟ ದಿಢೀರನೇ ಇಂತಹ ದುಡುಕಿನ ನಿರ್ಧಾರಕ್ಕೆ ಎಲ್ಲರೂ ಮರುಗಿದ್ದರು. ಜೊತೆಗೆ ಹಲವು ಊಹಾ ಪೋಹಗಳು ಹುಟ್ಟಿ, ಇದರ ಸುತ್ತ ಅನುಮಾದ ಹುತ್ತವೂ ಎದ್ದಿತ್ತು. ಆದರೀಗ ಈ ಸಾವಿನ ಸತ್ಯ ಬಹಿರಂಗವಾಗಿದೆ. 

ಹೌದು, ಸಂಪತ್ ಜಯರಾಮ್ ಸಾವಿಗೆ ಅಸಲಿ ಕಾರಣವೇನು ಎಂಬುದನ್ನ ‘ಅಗ್ನಿಸಾಕ್ಷಿ’ ಖ್ಯಾತಿಯ ನಟ ರಾಜೇಶ್ ಧ್ರುವ ತಿಳಿಸಿದ್ದಾರೆ. ಇದರೊಂದಿಗೆ ಆಪ್ತ ಸ್ನೇಹಿತನ ಬಗ್ಗೆ ಕೆಟ್ಟ ಗಾಸಿಪ್‌ಗಳನ್ನ ಮಾಡಬೇಡಿ ಎಂದು ಮನವಿ ಮಾಡೋ ಮೂಲಕ ನೆಗೆಟಿವ್ ಸುದ್ದಿಗಳಿಗೆ ರಾಜೇಶ್ ಧ್ರುವ ಬ್ರೇಕ್ ಹಾಕಿದ್ದಾರೆ. ಅಂದಹಾಗೆ ಸಂಪತ್ ಮೂಲತಃ ಮಲೆನಾಡಿನ ಪ್ರತಿಭೆ, ಕಿರುತೆರೆ ಅಗ್ನಿಸಾಕ್ಷಿ ಸೀರಿಯಲ್ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ  ಅವರ ಅಣ್ಣನ ಪಾತ್ರದಲ್ಲಿ ಸಂಪತ್ ಮಿಂಚಿದ್ದರು. 

ನಟ ರಾಜೇಶ್ ಧ್ರುವ ಜೊತೆ ‘ಶ್ರೀ ಬಾಲಾಜಿ ಸ್ಟುಡಿಯೋ’ ಸೇರಿದಂತೆ ಹಲವು ಸೀರಿಯಲ್, ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಸಂಪತ್ ಸಾವಿನ ಬೆನ್ನಲ್ಲೇ ಸಾಕಷ್ಟು ಅಂತೆ ಕಂತೆ ಗಾಸಿಪ್‌ಗಳು ಶುರುವಾದವು. ಆದರೀಗ ಈ ಕುರಿತು ಮಾತನಾಡಿದ ಗೆಳೆಯ ರಾಜೇಶ್ ದ್ರುವ ಗಂಡ-ಹೆಂಡತಿ ನಡುವೆ ಆದ ಚಿಕ್ಕ ಜಗಳಕ್ಕೆ ನಾನು ಸತ್ತು ಹೋಗುತ್ತೀನಿ ಹಾಗೆ ಹೀಗೆ ಎಂದು ಹೆದರಿಸಿದ್ದಾನೆ ಆಗ ಕುತ್ತಿಗೆ ಲಾಕ್ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹೀಗೆ ಮಾಡಿರೋದು ಅಲ್ಲ, ಹೆದರಿಸಲು ಹೋಗಿ ಅಚಾನಕ್ ಆಗಿ ಹೀಗೆ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. 

ಇದರ ಬೆನ್ನಲ್ಲೇ ಸಂಪತ್ ಪತ್ನಿ ಚೈತನ್ಯ ತನ್ನಿಂದ ತಪ್ಪಾಯ್ತು ಬಾ ಎಂದು ಅತ್ತು ಕರೆದು ಬೇಡಿ ಕೊಂಡಿದ್ದಾರೆ. ಹೌದು ಇವರಿಬ್ಬರದು ಅನ್ಯ ಜಾತಿಯ ವಿವಾಹವಾಗಿತ್ತು.12 ವರ್ಷಗಳ ಕಾಲ ಪ್ರೀತಿಸಿ 11  ತಿಂಗಳ ಹಿಂದೆ ಮನೆಯವರನ್ನೆಲ್ಲ ಒಪ್ಪಿಸಿ ಮದುವೆಯಾಗಿದ್ದರು. ಅಲ್ಲದೇ ಚೈತನ್ಯ ಇದೀಗ 5 ತಿಂಗಳ ಗರ್ಭಿಣಿ ಕೂಡ. ಇಂತಹ ಸಮಯದಲ್ಲಿ ಹೀಗಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.