ತುಕಾಲಿ ಸಂತು ಗೆ ಏನೆಲ್ಲಾ ಸಹಾಯ ಮಾಡ್ತಿದ್ದಾರೆ ಗೊತ್ತಾ ವತೂ೯ರ್, ಇದ್ರೆ ಈ ತರಹದ ಸ್ನೇಹಿತ ಇರಬೇಕು

 | 
ರ್ಹ್ಹ

ಬಿಗ್ ಬಾಸ್‌ ಕನ್ನಡ ಸೀಸನ್ 10 ಆರಂಭವಾದ ದಿನದಿಂದಲೂ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತು ಅವರ ನಡುವೆ ಎಂಥ ಸ್ನೇಹವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಪತ್ರದ ಮೂಲಕ ಆ ಗೆಳೆತನದ ಆಳವನ್ನು ವಿವರಿಸಿದ್ದಾರೆ ತುಕಾಲಿ ಸಂತು. ಜೊತೆಗೆ ಯಾರೂ ನಿರೀಕ್ಷೆ ಮಾಡಿರದಂತಹ ಗಿಫ್ಟ್‌ವೊಂದನ್ನು ವರ್ತೂರು ಸಂತೋಷ್‌ ಅವರಿಗೆ ತುಕಾಲಿ ಸಂತು ನೀಡಿ, ಅಚ್ಚರಿ ಮೂಡಿಸಿದ್ದಾರೆ.

ಪ್ರತಿ ಬಾರಿ ಲವ್ ಸ್ಟೋರಿಗಳಿಂದ ಫೇಮಸ್ ಆಗುತ್ತಿದ್ದ ಬಿಗ್ ಬಾಸ್ ಈ ಬಾರಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಸ್ನೇಹದಿಂದ ಹೆಚ್ಚು ಜನರನ್ನು ಆಕರ್ಷಿಸಿದೆ. ಇಬ್ಬರ ನಡುವಿನ ಸ್ನೇಹಕ್ಕೆ ಜನ ಮನಸೋತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ... ಹೊರಗೆ ಹೋದ ಮೇಲೂ ಸ್ನೇಹ ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದ್ದ ಇವರು ಅದನ್ನೇ ಮಾಡುತ್ತಿದ್ದಾರೆ. ಅದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.

ಹಳ್ಳಿಕಾರ್ ಒಡೆಯ ಎಂದು ಖ್ಯಾತರಾಗಿರುವ ವರ್ತೂರು ಸಂತೋಷ್ ಮನೆಯಿಂದ ಹೊರಬಂದ ಮೇಲೆ ಸಕತ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಇತ್ತ, ತುಕಾಲಿ ಸಂತೋಷ್ ಕೂಡ ತಮ್ಮ ಕೆಲಸದಲ್ಲಿ, ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದರು. ಇಬ್ಬರು ಬೇಗ ಮೀಟ್ ಆಗಬೇಕು ಎಂದು ಅಭಿಮಾನಿಗಳು ಆಶಿಸುತ್ತಲೇ ಇದ್ದರು. ಆ ಸಂದರ್ಭ ಈಗ ಕೂಡಿಬಂದಿದೆ.

ವರ್ತೂರ್ ಸಂತೋಷ್ ಮನೆಯಲ್ಲಿ ಕಾರ್ಯಕ್ರಮವೊಂದು ನಡೆದಿದೆ. ಈ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸ್ಪರ್ಧಿಗಳೆಲ್ಲರೂ ಭಾಗಿಯಾಗಿದ್ದರು. ತನಿಷಾ, ರಕ್ಷಕ್, ಕಾರ್ತಿಕ್, ಸಂಗಿತಾ, ಇಶಾನಿ, ಮೈಕಲ್ ಅಜಯ್ ಸೇರಿದಂತೆ ಹಲವು ಮಂದಿ ವರ್ತೂರ್ ಮನೆಗೆ ಬಂದಿದ್ದರು. ಅವರಿಗೆಲ್ಲರಿಗೂ ವರ್ತೂರ್ ಸಂತೋಷ್ ಭರ್ಜರಿ ಸ್ವಾಗತ ನೀಡಿದ್ದರು. ಇದರ ಜೊತೆಗೆ ತನ್ನ ಪ್ರಾಣ ಸ್ನೇಹಿತ ತುಕಾಲಿ ಸಂತೋಷ್‌ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ತುಕಾಲಿ ಸಂತೋಷ್‌ಗೆ ಮೈಸೂರು ಪೇಟ ತೋಡಿಸಿ, ಹಾರ ಹಾಕಿ ಸನ್ಮಾನ ಮಾಡಿ ಸ್ವಾಗತಿಸಿದ ವತ್ರೂರು ಸಂತೋಷ್, ಅವರಿಗೆ ಚಿನ್ನದ ಉಡುಗೊರೆ ನೀಡಿದ್ದಾರೆ. ಚಿನ್ನದಲ್ಲಿ ಮಾಡಿಸಿ ಲಾಕೆಟ್ ಒಂದನ್ನು ವೆಲ್‌ಕಂ ಗಿಫ್ಟ್ ನೀಡಿದ್ದಾರೆ. ಗಿಫ್ಟ್ ಕಂಡು ತುಕಾಲಿ ಸಂತೋಷ್ ಭಾವುಕರಾಗಿದ್ದಾರೆ. ಅಷ್ಟೇ ಅಲ್ಲ ಇತ್ತೀಚಿಗಷ್ಟೇ ತುಕಾಲಿ ಕಾರ್ ತೆಗೆದುಕೊಂಡಿದ್ದನ್ನು ನೋಡಿ ವರ್ತೂರ್ ಸಂತೋಷ್ ಹಾಡಿ ಹೊಗಳಿದ್ದಾರೆ. ಸ್ನೇಹ ಅಂದ್ರೆ ಇದು ಎಂದು ಅಭಿಮಾನಿಗಳು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.