BJP ಜೊತೆ JDS ಮೈತ್ರಿ ಆದರೆ ಸುಮಲತಾ ಅವರ ಪರಿಸ್ಥಿತಿ ಏನಾಗುತ್ತದೆ ಗೊತ್ತಾ, ಕುಮಾರಸ್ವಾಮಿಯ ಹೊಸ ಪ್ಲಾನ್

 | 
Jd

ಬಿಜೆಪಿ ಜೊತೆ ಜೆಡಿಎಸ್ ​ಮೈತ್ರಿ ಮಾತುಕತೆ ನಡೆಯುತ್ತಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ದಳ ನಾಯಕರು ಕಣ್ಣಿದ್ದಾರೆ. ಜೆಡಿಎಸ್​ ವರಿಷ್ಠರು ಮಂಡ್ಯವನ್ನು ಬಿಟ್ಟುಕೊಡುವಂತೆ ಬಿಜೆಪಿ ಹೈಕಮಾಂಡ್​​ ಎದುರು ಪ್ರಸ್ತಾವನೆ ಇಟ್ಟಿದ್ದಾರೆ. ಒಂದು ವೇಳೆ ಬಿಜೆಪಿ ಏನಾದ್ರೂ ಮಂಡ್ಯ ಬಿಟ್ಟುಕೊಟ್ಟರೇ ಸದ್ಯದ ಕ್ಷೇತ್ರ ಸಂಸದೆ ಸುಮಲತಾ ಅಂಬರೀಶ್ ​ ಅತಂತ್ರ ಆಗುತ್ತಾರೆ ಎಂಬ ಮಾತುಗಳು ಕೇಳಿಬರತ್ತಿದೆ. 

ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮಾತನಾಡಿ ಯಾರು ಹೇಳಿದ್ದಾರೆ, ಸೀಟು ಹಂಚಿಕೆ ಬಗ್ಗೆ ಚರ್ಚೆಯೇ ಆಗಿಲ್ಲ. ಇವೆಲ್ಲವೂ ಪ್ರಾಥಮಿಕ ಅಂತ ನಾನು ಹೇಳಿದ್ದೇನೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಮೊದಲು ರಾಜ್ಯದ ರೈತರ ಸಮಸ್ಯೆ ಬಗೆಹರಿಸಬೇಕು. 

ಇದೇ ವೇಳೆ ಮೈತ್ರಿ ನಡೆದರೆ ಸುಮಲತಾ ಅಂಬರೀಶ್ ಅತಂತ್ರ ಸ್ಥಿತಿ ಎದುರಾಗುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಇದುವರೆಗೂ ಸೀಟು ಹಂಚಿಕೆಯ ಬಗ್ಗೆ ಚರ್ಚೆಯೇ ಆಗಿಲ್ಲ. ಇದೆಲ್ಲವೂ ಪ್ರಾಥಮಿಕ ಹಂತದ ಚರ್ಚೆ, ಅವರು ಅತಂತ್ರ ಆದರೂ, ಇವರು ಅತಂತ್ರ ಆದರೂ ಎಂದು ಊಹೆ ಮಾಡಿಕೊಂಡರೇ ಹೇಗೆ? ಈ ಬಗ್ಗೆ ಚರ್ಚೆಯೇ ಆಗಿಲ್ಲ. 

ನನ್ನ ರಾಜ್ಯದ ಜನರ ಸಮಸ್ಯೆ ಚರ್ಚೆ ಆಗಬೇಕು. ರೈತರು ಸಂಕಷ್ಟದಲ್ಲಿದ್ದಾರೆ, ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ರೈತರ ಬಗ್ಗೆ ನನಗೆ ಚಿಂತನೆಯಿದೆ ಎಂದು ಹೇಳಿದರು. ಇನ್ನು ಬಿಜೆಪಿ ಜೊತೆಗಿನ ಮೈತ್ರಿಗೆ ಜೆಡಿಎಸ್​ನ ಕೆಲ ಶಾಸಕರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು ಮೈತ್ರಿ ವಿಚಾರವನ್ನು ಯಾಕೆ ಇಷ್ಟೊಂದು ದೊಡ್ಡದು ಮಾಡುತ್ತಿದ್ದೀರಿ? ವೈಯಕ್ತಿಕವಾಗಿ ತಮ್ಮ ಭಾವನೆ ಹೇಳಿದ್ದಾರೆ, ಅದನ್ನು ಸರಿಪಡಿಸೋಣ. 

ಹಿಂದಿನ ಕೆಲವು ಘಟನೆಗಳಿಂದ ಹೀಗೆ ಹೇಳಿಕೊಂಡಿದ್ದಾರೆ. ಅನ್ಯಾಯ ಆಗಿದೆ ಅಂತ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ. ಈ ವಿಚಾರವನ್ನೇ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ನಮ್ಮನೆ ಮಕ್ಕಳು, ಅದನ್ನೆಲ್ಲ ಸರಿಪಡಿಸುತ್ತೇವೆ ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.