ನಟ ಧ್ರುವ ಸಜಾ೯ ಗಂಡು ಮಗುವಿನ ಜಾತಕದಲ್ಲಿ ಇರೋದು ಏನು ಗೊತ್ತಾ

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮನೆಗೆ ಗೌರಿ ಗಣೇಶ ಹಬ್ಬದ ದಿನವೇ ಹೊಸ ಅತಿಥಿಯ ಆಗಮನವಾಗಿದೆ. ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಈಗಾಗಲೇ ಸರ್ಜಾ ಕುಟುಂಬ ಆಸ್ಪತ್ರೆ ಭೇಟಿ ಕೊಟ್ಟಿದೆ. ಇದೇ ಖುಷಿಯಲ್ಲಿ ಮಾಧ್ಯಮಕ್ಕೆ ನಟ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದ ಜತೆ ಧ್ರುವ ಸರ್ಜಾ ಮಾತನಾಡಿ ʻʻತುಂಬಾ ಖುಷಿಯಾಗುತ್ತಿದೆ. ಮಗ ಹುಟ್ಟಿದ ತಕ್ಷಣ ಫೋನ್ ತೆಗೆದು ಚಿರು ನಂಬರ್‌ಗೆ ಡಯಲ್ ಮಾಡಲು ಹೋಗಿದ್ದೆ, 2 ನಿಮಿಷ ಬೇಕಾಯ್ತು ಸುಧಾರಿಸಿಕೊಳ್ಳಲುʼʼ ಎಂದು ನಟ ಧ್ರುವ ಭಾವುಕರಾಗಿದ್ದಾರೆ. ಅಷ್ಟೇ ಅಲ್ಲದೆ ಮೇಘನಾ ರಾಜ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ಚಿರು ಮನೆ ದೇವರ ಆರ್ಶೀವಾದ ಇರುವ ಮನೆ. ಮಗಳಿಗೆ ಕಣ್ಮಣಿ ಎಂದು ಹೆಸರಿಟ್ಟಿದ್ದೆ. ಈ ಮಗುವಿಗೂ ಒಂದು ಪೆಟ್ ನೇಮ್ ಇಡುತ್ತೇನೆ. ತುಂಬ ಸಂತಸವಾಗುತ್ತಿದೆ ಎಂದರು.
ಬೆಂಗಳೂರಿನ ಕೆ. ಆರ್. ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಪ್ರೇರಣಾ ಹೆರಿಯಾಗಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಧ್ರುವ ಸರ್ಜಾ ಮಾಹಿತಿ ಹಂಚಿಕೊಂಡರು.
ಪ್ರೇರಣಾ ಅವರ ಸೀಮಂತ ಸಮಾರಂಭದಲ್ಲೂ ಚಿರು ಸ್ಮರಣೆ ಮಾಡಿಕೊಳ್ಳಲಾಗಿತ್ತು. ಚಿರಂಜೀವಿ ಅವರ ಸಮಾಧಿ ಇರುವ ಫಾರ್ಮ್ ಹೌಸ್ನಲ್ಲೇ ಸೀಮಂತ ನಡೆದಿತ್ತು. ಫಾರ್ಮ್ ಹೌಸ್ ಸಿಂಗಾರಗೊಂಡಿತ್ತು. ಬಂಧು ಬಳಗದವರು ಆಗಮಿಸಿ ಪ್ರೇರಣಾಗೆ ಆಶೀರ್ವಾದ ಮಾಡಿದ್ದರು.
ಇನ್ನು ಹುಟ್ಟಿದ ಮಗುವಿನದು ಗಜಕೇಸರಿ ಯೋಗವಾಗಿರುವುದರಿಂದ ಮುಂದಿನ ದಿನಗಳಲ್ಲಿ ಕುಟುಂಬಕ್ಕೆ ಒಳ್ಳೆಯದಾಗಲಿದೆ ಎಂದು ಮೇಘನಾ ರಾಜ್ ನುಡಿದಿದ್ದಾರೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.