ಎರಡು ಮೂರು ಮದುವೆ ಮಾಡಿಕೊಂಡು ಮಕ್ಕಳು ಮಾಡಿರುವ ನಟಿಯರು ಯಾರು ಗೊತ್ತಾ

 | 
ರ್

ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾರೆ. ಮದುವೆ ಎಂದರೆ ಸಂಭ್ರಮ. ಎರಡು ಮನೆಗಳ ಮನಗಳ ಬೆಸುಗೆ. ಮೂರು ಗಂಟಿನ ಬಂಧ, ಅನುಬಂಧ. ಹಿರಿಯರ ಆಶೀರ್ವಾದ, ಅಕ್ಷತೆಯ ಆಶೀರ್ವಾದ. ಮದುವೆ ಎಂಬುದು ವೈಯಕ್ತಿಕ ವಿಷಯವಾಗಿದ್ದು, ಎಲ್ಲರಿಗೂ ತಮ್ಮ ಸಂಗಾತಿಯ ಆಯ್ಕೆ ವಿಚಾರದಲ್ಲಿ ಸಂಪೂರ್ಣ ಸ್ವತಂತ್ರವಿರುತ್ತದೆ. ಕೆಲವೊಮ್ಮೆ ಕುಟುಂಬಸ್ಥರೇ ನೋಡಿ ಮದುವೆ ಮಾಡಿದ್ದರೂ ಕಾರಾಣಾಂತರಗಳಿಂದ ಆ ಮದುವೆ ಮುರಿದು ಬೀಳುತ್ತದೆ. 

ಇನ್ನು ಕೆಲವೊಮ್ಮೆ ಪ್ರೀತಿಸಿ ಮದುವೆಯಾದ ಜೋಡಿಗಳು ಕೂಡ ಮುರಿದು ಬೀಳುತ್ತವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಚಿತ್ರರಂಗದಲ್ಲಿ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಒಬ್ಬರ ನಂತರ ಒಬ್ಬ ಸೆಲೆಬ್ರಿಟಿ ವಿಚ್ಛೇದನ ಪಡೆಯುತ್ತಿರುವ ವಿಚಾರ ಹೊರಬಂದು, ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇನ್ನೂ ಕೆಲವು ನಟ-ನಟಿಯರು ತಮ್ಮ ಜೀವನದಲ್ಲಿ ನಡೆದಂತಹ ಕಹಿ ಘಟನೆಗಳನ್ನೆಲ್ಲಾ ಮರೆತು ಬೇರೆ ಮದುವೆಯಾಗಿ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಹೀಗೆ ಕಾರಣಾಂತರಗಳಿಂದ ಒಂದಕ್ಕಿಂತ ಹೆಚ್ಚು ಮದುವೆಯಾದ ನಟಿಯರಿವರು.

ಕನ್ನಡ ಖ್ಯಾತ ನಟಿ ಅನು ಪ್ರಭಾಕರ್ 1999ರಲ್ಲಿ ಹೃದಯ ಹೃದಯ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಆನಂತರ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರು. 2002ರಲ್ಲಿ ಹಿರಿಯ ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನು ವರಿಸಿದ್ದ ಅನು ಪ್ರಭಾಕರ್, 2014ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡರು. ನಂತರ 2016ರಲ್ಲಿ ನಟ ಕಮ್ ಮಾಡೆಲ್ ರಘು ಮುಖರ್ಜಿ ಅವರನ್ನು ಮದುವೆಯಾದರು. 

ನಟಿ ಅನು ಪ್ರಭಾಕರ್ ಅವರಿಗೆ ಇದು ಎರಡನೇ ಮದುವೆಯಾದರೆ, ನಟ ರಘು ಮುಖರ್ಜಿ ಅವರಿಗೆ ಇದು ಮೂರನೇ ಮದುವೆ. ಸದ್ಯ ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಇದೆ. ನಟಿ ಸುಧಾರಾಣಿ ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ ನಟನೆ ಬಿಟ್ಟು 1996ರಲ್ಲಿ ಮದುವೆಯಾಗಿ ಅಮೇರಿಕಾ ಸೇರಿದರು. ಆದರೆ, ನಟಿ ಸುಧಾರಾಣಿಗೆ ದಾಂಪತ್ಯದ ಸುಖ ಸಿಗಲೇ ಇಲ್ಲ. ಬದಲಾಗಿ ಪತಿ ಡಾ.ಸಂಜಯ್ ಅವರಿಂದ ಪ್ರಾಣ ಬೆದರಿಕೆ ಇತ್ತು. 

1998ರಲ್ಲಿ ಅಮೇರಿಕಾದಲ್ಲಿ ಚಿತ್ರಹಿಂಸೆ ನೀಡಿದ ಡಾ.ಸಂಜಯ್ ಗೆ ವಿಚ್ಛೇದನ ನೀಡಿದ ನಟಿ ಸುಧಾರಾಣಿ, ಭಾರತಕ್ಕೆ ಮರಳಿದ ಮೇಲೆ ಹೊಸ ಜೀವನ ಆರಂಭಿಸಿದರು. ತಮ್ಮ ಕುಟುಂಬಕ್ಕೆ ತೀರಾ ಆಪ್ತರಾಗಿದ್ದ, ತಮಗೆ ಮಾನಸಿಕ ಸ್ಥೈರ್ಯ ತುಂಬಿದ್ದ ಗೋವರ್ಧನ್ ಎಂಬುವರರನ್ನ ಮದುವೆ ಆದರು. ಇವರಿಗೆ ನಿಧಿ ಎಂಬ ಮುದ್ದಾದ ಮಗಳಿದ್ದಾಳೆ. ಮನಮಿಡಿಯುವ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟಿ ಶ್ರುತಿ ಮೊದಲು ಚಿತ್ರ ನಿರ್ದೇಶಕ ಮಹೇಂದರ್ ಅವರನ್ನು ಮದುವೆಯಾಗಿದ್ದರು. ಅವರೊಂದಿಗೆ 12 ವರ್ಷ ದಾಂಪತ್ಯ ಜೀವನ ನಡೆಸಿ, ಕಾರಣಾಂತರಗಳಿಂದ ಪರಸ್ಪರ ದೂರವಾದರು. 

ಈ ದಂಪತಿಗೆ ಒಬ್ಬಳು ಮಗಳಿದ್ದಾಳೆ. ನಂತರ 2013ರಲ್ಲಿ ಹೊಳೆನರಸೀಪುರದ ಚಂದ್ರಚೂಡ ಚಕ್ರವರ್ತಿ ಅವರನ್ನು ಮದುವೆಯಾಗಿದ್ದರು. ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ ಆಳಿದ ನಟಿ ರಾಧಿಕಾ ಕುಮಾರಸ್ವಾಮಿ. ಆಟೋಶಂಕರ್​, ಹಠವಾದಿ, ನಿನಗಾಗಿ, ತವರಿಗೆ ಬಾ ತಂಗಿ ಸಿನಿಮಾಗಳ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದರು. ಎಲ್ಲರ ಮನಸ್ಸು ಗೆದ್ದಿದ್ದರು. 

ರಾಧಿಕಾ ಅವರು 14 ವರ್ಷ ಇದ್ದಾಗಲೇ ರತನ್ ಕುಮಾರ್ ಎಂಬುವವರ ಜೊತೆ ಮದುವೆಯಾಗಿತ್ತು. ಆದರೆ, 2002ರಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ನಂತರ 2006ರಲ್ಲಿ ರಾಧಿಕಾ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮದುವೆಯಾದರು. ಈ ದಂಪತಿಗೆ ಶಮಿಕಾ ಎಂಬ ಮಗಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.