ನಾನು ನಂದಿನಿ' ಹಾಡಿನ ಪಾತ್ರಧಾರಿ ಯಾರು, ಈತ ಒಂದು ವರ್ಷಕ್ಕೆ ಎಷ್ಟು ಕೋಟಿ ಆದಾಯ ಮಾಡುತ್ತಾನೆ ಗೊತ್ತಾ

 | 
Jxxj

ನಾನು ನಂದಿನಿ ಹಾಡಿನ ಮೂಲಕ ಎಲ್ಲರ ಗಮನ ಸೆಳೆದ ವಿಕಿಪೀಡಿಯ ಸೋಶಿಯಲ್ ಮೀಡಿಯಾದಲ್ಲಿ ನಂಜುಂಡಸ್ವಾಮಿ, ಮುದ್ದುಕುಮಾರ ಅಂತ ಕರೆಸಿಕೊಳ್ಳುವ ಈ ವಿಕಿಪೀಡಿಯ ಯಾರು? ಇವರು ಸೋಶಿಯಲ್ ಮೀಡಿಯಾದಲ್ಲಿ ಎಂಟರ್ಟೈನ್ಮೆಂಟ್ ಗೋಸ್ಕರ ವಿಡಿಯೋ ಮಾಡೋದರ ಹಿನ್ನೆಲೆ ಏನು? ಇವರು ಮಾಡಿರ್ತಕಂತ ಸಾಧನೆ ಏನು? ಎಲ್ಲವನ್ನು ನಾವಿವತ್ತು ತಿಳಿಸಿ ಕೊಡ್ತೀವಿ. 

ಹೌದು ಒಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ನಂದಿನಿ ಹಾಡು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಯಾಕಂದ್ರೆ ಈ ಹಾಡು ಮಿಡಲ್ ಕ್ಲಾಸ್ ಹೆಣ್ಣುಮಕ್ಕಳಿಗೆ ಸಖತ್ ಕನೆಕ್ಟ್ ಆಯಿತು. ಇನ್ನು ವಿಕಿಪೀಡಿಯ ಅನ್ನೋ ಹೆಸರಿನ ಮೂಲಕ ಕರ್ನಾಟಕದಲ್ಲಿ ಫೇಮಸ್ ಆಗಿರತಕ್ಕಂತ ಮುದ್ದು ಕುಮಾರ್ ಅವರ ಮೂಲ ಹೆಸರು ವಿಕಾಸ್ ಅಂತ, ಇವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ.

ಇನ್ನು ಇವರ ಆರಂಭಿಕ ವಿದ್ಯಾಭ್ಯಾಸ ಜವಹರಲಾಲ್ ನೆಹರು ವಿದ್ಯಾಲಯದಲ್ಲಿ ನಡೆಯುತ್ತೆ. ನಂತರ ಬೆಂಗಳೂರಿಗೆ ಬಂದವರು ಬೆಂಗಳೂರಿನ ಬಿ ಇ ಎಸ್ ಯುನಿವರ್ಸಿಟಿಯಲ್ಲಿ ಇವರು ಕಂಪ್ಯೂಟರ್ ವಿಭಾಗದಿಂದ ಪಧವಿ ಪಡೆದುಕೊಳ್ಳುತ್ತಾರೆ. ನಂತರ ಎಂಎಸಿ ಕಂಪನಿಯಲ್ಲಿ ಅವರು ಕೆಲಸವನ್ನು ಆರಂಭ ಮಾಡುತ್ತಾರೆ. ಅದಾದ ನಂತರ ದೆಹಲಿಗೆ ತೆರಳಿದ ಇವ್ರು ಅಶೋಕ ಯುನಿವರ್ಸಿಟಿಯಲ್ಲಿ ಲಿಬರಲ್ ಆರ್ಟ್ ಮೇಲೆ ಮಾಸ್ಟರ್ ಡಿಗ್ರಿ ಯನ್ನ ಪಡೆದುಕೊಳ್ಳುತ್ತಾರೆ. 

ಆರಂಭದಿಂದಲೂ ಕೂಡ ಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಇವರಿಗೆ ಓದುವಾಗ ಹಾಗೂ ಕೆಲಸ ಮಾಡುವಾಗ ರಂಗಭೂಮಿಯ ನಂಟು ಬೆಳೆಯುತ್ತೆ.
ಹೀಗಾಗಿ ಆರಂಭದಲ್ಲಿ ಸ್ಟೇಜ್ ಶೋಗಳನ್ನ ಮಾಡ್ತಿದ್ದ ವಿಕಾಸ್ ನಂತರದ ದಿನಗಳಲ್ಲಿ ಒಂದೊಂದೇ ಮೆಟ್ಟಿಲುಗಳನ್ನ ಏರ್ತಾ ಬರ್ತಾರೆ. ನಂತರ ಇವರದ್ದೇ ಒಂದು ತಂಡವನ್ನು ವಿಕಾಸ್ ಕಟ್ಟಿಕೊಳ್ಳುತ್ತಾರೆ. ಅಲ್ಲಿಂದ ಸ್ಟ್ಯಾಂಡ್ ಅಪ್ ಕಾಮಿಡಿಯನ್ನ ಮಾಡಲು ಶುರು ಮಾಡ್ತಾರೆ. 

ಸ್ಕ್ರಿಪ್ಟೆಡ್ ಕಾಮಿಡಿಗಳನ್ನು ಮಾಡ್ತಾ ದೇಶದ ನಾನಾ ಭಾಗಗಳಲ್ಲಿ ಇವ್ರು ಸ್ಟೇಜ್ ಷೋ ಗಳನ್ನ ಕೊಡ್ತಾ ಬರ್ತಾರೆ. ನಂತರ ಸೋಶಿಯಲ್ ಮೀಡಿಯಾದಲ್ಲಿ ಯಾರು ಮಾಡದೆ ಇರತಕ್ಕಂತ ಒಂದಷ್ಟು ಕಂಟೆಂಟ್ ಗಳನ್ನು ನಾವು ಜನಕ್ಕೆ ಕೊಡಬೇಕು ಅಂತ ಡಿಸೈಡ್ ಮಾಡಿ ಸೋಶಿಯಲ್ ಮೀಡಿಯಾಗೆ ಲಗ್ಗೆ ಇಡ್ತಾರೆ. ಇನ್ನು ಆನ್ ಸ್ಪಾಟ್ ಕಾಮಿಡಿ ಮಾಡುವ ಕಲೆ ಇವರಿಗೆ ಕಾರ್ಯಗತವಾಗಿದೆ. ಇನ್ನು ವಿಕಾಸ್ ಇದ್ದ ಹೆಸರು ವಿಕಿಪೀಡಿಯ ಆಗಿದ್ದು ಕೂಡ ಬಹಳ ಕುತೂಹಲಕಾರಿ. 

ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಸ್ನೇಹಿತೆಯೊಬ್ಬಳು ವಿಕಾಸ್ ಅವ್ರನ್ನ ವಿಕಿಪೀಡಿಯ ಅಂತ ಕರೀತಿದ್ರಂತೆ ಈಗ ಆ ವಿಕಿಪೀಡಿಯ ಅನ್ನೋ ಹೆಸರು ವಿಕಾಸ್ ಅವ್ರಿಗೆ ಸಖತ್ ಸೂಟ್ ಆಗ್ತಿದೆ. ಇನ್ನು ವಿಕಾಸವ್ರು ಕೆಲವೇ ವರ್ಷಗಳಲ್ಲಿ 350ಕ್ಕೂ ಅಧಿಕ ಸ್ಟೇಜ್ ಶೋ ಗಳನ್ನ ಕೊಡುವ ಮೂಲಕ ಇಡೀ ಭಾರತದದ್ಯಾಂತ ಸಾಕಷ್ಟು ಫೇಮಸ್ ಆದ್ರು ನಂತರ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಕ್ರಿಯರಾಗಿ ಜನರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಗಿದ್ದಾರೆ. 

ಸಾಧನೆಯ ಹಾದಿಯಲ್ಲಿ ಇರತಕ್ಕಂತಹ ವಿಕಾಸ ಅವರಿಗೆ ಅವರ ಕುಟುಂಬದವರಾಗಿರಬಹುದು ಸ್ನೇಹಿತರೆ ಆಗಿರಬಹುದು ಬೆನ್ನೆಲುಬಾಗಿ ನಿಂತು ಅವ್ರಿಗೆ ಸಾಕಷ್ಟು ಸಾಥ್ ಕೊಟ್ಟಿರೋದೇ ಇವರ ಸಾಧನೆಗೆ ಕಾರಣ ಅಂತ ಸಾಕಷ್ಟು ಬಾರಿ ವಿಕಾಸ್ ಅವರೇ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.