ಬಿಗ್ ಬಾಸ್ ವಿನಯ್ ಗೌಡ ಅವರ ಪತ್ನಿಯ ತಂಗಿ ಯಾರು‌ ಗೊತ್ತಾ, ಅವಳಿ ಜವಳಿ ತಂಗಿಯಂದಿರ ರಹ.ಸ್ಯ

 | 
B

ಬಿಗ್ ಬಾಸ್ ಕನ್ನಡ 10 ಶೋನಲ್ಲಿ ವಿನಯ್ ಗೌಡ ಅವರು ಪ್ರಬಲ ಸ್ಪರ್ಧಿ. ಇವರ ಆಟದ ಬಗ್ಗೆ ಪಾಸಿಟಿವ್, ನೆಗೆಟಿವ್ ಪ್ರತಿಕ್ರಿಯೆಗಳು ಎರಡೂ ಇವೆ. ವಿನಯ್ ಅವರನ್ನು ನೋಡಿದರೆ ಸಾಕ್ಷಾತ್ ಶಿವನನ್ನು ನೋಡಿದ ಹಾಗೆ ಆಗುತ್ತದೆ ಎಂದು ವಿನಯ್ ಅವರ ಪತ್ನಿ ಅಕ್ಷತಾ ಅಕ್ಕ ನಟಿ ನಿಶಿತಾ ಗೌಡ ಅವರು ಹೇಳಿದ್ದಾರೆ.

ನಟಿ ನಿಶಿತಾ ಗೌಡ ಕನ್ನಡದ ಧಾರಾವಾಹಿಗಳಲ್ಲಿ ನೆಗೆಟಿವ್ ಶೇಡ್‌ನಲ್ಲಿಯೇ ಗಮನಸೆಳೆದವರು. ಇತ್ತೀಚೆಗಷ್ಟೇ ಇವರ ಅಭಿನಯದ ರಾಮಾಚಾರಿ  ಧಾರಾವಾಹಿ  ಪ್ರಸಾರವಾಗುತ್ತದೆ. 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಇವರಿಗೆ ಬರವಣಿಗೆ ಅಂದರೆ ತುಂಬ ಇಷ್ಟ.
ಕಾದಂಬರಿ, ಸುಕನ್ಯಾ, ಬಣ್ಣ, ನಾನು ಮತ್ತು ನನ್ನ ಕನಸು, ಗೀತಾಂಜಲಿ ಮುಂತಾದ ಧಾರಾವಾಹಿಗಳಲ್ಲಿ ನಿಶಿತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಇವರು ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದವರು. 

ನಟನೆಯ ಜೊತೆಗೆ ಮಾಡೆಲಿಂಗ್ ಜಗತ್ತಿನಲ್ಲಿಯೂ ನಿಶಿತಾ ಗುರುತಿಸಿಕೊಂಡಿದ್ದಾರೆ. ಪೊಲೀಸ್ ಆಫೀಸರ್ ಮಗಳಾಗಿರುವ ನಿಶಿತಾ, ಗೀತಾಂಜಲಿ ಧಾರಾವಾಹಿಯಲ್ಲಿ ಖಡಕ್ ಆಫೀಸರ್ ಭಾರ್ಗವಿಯಾಗಿ ಎಲ್ಲರ ಗಮನಸೆಳೆದಿದ್ದರು. ಅಕ್ಕ-ತಂಗಿ, ಅಮ್ಮ ಅಂದರೆ ತುಂಬ ಇಷ್ಟಪಡುವ ನಿಶಿತಾಗೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಆಫರ್ ಬಂದಿದ್ದರೂ ಕೂಡ ಅವರು ಅಷ್ಟಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಕನ್ನಡದ ಅನೇಕ ಸ್ಟಾರ್ ನಟ-ನಟಿಯರ ಜೊತೆ ಅವರು ನಟಿಸಿದ್ದಾರೆ. 

ಪುನೀತ್ ಅಭಿನಯದ ಆಕಾಶ್ ಸಿನಿಮಾದಲ್ಲಿ ನಟಿಸುತ್ತಿರುವಾಗ ಡಾ.ರಾಜ್‌ಕುಮಾರ್ ಅವರು ನಿಶಿತಾಗೆ, ನಿನ್ನ ಕಣ್ಣು ಚೆನ್ನಾಗಿದೆಯಮ್ಮ, ಇದನ್ನು ಬಳಸಿಕೋ, ದೊಡ್ಡ ಕಲಾವಿದೆಯಾಗುತ್ತೀಯಾ' ಅಂತ ಹೇಳಿದ್ದರು ಎಂದು ನಿಶಿತಾ ಖುಷಿ ಖುಷಿಯಿಂದ ಹೇಳುತ್ತಾರೆ. ಅಲ್ಲಿವರೆಗೂ ನಿಶಿತಾ ಕಣ್ಣಿನ ಬಗ್ಗೆ ಹಲವರು ನೆಗೆಟಿವ್ ಆಗಿ ಮಾತನಾಡಿದ್ದರಂತೆ. ನಾಮಿನೇಶನ್ ವಿಚಾರ ಏನೇ ಇರಲಿ ವಿನಯ್ ಅವರು ತುಂಬ ಈಸಿಯಾಗಿ ತಗೊಂಡು ಆಡ್ತಾರೆ. ಇತ್ತೀಚೆಗೆ ಸಮಾರಂಭವೊಂದಕ್ಕೆ ಹೋದಾಗ ವಿನಯ್ ಅವರನ್ನು ಶಿವ ನೋಡಿದ ಹಾಗೆ ಆಗತ್ತೆ ಅಂತ ವಯಸ್ಸಾದ ದಂಪತಿ ಹೇಳಿದ್ದರು. ಪ್ರತಿಯೊಂದು ಸಂದರ್ಭವನ್ನು ಪ್ರಸನ್ನತೆ ಆ ಮುಖದಲ್ಲಿ ಕಾಣುತ್ತದೆ, ಕೋಪ ಬಂದಾಗ ಅಗ್ರೆಸ್ಸಿವ್ ಆಗಿ ಕಾಣುತ್ತಾರೆ. 

ಕೋಪ ಮಾಡಿಕೊಂಡಾಗ ಅಗ್ರೆಶನ್‌ಗೆ ಹೋಗೋದು ತಪ್ಪು ಅಂತ ಕೆಲವರು ಕಾಮೆಂಟ್ ಮಾಡುತ್ತಾರೆ. ಅದು ಅವರ ಅಭಿಪ್ರಾಯ. ಶಿವ ಹೇಗೆ ವಿಷಯವನ್ನು ಹ್ಯಾಂಡಲ್ ಮಾಡುತ್ತಾನೋ ಹಾಗೆ ವಿನಯ್ ಕೂಡ ಆಟ ಆಡುತ್ತಿದ್ದಾನೆ. ಬಿಗ್ ಬಾಸ್ ವಿಷಯದ ಬಗ್ಗೆ ತುಂಬ ಮಾತಾಡೋಕಿದೆ, ಆದರೆ ಮಾತಾಡೋಕೆ ಆಗಲ್ಲ. ವಿನಯ್ ಅವರಿಗೆ ಬೆಂಬಲ ನೀಡಿ ಎಂದು ವಿನಯ್ ಗೌಡ ಪರವಾಗಿ ನಿಶಿತಾ ಗೌಡ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.