ನಿನ್ನೆ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ಯಾರು ಗೊತ್ತಾ, ಪ್ರೇಕ್ಷಕರಿಗೆ ಬಾರಿ ನಿರಾಶೆ

 | 
V

ವಾರದ ಕಥೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ವಾರಪೂರ್ತಿ ಆದಂತ ತಪ್ಪುಗಳ ಬಗ್ಗೆ ಕಿಚ್ಚ ಮಾತನಾಡುತ್ತಾರೆ ಅಂತಾನೇ ಜನ ಕಾಯುತ್ತಾ ಇರುತ್ತಾರೆ. ಸುದೀಪ್ ಕೂಡ ಆ ನಿರೀಕ್ಷೆಯನ್ನು ಸಂಪೂರ್ಣ ಮಾಡುತ್ತಾ ಇದ್ದಾರೆ. ಈ ವಾರ ಒಂದಷ್ಟು ಸರಿ ತಪ್ಪುಗಳ ವಿಚಾರದ ಬಗ್ಗೆ ಮಾತನಾಡಿದರು. ಕೆಲವೊಂದಿಷ್ಟು ಮಂದಿಗೆ ತಿಳಿ ಹೇಳಿದರು.

ಮನೆ ಮಂದಿ ಸಾಕಷ್ಟು ತಪ್ಪುಗಳನ್ನು ತಿಳಿಯದೇ ಮಾಡುತ್ತಾರೆ. ಆ ತಪ್ಪನ್ನು ಕಿಚ್ಚ ತಿದ್ದುವ ಕೆಲಸ ಮಾಡುತ್ತಾರೆ. ಇನ್ನೊಂದು ನಿರೀಕ್ಷೆಯ ಎಪಿಸೋಡ್ ಅಂದ್ರೆ ಅದು ಭಾನುವಾರದ ಎಪಿಸೋಡ್. ಸೂಪರ್ ಸಂಡೇ ವಿತ್ ಸುದೀಪ ಶೋನಲ್ಲಿ ಈ ಬಾರಿ ಯಾರೂ ಹೊರಗೆ ಬರುತ್ತಾರೆ ಎಂಬ ಕುತೂಹಲವಿರುತ್ತದೆ. ಅದಕ್ಕಾಗಿಯೇ ಸಾಕಷ್ಟು ಜನ ಕಾಯುತ್ತಾ ಇರುತ್ತಾರೆ.

ಬಿಗ್ ಬಾಸ್ ಮನೆಯಲ್ಲಿ ಆಗಾಗ ಕ್ಯಾಪ್ಟನ್ ಆದವರಿಗೆ ಒಂದು ವಿಶೇಷ ಅಧಿಕಾರವೂ ಸಿಗುತ್ತದೆ. ಒಳ್ಳೆಯ ಸೌಲಭ್ಯ ಸಿಗುವುದರ ಜೊತೆಗೆ ಉತ್ತಮ ಅಧಿಕಾರವೂ ಸಿಗುತ್ತದೆ. ಅದರಲ್ಲಿ ಕ್ಯಾಪ್ಟನ್ ಆದವರು ನೇರವಾಗಿ ಒಬ್ಬರನ್ನು ನಾಮಿನೇಟ್ ಮಾಡಬಹುದು. ಈ ವಾರವೂ ಕೂಡ ಕಾರ್ತಿಕ್ ನಾಮಿನೇಟ್ ಆಗಿದ್ದರು‌. ಈ ವಿಚಾರ ಮಾತನಾಡುವಾಗ ಸುದೀಪ್ ಸ್ವಲ್ಪ ಕಾಲೆಳೆದಿದ್ದಾರೆ. 

ಯಾಕೆ ಕ್ಯಾಪ್ಟನ್ ಆದವರ ಕೆಂಗಣ್ಣಿಗೆ ನೀವೆ ಗುರಿಯಾಗುವುದು ಅಂತ. ಅದನ್ನು ಕಾರ್ತೀಕ್ ನಗು ನಗುತ್ತಲೇ ಒಪ್ಪಿಕೊಂಡಿದ್ದಾರೆ. ನಾಮಿನೇಷನ್ ಆದವರಿಗೆ ಶನಿವಾರ ಬಂತು ಅಂದರೆ ಎದೆಯಲ್ಲಿ ಢವ ಢವ ಎನ್ನುತ್ತಾ ಇರುತ್ತದೆ. ಯಾಕಂದ್ರೆ, ಯಾರು ಬೇಕಾದರೂ ಹೊರಗೆ ಹೋಗಬಹುದು ಎಂಬ ಆತಂಕ. ಅದರಲ್ಲೂ ಕಡೆಯ ವಾರದಲ್ಲಿ ಗಟ್ಟಿ ಸ್ಪರ್ಧಿ ಎಂದುಕೊಂಡಿದ್ದ ವಿನಯ್ ಅವರೇ ಕೊನೆಯಲ್ಲಿ ಎಲಿಮಿನೇಷನ್ ಸಾಲಿನಲ್ಲಿ ನಿಂತು ವಾಪಸ್ ಬಂದಿದ್ದರು. 

ಆ ಭಯದಿಂದಾನೇ ಕಾಯುತ್ತಿದ್ದ ಸ್ಪರ್ಧಿಗಳಲ್ಲಿ ಮೊದಲ ವಾರವೇ ನಮ್ರತಾ, ಕಾರ್ತಿಕ್, ತುಕಾಲಿ ಸಂತೂ ಬಚಾವ್ ಆಗಿದ್ದಾರೆ. ಮೂವರು ಈ ವಾರ ನಾಮಿನೇಷನ್‌‌ನಿಂದ ಬಚಾವ್ ಆಗಿದ್ದಾರೆ. ಇನ್ನುಳಿದಂತೆ ನೀತೂ, ಸ್ನೇಹಿತ್, ವರ್ತೂರು, ಇಶಾನಿ ನಾಮಿನೇಷನ್ ಸಾಲಿನಲ್ಲಿ ಇದ್ದರು. ಹೀಗಾಗಿ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿತ್ತು. 

ನೀತು ಅವರ ಬಿಗ್ ಬಾಸ್ ಜರ್ನಿ ಯಾರಿಗೆ ಮುಗಿಯಲಿದೆ ಎಂಬುದಾಗಿ  ಹೇಳಲಾಗ್ತಿದೆ. ಎಲ್ಲರ ಮನದಲ್ಲೂ ಬಿಗ್ ಬಾಸ್ ಮನೆಯಿಂದ ನೀತು ಹೊರಗೆ ಬರಬಹುದು ಎಂಬ ನಿರೀಕ್ಷೆ ಇದೆ. ಸುದೀಪ್ ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕ ಯಾರ ಜರ್ನಿ ಮುಗೀಯಿತು ಎಂಬುದು ಖಚಿತವಾಗುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.