ಅಂದು ಬಡಪಾಯಿ ಸಂತೋಷ್ ರಾವ್ ನಾನೇ ಆರೋಪಿ ಅಂತ ಒಪ್ಪಿಕೊಂಡಿದ್ದು ಯಾಕೆ ಗೊತ್ತಾ, ಆ ದೊಡ್ಡ ಮನುಷ್ಯ ಮಾಡಿದ್ದೇನು

 | 
ರಿ

ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು 11 ವರ್ಷಗಳ ನಂತರ ಹೊರಬಿದ್ದಿತ್ತು. ಸಿಬಿಐ ವಿಶೇಷ ನ್ಯಾಯಾಲಯ ಸೌಜನ್ಯ ಪ್ರಕರಣದ ತೀರ್ಪು ನೀಡಿದ್ದು, ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿ ಸಂತೋಷ್ ರಾವ್‌ನನ್ನು ದೋಷ ಮುಕ್ತ ಎಂದು ತೀರ್ಪು ನೀಡಿ ಬಿಡುಗಡೆಗೆ ಆದೇಶಿಸಿತ್ತು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಜನ್ಯ 2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ನಾಪತ್ತೆಯಾಗಿದ್ದಳು. ಮರುದಿನ ರಾತ್ರಿ ಮಣ್ಣಸಂಕ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರ ಎಸಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಪ್ರಕರಣ ಕರಾವಳಿ ಜಿಲ್ಲಾದ್ಯಂತ ಭಾರೀ ಸದ್ದು ಮಾಡಿತ್ತಲ್ಲದೇ ಜನರು ಸ್ವಯಂ ಪ್ರೇರಿತವಾಗಿ ಬೀದಿಗಳಿದು ಪ್ರತಿಭಟನೆಯನ್ನು ಮಾಡಿದ್ದರು. 

ಪ್ರತಿಭಟನೆ ವೇಳೆ ಸಾಕ್ಷ್ಯನಾಶಕ್ಕೆ ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಯತ್ನ ಮಾಡಿದ್ದಾರೆ ಎಂದು ಬಹಿರಂಗವಾಗಿಯೇ ಹೋರಾಟಗಾರರು ಆರೋಪ ಮಾಡಿದ್ದರು. ಅದರ ಫಲವಾಗಿ ಸಂತೋಷ್ ರಾವ್ ಅರೆಸ್ಟ್ ಆಗಿದ್ದರು. ಪೊಲೀಸರು ‘ದೊಡ್ಡವರ’ ಒತ್ತಡಕ್ಕೆ ಮಣಿದು, ಸಂತೋಷ್‌ ರಾವ್‌ ಅವರನ್ನು ತಪ್ಪಿತಸ್ಥನಾಗಿಸಿ, ನಿಜವಾದ ಅಪರಾಧಿಗಳನ್ನು ರಕ್ಷಿಸಲು ವ್ಯವಸ್ಥೆ ಮಾಡಿಕೊಂಡಿದ್ದರು. ನಿಜ ಆರೋಪಿಗಳ ವಿರುದ್ಧದ ಎಲ್ಲಾ ಸಾಕ್ಷ್ಯಗಳನ್ನು ಹಂತಹಂತವಾಗಿ ನಾಶಪಡಿಸಿದ್ದರು. 

ಸೌಜನ್ಯ ಪರವಾಗಿ ಸಾಕ್ಷ್ಯ ಹೇಳಲು ಬಂದಿದ್ದವರಲ್ಲಿ ಒಬ್ಬರು ನೇಣು ಹಾಕಿಕೊಂಡು, ಇನ್ನೊಬ್ಬರು ಬಾವಿಗೆ ಬಿದ್ದು, ಮತ್ತೊಬ್ಬರು ಅಸೌಖ್ಯದಿಂದ ನಂತರದ ದಿನಗಳಲ್ಲಿ ಸಾವನ್ನಪ್ಪಿದ್ದರು. ಇವೆಲ್ಲವೂ ಶಂಕಾಸ್ಪದ ಸಾವುಗಳೇ ಆಗಿವೆ.  ಇನ್ನು ಸಂತೋಷ ರಾವ್ ಅವರ ತಾಯಿ ಸತ್ತಾಗ ಕೂಡ ಅವರನ್ನು ನೋಡಲು ಕೂಡ ಬಿಟ್ಟಿರಲಿಲ್ಲ. ಅಲ್ಲದೆ ನೀನೇ ಆರೋಪಿ ಎಂದು ಒಪ್ಪಿಕೊ ಎಂದು ಬಲವಾಗಿ ಅವರನ್ನು ಹಿಂಸಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.